ರಾಯಚೂರು: ಜಿಲ್ಲೆಯಲ್ಲಿ ಭಾರೀ ಆತಂಕ ಸೃಷ್ಟಿಸಿದ್ದ ಚಡ್ಡಿ ಗ್ಯಾಂಗ್ ಬೆನ್ನಲ್ಲೇ, ಕಳ್ಳರ ತಂಡವೊಂದು ನಗರದಲ್ಲಿ ಸರಣಿ ಕಳ್ಳತನ ಮೂಲಕ ತಮ್ಮ ಕೈಚಳಕ ತೋರಿಸಿದ್ದಾರೆ. ಈ ಬಾರಿ ಫ್ಯಾಕ್ಟರಿ, ಮಾರ್ಬಲ್ಸ್ ಅಂಗಡಿ ಸೇರಿದಂತೆ ಶೋ ರೂಮ್‍ಗೆ ನುಗ್ಗಿ 21.46 ಲಕ್ಷ ರೂ. ನಗದು ಎಗರಿಸಿ ಪರಾರಿಯಾಗಿದ್ದಾರೆ.
ನಗರದ ಹೈದ್ರಾಬಾದ್ ರಸ್ತೆ ಬದಿಯ ಅಂಗಡಿಯಲ್ಲಿ ಕಳ್ಳರು ಕೃತ್ಯ ಎಸಗಿದ್ದಾರೆ. ಕಳ್ಳರ ಕೃತ್ಯ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಕಳ್ಳರ ಹುಡುಕಾಟಕ್ಕೆ ಕಾರ್ಯಾಚರಣೆ ನಡೆಸಿದ್ದಾರೆ. ಇದನ್ನು ಓದಿ: ರಾಯಚೂರಿನಲ್ಲಿ ಚಡ್ಡಿ ಗ್ಯಾಂಗ್ ಹಾವಳಿ
ಎಲ್ಲೆಲ್ಲಿ ಎಷ್ಟು ಹಣ?:
ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಲಕ್ಷ್ಮಿ ವೆಂಕಟೇಶ್ವರ ಜಿನ್ನಿಂಗ್ ಫ್ಯಾಕ್ಟರಿ ಬೀಗ ಒಡೆದು 20 ಲಕ್ಷ ರೂ. ದೋಚಿದ್ದಾರೆ. ಬಳಿಕ ರಂಗನಾಥ್ ಮಾರ್ಬಲ್ಸ್ ಅಂಗಡಿಯಲ್ಲಿ 1.46 ಲಕ್ಷ ರೂ. ಕಳ್ಳತನ ಮಾಡಿದ್ದಾರೆ. ಹೊಂಡಾ ಕಾರ್ ಶೋ ರೂಮ್‍ಗೆ ನುಗ್ಗಿದ್ದ ಕಳ್ಳರಿಗೆ ಹಣ ಸಿಗದೆ ಕಾಲ್ಕಿತ್ತಿದ್ದಾರೆ.

ಹೊಂಡಾ ಕಾರ್ ರೂಮ್ ನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳರ ಕೈಚಳ ಸೆರೆಯಾಗಿದೆ. ಕಳ್ಳರ ಕೃತ್ಯವು ಬೆಳಗ್ಗೆ ಶೋ ರೂಮ್ ಸಿಬ್ಬಂದಿ ಗಮನಕ್ಕೆ ಬಂದಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಮಾರ್ಕೆಟ್ ಯಾರ್ಡ್ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಜಿಲ್ಲೆಯಲ್ಲಿ ಸರಣಿ ಕಳ್ಳತನ ಇನ್ನೂ ಮುಂದುವರಿದಿದೆ. ಈ ಬಾರಿ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ಕಡೆಗಳಲ್ಲಿ ಕಳ್ಳರು ಕೈಚಳಕ ತೊರಿಸಿದ್ದಾರೆ. ಕಳ್ಳರ ಹಾವಳಿಯಿಂದಾಗಿ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://youtu.be/q36iDx35aeY

Leave a Reply