ಹಾಸನ: ಸಕಲೇಶಪುರದಲ್ಲಿ ಅಪಾಯಕ್ಕೆ ಸಿಲುಕ್ಕಿದ್ದ 16 ರೈಲ್ವೇ ಸಿಬ್ಬಂದಿ ರಕ್ಷಣೆಗೆ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಟ್ರಕ್ಕಿಂಗ್ ಮೂಲಕ ಸಾಗಿ ಅಪಾಯದಲ್ಲಿ ಸಿಲುಕಿದ್ದ ಸಿಬ್ಬಂದಿಯನ್ನು ರಕ್ಷಣೆ ಮಾಡಲಾಗಿದೆ.
ಸಕಲೇಶಪುರ ಎಸಿ ನೇತೃತ್ವದ ತಂಡ ಟ್ರೆಕ್ಕಿಂಗ್ ಪರಿಣಿತರೊಂದಿಗೆ ನಡೆದು ಹೋಗಿ ಎಡಕುಮರಿ ಬಳಿ ಗುಡ್ಡ ಕುಸಿದಿಂದ ಸಿಲುಕಿದ್ದ ರೈಲ್ವೇ ಸಿಬ್ಬಂದಿಯನ್ನು ರಕ್ಷಿಸಿ ಪಟ್ಟಣಕ್ಕೆ ಕರೆತಂದಿದ್ದಾರೆ. ಅಪಾಯದಲ್ಲಿ ಸಿಲುಕಿದ್ದ 16 ಮಂದಿ ಸಿಬ್ಬಂದಿಯ ಆರೋಗ್ಯ ಉತ್ತಮವಾಗಿದ್ದು, ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಸಕಲೇಶಪುರ ಉಪವಿಭಾಧಿಕಾರಿ ಲಕ್ಷ್ಮಿಕಾಂತರೆಡ್ಡಿ ತಿಳಿಸಿದ್ದಾರೆ.

ಬೆಂಗಳೂರು- ಮಂಗಳೂರು ಸಂಪರ್ಕದ ರೈಲು ಮಾರ್ಗದಲ್ಲಿ ಸಿಲುಕಿರುವ ಎಲ್ಲಾ ಸಿಬ್ಬಂದಿಗಳನ್ನು ರಕ್ಷಿಸಲು ತಂಡ ಕಾಗಿನೆರಿ ಮೂಲಕ ತೆರಳಿದ್ದರು. ಈ ಮೊದಲು ಸಿಬ್ಬಂದಿಯನ್ನು ಹೆಲಿಕಾಪ್ಟರ್ ಕಾರ್ಯಾಚರಣೆ ನಡೆಸಿ ರಕ್ಷಿಸಲು ಉದ್ದೇಶಿಸಲಾಗಿತ್ತು. ಆದರೆ ಹೆಲಿಕಾಪ್ಟರ್ ಕಾರ್ಯಾಚರಣೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಟ್ರಕ್ಕಿಂಗ್ ಮಾರ್ಗದ ಮೂಲಕ ತೆರಳಿ ಸಿಬಂದಿ ರಕ್ಷಣೆ ಮಾಡಲಾಗಿದೆ. ಕಾರ್ಯಾಚರಣೆಯಲ್ಲಿ ತಹಸೀಲ್ದಾರ್, ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಉಪವಿಭಾಗಾಧಿಕಾರಿಗಳು ಭಾಗವಹಿಸಿದ್ದರು. ಸದ್ಯ ಎಲ್ಲಾ ರಕ್ಷಿಸಲಾದ ಎಲ್ಲಾ ಸಿಬ್ಬಂದಿಯನ್ನು ಸಕಲೇಶಪುರ ಪಟ್ಟಣಕ್ಕೆ ಕರೆದ್ಯೊಯಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv


Leave a Reply