`ಅಪರೇಷನ್ ಕಮಲ’ದ ಆಡಿಯೋ ಪ್ರಕರಣ – ಬಿಎಸ್‍ವೈ ಡೀಲ್ ಮಾತಾಡಿದ್ದ ಕೋಣೆಯಲ್ಲಿ ಶೋಧ

ರಾಯಚೂರು: ಜಿಲ್ಲೆಯ ದೇವದುರ್ಗದ ಪ್ರವಾಸಿ ಮಂದಿರದಲ್ಲಿ ನಡೆದಿದ್ದ `ಆಪರೇಷನ್ ಕಮಲ’ ಆಡಿಯೋ ಸ್ಫೋಟ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹಾಗೂ ಇಬ್ಬರು ಬಿಜೆಪಿ ಶಾಸಕರ ವಿರುದ್ಧ ತನಿಖೆ ಶುರುವಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಶಾಸಕ ಶಿವನಗೌಡ ನಾಯಕ್ ಸೇರಿ ನಾಲ್ಕು ಜನರ ವಿರುದ್ಧ ದಾಖಲಾದ ಪ್ರಕರಣದ ತನಿಖೆಯನ್ನ ರಾಯಚೂರು ಡಿವೈಎಸ್ ಪಿ ಹರೀಶ್ ಗೆ ಒಪ್ಪಿಸಲಾಗಿದೆ. ತನಿಖೆ ಆರಂಭವಾಗಿದ್ದು ಮಾಹಿತಿ ಕಲೆ ಹಾಕುತ್ತಿದ್ದಾರೆ.

ದೇವದುರ್ಗ ಪ್ರವಾಸಿ ಮಂದಿರದಲ್ಲಿ ಮಹಜರ್ ಮಾಡಿರುವ ಪೊಲೀಸರು ಘಟನೆ ನಡೆದ ಕೋಣೆ, ಸ್ಥಳದ ಅಳತೆ ತೆಗೆದುಕೊಂಡಿದ್ದಾರೆ. ದೂರುದಾರ ಶರಣಗೌಡ ಕಂದಕೂರನ್ನ ಕರೆಯಿಸಿ ಮಾಹಿತಿ ಕಲೆ ಹಾಕಿದ್ದು ಹೇಳಿಕೆಗಳನ್ನ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ.

ಫೆಬ್ರವರಿ 13ರಂದು ಪುತ್ರ ಶರಣಗೌಡ ಮೂಲಕ ಗುರುಮಿಟ್ಕಲ್ ಜೆಡಿಎಸ್ ಶಾಸಕ ನಾಗನಗೌಡಗೆ ಆಫರ್ ಕೊಟ್ಟಿದ್ದ ಸಂಬಂಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಭ್ರಷ್ಟಾಚಾರ ತಡೆಗಟ್ಟುವಿಕೆ ಕಾಯ್ದೆಯಡಿ ಎಫ್ ಐಆರ್ ದಾಖಲಾಗಿತ್ತು. ಐಪಿಸಿ- 1860, ಯು/ಎಸ್- 120ಬಿ, 504, 34 ಕಲಂ ಅಡಿ ಪ್ರಕರಣ ದಾಖಲಾಗಿತ್ತು.

ಕೇಸ್‍ನಲ್ಲಿ ಯಡಿಯೂರಪ್ಪ ಮೊದಲ ಆರೋಪಿಯಾಗಿದ್ದು, ಬಿಜೆಪಿ ಶಾಸಕರಾದ ಶಿವನಗೌಡನಾಯಕ್, ಪ್ರೀತಂಗೌಡ ನಾಯಕ್ 2 ಮತ್ತು 3ನೇ ಆರೋಪಿಯಾಗಿದ್ದಾರೆ. ಬಂಧನ ಭೀತಿಯಲ್ಲಿದ್ದ ಬಿಎಸ್‍ವೈ ಈಗಾಗ್ಲೇ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *