ಪೊಲೀಸ್ ಪಥಸಂಚಲನ – ಆರತಿ ಬೆಳಗಿ ಶುಭಕೋರಿದ ಜನ

ರಾಯಚೂರು: ಕೊರೊನಾ ಸೋಂಕು ತಡೆಗಾಗಿ ಜಾಗೃತಿ ಮೂಡಿಸಲು ನಗರದಲ್ಲಿ ಜಿಲ್ಲಾ ಪೊಲೀಸರು ಪಥ ಸಂಚಲನ ನಡೆಸಿದರು. ನಗರದ ಪಟೇಲ್ ವೃತ್ತದಿಂದ ವಿವಿಧ ರಸ್ತೆಗಳಲ್ಲಿ ಜಾಗೃತಿ ಪಥ ಸಂಚಲನ ನಡೆಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ ವೇದಮೂರ್ತಿ ಪಥಸಂಚಲನಕ್ಕೆ ಚಾಲನೆ ನೀಡಿದರು.

ಈ ವೇಳೆ ಕೊರೊನಾ ತಡೆಗಾಗಿ ಮುತುವರ್ಜಿ ವಹಿಸುತ್ತಿರುವ ಪೊಲೀಸರಿಗೆ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಆರತಿ ಬೆಳಗಿ ಹೂವಿನ ಹಾರ ಹಾಕುವ ಮೂಲಕ ಇಲಾಖೆಗೆ ಶುಭ ಕೋರಿದರು. ರಸ್ತೆಯಲ್ಲಿ ಸಾರ್ವಜನಿಕರು ಚಪ್ಪಾಳೆ ತಟ್ಟುವ ಮೂಲಕ ಪೊಲೀಸರಿಗೆ ಶುಭ ಹಾರೈಸಿದರು. ಜಿಲ್ಲೆಯಲ್ಲಿ ಹೆಚ್ಚು ಭದ್ರತೆ ಒದಗಿಸಿ ಕೊರೊನಾ ವಿರುದ್ಧ ಹೋರಾಡುತ್ತಿರುವುಕ್ಕೆ ಧನ್ಯವಾದ ತಿಳಿಸಿದರು.

ರಾಯಚೂರು ಜಿಲ್ಲೆ ಗ್ರೀನ್ ಝೋನ್‍ನಲ್ಲಿದ್ದರೂ ಬಿಗಿ ಬಂದೋಬಸ್ತ್ ಮೂಲಕ ಕಠಿಣ ಲಾಕ್‍ಡೌನ್ ಮಾಡಲಾಗಿದೆ. ನಗರ, ಪಟ್ಟಣಗಳ ಬಡಾವಣೆಗಳಲ್ಲಿ ಎಲ್ಲಾ ಸೌಲಭ್ಯಗಳನ್ನ ಒದಗಿಸಿ ಸೀಲ್‍ಡೌನ್ ಮಾಡಲಾಗಿದೆ. ಅಲ್ಲದೇ ಅಕ್ಕಪಕ್ಕದ ಜಿಲ್ಲೆಗಳ ಜನ ಕೂಡ ಜಿಲ್ಲೆಗೆ ಬರದಂತೆ ಎಚ್ಚರವಹಿಸಲಾಗಿದೆ.

Comments

Leave a Reply

Your email address will not be published. Required fields are marked *