ರಾಯಚೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆ ರಾಯರ ಸನ್ನಿಧಿ ಮಂತ್ರಾಲಯದಲ್ಲಿ ದರ್ಶನ ವ್ಯವಸ್ಥೆಯ ಬಗ್ಗೆ ಭಕ್ತರಿಗಿದ್ದ ಗೊಂದಲಕ್ಕೆ ಇಂದು ತೆರೆಬಿದ್ದಿದೆ.
ಮಂತ್ರಾಲಯ ಮಠದ ಮಹಾದ್ವಾರವನ್ನ ಮುಚ್ಚುವ ಮೂಲಕ ದರ್ಶನ ಸಂಪೂರ್ಣ ನಿಷೇಧಿಸಲಾಗಿದೆ. ಇಂದು ಬೆಳಗ್ಗೆ ಭಕ್ತರಿಗೆ ಸ್ವಲ್ಪ ಸಮಯ ದರ್ಶನಕ್ಕೆ ಅವಕಾಶ ನೀಡಿ ಮಹಾದ್ವಾರ ಬಂದ್ ಮಾಡಲಾಗಿದೆ. ಹೀಗಾಗಿ ದೂರದಿಂದ ಬರುವ ಭಕ್ತರಿಗೆ ರಾಯರ ದರ್ಶನ, ಪ್ರಸಾದ ಸಂಪೂರ್ಣ ನಿರ್ಬಂಧಿಸಲಾಗಿದೆ.

ಮಠದ ವಸತಿ ಸಮುಚ್ಚಯ ಹಾಗೂ ಖಾಸಗಿ ಲಾಡ್ಜ್ ಗಳು ಖಾಲಿ ಹೊಡೆಯುತ್ತಿವೆ. ಹೊಸದಾಗಿ ರೂಂ. ಬುಕ್ಕಿಂಗ್ ಸಹ ನಿಲ್ಲಿಸಲಾಗಿದೆ. ಆಂಧ್ರಪ್ರದೇಶದ ಸರ್ಕಾರದ ಸೂಚನೆಯಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮಂತ್ರಾಲಯ ಸದ್ಯ ಸ್ಥಬ್ಧವಾಗಿದೆ.
2009ರ ಮಹಾ ಪ್ರವಾಹದ ಸಂದರ್ಭದಲ್ಲಿ ಮಠದ ಮಹಾದ್ವಾರ ಬಂದ್ ಮಾಡಲಾಗಿತ್ತು. ಅದಾದ ಬಳಿಕ ಇದೇ ಮೊದಲಬಾರಿಗೆ ಮಹಾದ್ವಾರ ಬಂದ್ ಮಾಡಲಾಗಿದೆ.


Leave a Reply