ರಾಯಚೂರು: ಗಣರಾಜ್ಯೋತ್ಸವ ಹಿನ್ನೆಲೆ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ 5 ಲಕ್ಷ ಸಸಿ ನೆಡುವ ಕಾರ್ಯಕ್ರಮ ಮೂಲಕ ಪರಿಸರ ಪ್ರೇಮ ಮೆರೆದಿದ್ದಾರೆ. ಜಿಲ್ಲಾ ಪೊಲೀಸ್ ಮೈದಾನದಲ್ಲಿ ನಡೆದ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಚಾಲನೆ ನೀಡಿದರು.
ಮನೆ, ಹೋಟೆಲ್ ಗಳಲ್ಲಿ ಬಳಸಿ ಬೀಸಾಡುವ ಹಾಲು, ಅಡುಗೆ ಎಣ್ಣೆ ಪ್ಯಾಕೆಟ್ ಗಳನ್ನ ಬಳಸಿ ವಿವಿಧ ಹಣ್ಣು, ಹೂವಿನ ಗಿಡಗಳ ಬೀಜಗಳನ್ನ ಹಾಕಿ ಪೊಲೀಸ್ ಇಲಾಖೆ ಸ್ಥಳದಲ್ಲೇ ನರ್ಸರಿ ಆರಂಭಿಸಿದ್ದಾರೆ. ಐದು ಲಕ್ಷ ಸಸಿಗಳು ಬೆಳೆದ ನಂತರ ಜಿಲ್ಲೆಯಾದ್ಯಂತ ಸಸಿಗಳನ್ನ ವಿತರಣೆ ಮಾಡುವ ಯೋಜನೆ ಇದೆ.

ಬಿಸಿಲೂರು ಅಂತಲೇ ಕರೆಯಿಸಿಕೊಳ್ಳುವ ರಾಯಚೂರನ್ನ ಹಸಿರೂರು ಮಾಡಬೇಕೆನ್ನುವ ಉದ್ದೇಶದಿಂದ ಐದುಲಕ್ಷ ಸಸಿಗಳನ್ನ ಬೆಳೆಸಿ ವಿತರಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಹಸಿರುಯುಕ್ತ ,ಪ್ಲಾಸ್ಟಿಕ್ ಮುಕ್ತ ರಾಯಚೂರು ನಿರ್ಮಾಣಕ್ಕೆ ಪೊಲೀಸ್ ಸಿಬ್ಬಂದಿ, ನಗರದ ವಿವಿಧ ಸಂಘಟನೆಗಳು ವಿದ್ಯಾರ್ಥಿಗಳು ಹಾಗೂ ನಗರಸಭೆ ಕೈಜೋಡಿಸಿದೆ.

Leave a Reply