ಮಂತ್ರಾಲಯ ಶ್ರೀಗಳ ಅಧ್ಯಕ್ಷತೆಯಲ್ಲಿ ರಾಯಚೂರಿನಲ್ಲಿ ದಾಸಸಾಹಿತ್ಯ ಸಮ್ಮೇಳನ

ರಾಯಚೂರು: ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥ ಸ್ವಾಮಿ ಅಧ್ಯಕ್ಷತೆಯಲ್ಲಿ ರಾಯಚೂರಿನಲ್ಲಿ ಇಂದಿನಿಂದ ಮೂರು ದಿನಕಾಲ ದಾಸಸಾಹಿತ್ಯ ಸಮ್ಮೇಳನ ನಡೆಯಲಿದೆ.

ಜವಾಹರ ನಗರದ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ವಿವಿಧ ಮಠಗಳ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಮಂತ್ರಾಲಯದ ಸಂಸ್ಕೃತ ಪಾಠ ಶಾಲೆಯಲ್ಲಿ ಸತತ ಎರಡು ವರ್ಷ ಕಾಲ ಹೇಳಿದ 25 ಟಿಪ್ಪಣಿಗಳ ಶ್ರೀಮನ್ನ್ಯಾಯಸುಧಾ ಗ್ರಂಥದ ಮಂಗಳೋತ್ಸವವನ್ನ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ವಿದ್ವಾಂಸರಿಂದ ಶಾಸ್ತ್ರೀಯ ಚರ್ಚಾಗೋಷ್ಠಿ, ವ್ಯಾಸದಾಸ ಸಾಹಿತ್ಯದ ಉಪನ್ಯಾಸಗಳು, ವಿದ್ಯಾರ್ಥಿಗಳ ಸುಧಾನುವಾದ, ಪರೀಕ್ಷೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಕಾರ್ಯಕ್ರಮಕ್ಕೂ ಮುನ್ನ ಮಂತ್ರಾಲಯದ ಮಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಮೂಲ ರಾಮದೇವರ ಪೂಜೆ ನೇರವೇರಿಸಿದ್ರು. ಈ ವೇಳೆಯಲ್ಲಿ ಮಠದಲ್ಲಿ ವಿವಿಧ ಕಡೆಗಳಿಂದ ಆಗಮಿಸಿದ ಬ್ರಾಹ್ಮಣ ಮಠಾಧಿಪತಿಗಳು ಭಾಗವಹಿಸಿದ್ರು. ಇನ್ನೂ ಮಠದಲ್ಲಿ ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೇರಿದಂತೆ ಹತ್ತಾರು ಗಣ್ಯರು ಭಾಗವಹಿಸಲಿದ್ದಾರೆ.

Comments

Leave a Reply

Your email address will not be published. Required fields are marked *