ಮಳೆಯಿಂದ ತನ್ನ ಮರಿಗಳನ್ನು ರಕ್ಷಣೆ ಮಾಡಿದ ಶ್ವಾನ ಅಮ್ಮ

ಕೋಲಾರ: ಮಳೆಯಿಂದ ಮರಿಗಳನ್ನ ರಕ್ಷಿಸಿಕೊಳ್ಳಲು ಶ್ವಾನವೊಂದು ತನ್ನ ಮರಿಗಳನ್ನ ಕಾಪಾಡುತ್ತಿರೋ ಮನಕಲಕುವ ಘಟನೆ ಜಿಲ್ಲೆಯ ನಗರದಲ್ಲಿ ನಡೆದಿದೆ.

ಕೋಲಾರ ನಗರದಲ್ಲಿ ಕಳೆದ ಅರ್ಧ ಗಂಟೆಯಿಂದ ಭರ್ಜರಿ ಮಳೆಯಾಗುತ್ತಿದ್ದು, ಹೀಗಾಗಿ ತನ್ನ ಮರಿಗಳನ್ನ ಶ್ವಾನ ಬಾಯಿಯಲ್ಲಿ ಕಚ್ಚಿಕೊಂಡು ರಕ್ಷಣೆ ಮಾಡಿದೆ. ನಗರ ಪೊಲೀಸ್ ಠಾಣೆ ಎದುರು ಶ್ವಾನ ಇತ್ತೀಚೆಗೆ ಮರಿಗಳಿಗೆ ಜನ್ಮ ನೀಡಿತ್ತು

ಮಳೆ ಇಲ್ಲದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆ ಆವರಣದಲ್ಲೆ ಆಶ್ರಯ ಪಡೆದಿದ್ದ, ಶ್ವಾನ ಇಂದು ಮುಂಜಾನೆ ಬಿದ್ದ ಮಳೆಗೆ ಮರಿಗಳನ್ನ ಸುರಕ್ಷಿತ ಸ್ಥಳಕ್ಕೆ ಸೇರಿಸುವ ಪ್ರಯತ್ನ ತಾಯಿ ಪ್ರೀತಿಗೆ ಸಾಕ್ಷಿಯಾಗಿತ್ತು. ಮಳೆಯಲ್ಲಿ ನೆನೆದುಕೊಂಡು ಮರಿಗಳನ್ನ ಬಾಯಿಯಲ್ಲಿ ಕಚ್ಚಿಕೊಂಡು ರಕ್ಷಿಸಿರುವುದು ವಿಶೇಷವಾಗಿ ಕಂಡು ಬಂದಿದೆ. ಮಳೆಯಿಂದ ನೆನೆಯುತ್ತಿದ್ದ ತನ್ನ ಮರಿಗಳನ್ನು ಗಮನಿಸಿದ ಶ್ವಾನ ಒಂದೊಂದಾಗಿ ಬಾಯಲ್ಲಿ ಕಚ್ಚಿಕೊಂಡು ಬಂದು ಮನೆಯ ಬಳಿ ಬಿಟ್ಟಿದೆ. ಬಳಿಕ ಅದು ನೆನೆದಿದ್ದ ಮರಿಗಳ ತಲೆಯನ್ನು ನೆಕ್ಕುತ್ತಾ ಹಾಲುಣಿಸಿದೆ. ಈ ಎಲ್ಲ ದೃಶ್ಯಗಳನ್ನು ಸ್ಥಳದಲ್ಲಿದ್ದವರು ತನ್ನ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.

ಭಾರತ್ ಬಂದ್‍ಗೆ ಕೋಲಾರದಲ್ಲಿ ವಿಪಕ್ಷಗಳು ಸೇರಿದಂತೆ ವಿವಿಧ ಸಂಘಟನೆಗಳು ನೀಡಿರುವ ಬಂದ್‍ಗೆ ಮಳೆರಾಯ ಕೂಡ ಸಾಥ್ ನೀಡಿದ್ದಾನೆ. ಜಿಲ್ಲೆಯ ಕೆಲವೆಡೆ ಮಳೆರಾಯನ ಆಗಮನ ರೈತರಿಗೆ ಖುಷಿ ತಂದುಕೊಟ್ಟಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರರೆಡ್ಡಿ ನೇತೃತ್ವದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ನಗರದ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ವಿವಿಧ ರಸ್ತೆಗಳಲ್ಲಿ ಎತ್ತಿನ ಗಾಡಿ ಮೂಲಕ ಪ್ರತಿಭಟನೆ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *