– ಬಂಧಿತರಿಂದ 5, 62, 550ರೂ. ಮೌಲ್ಯದ ವಸ್ತುಗಳು ಜಪ್ತಿ
ರಾಯಚೂರು: ಹಲವು ಪ್ರಕರಣಗಳಲ್ಲಿ ಬೇಕಿದ್ದ ಕುಖ್ಯಾತ ಡಕಾಯಿತರನ್ನು ರಾಯಚೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಬಂಧಿತರನ್ನು ಕಲಬುರಗಿ ಮೂಲದವರಾದ ಮಲ್ಲು, ರವಿ, ಯಲ್ಲಾಲಿಂಗ, ಹನುಮಂತ, ಶಾಮ್ ಸಿಂಗ್ ಮತ್ತು ಗಿಡ್ಯಾ ಅಲಿಯಾಸ್ ಸರ್ಪುದ್ದಿನ್ ಎಂದು ಗುರುತಿಸಲಾಗಿದೆ. ಬಂಧಿತರಿಂದ 196 ಗ್ರಾಂ. ಚಿನ್ನ, 500 ಗ್ರಾಂ, ಬೆಳ್ಳಿ ಸೇರಿದಂತೆ ಸುಮಾರು 5 ಲಕ್ಷ 62 ಸಾವಿರ 550 ರೂ. ಮೌಲ್ಯದ ವಸ್ತುಗಳು ಜಪ್ತಿ ಮಾಡಲಾಗಿದೆ.

ಖದೀಮರು ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಶಕ್ತಿನಗರದಲ್ಲಿ ತಮ್ಮ ಕೈಚಳಕ ತೋರಿದ್ದರು. ಡಕಾಯಿತಿ ಹಾಗು ಹೊಂಚು ಹಾಕಿ ಮನೆ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಖದೀಮರನ್ನು ಬಂಧಿಸಲು ವಿಶೇಷ ಪೊಲೀಸ್ ಅಧಿಕಾರಿಗಳ ತಂಡ ರಚಿಸಲಾಗಿತ್ತು.
ಇದೀಗ ಈ ವಿಶೇಷ ತಂಡ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳು ಹಾಗೂ ಕ್ರೂಸರ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Leave a Reply