ಮಳೆಗಾಗಿ ಜನರ ಜೊತೆ ಮೆರವಣಿಗೆ ಹೋಗಿ ಮಂಗನ ಪ್ರಾರ್ಥನೆ

ರಾಯಚೂರು: ರಾಜ್ಯದಲ್ಲಿ ಬರಗಾಲ ಇರುವುದರಿಂದ ಜನರು ದೇವರ ಮೋರೆ ಹೋಗುತ್ತಿದ್ದಾರೆ. ಈಗ ರಾಯಚೂರಿನ ಜನರು ಮಳೆಗಾಗಿ ದೇವರ ಮೋರೆ ಹೋಗಿದ್ದು, ಇದರಲ್ಲಿ ಮಂಗವೊಂದು ಭಾಗವಹಿಸಿ ಮಳೆಗಾಗಿ ಪ್ರಾರ್ಥನೆ ಮಾಡಿದೆ.

ರಾಯಚೂರಿನ ಮಾನ್ವಿಯ ಆದಾಪುರದ ಜನರು ಮಳೆಗಾಗಿ ಮಣ್ಣೆತ್ತಿನ ಅಮವಾಸೆ ಪ್ರಯುಕ್ತ ಎತ್ತಿನ ಗಾಡಿಯ ಮೇಲೆ ಕಾಮಧೇನುವಿನ ಮೆರವಣಿಗೆ ಮಾಡುತ್ತಿದ್ದರು. ಈ ಮೆರವಣೆಗೆಯಲ್ಲಿ ಮಂಗವೊಂದು ಭಾಗವಹಿಸಿ ಮಳೆಗಾಗಿ ದೇವರಲ್ಲಿ ಪ್ರಾರ್ಥನೆ ಮಾಡಿದೆ.

ಮಂಗಳವಾರ ಅಮವಾಸೆ ಇದ್ದ ಕಾರಣ ಇಂದು ಎತ್ತಿನ ಗಾಡಿಯಲ್ಲಿ ಕಾಮಧೇನುವಿನ ಮೆರವಣಿಗೆ ಮಾಡಲಾಯಿತು. ಈ ಮೆರವಣೆಗೆಯಲ್ಲಿ ಸಾವಿರಾರು ಜನ ಭಾಗವಹಿಸಿದ್ದರು. ಇದರ ಜೊತೆಗೆ ತಮಟೆ ಡೊಳ್ಳು ಶಬ್ದದ ಮಧ್ಯೆಯಲ್ಲೂ ಸುಮಾರು 3 ಕಿಲೋ ಮೀಟರ್ ಮೆರವಣಿಗೆಯಲ್ಲಿ ಸಾಗಿದ ಮಂಗ ಜನರ ಜೊತೆ ಮಳೆಗಾಗಿ ದೇವರನ್ನು ಪ್ರಾರ್ಥನೆ ಮಾಡಿತು.

Comments

Leave a Reply

Your email address will not be published. Required fields are marked *