ರಾಯಚೂರಿನಲ್ಲಿ ಮಕ್ಕಳನ್ನು ಕಾಡುತ್ತಿದೆ ವೈರಲ್ ಫೀವರ್: ಆಸ್ಪತ್ರೆಗಳಲ್ಲಿ ಬೆಡ್ ಸಮಸ್ಯೆ

ರಾಯಚೂರು: ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಚಿಕ್ಕ ಮಕ್ಕಳಿಗೆ ವೈರಲ್ ಫೀವರ್, ಡೆಂಗ್ಯೂ ಹಾಗೂ ನ್ಯೂಮೋನಿಯಾ ವಿಪರೀತವಾಗಿ ಕಾಡುತ್ತಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಬೆಡ್ ಕೊರತೆ ಎದುರಾಗಿದೆ.

ಕೊರೊನಾ ಲಕ್ಷಣಗಳು ಮಕ್ಕಳಲ್ಲಿ ಕಂಡುಬಂದಿರುವುದರಿಂದ ನಿರಂತರವಾಗಿ ವೈದ್ಯರು ಮಕ್ಕಳನ್ನ ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿಲ್ಲ. ಕಳೆದ ಒಂದು ತಿಂಗಳಲ್ಲಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ 600 ಕ್ಕೂ ಹೆಚ್ಚು ಮಕ್ಕಳು ದಾಖಲಾಗಿದ್ದಾರೆ. ಪ್ರತೀದಿನ 15 ರಿಂದ 20 ಮಕ್ಕಳು ಈಗಲೂ ದಾಖಲಾಗುತ್ತಿದ್ದಾರೆ. ಇದನ್ನೂ ಓದಿ: ಡೆಂಘೀ ಜ್ವರಕ್ಕೆ ಐದು ವರ್ಷದ ಕಂದಮ್ಮ ಬಲಿ

ಖಾಸಗಿ ಆಸ್ಪತ್ರೆಗಳ ಬೆಡ್ ಸಹ ಭರ್ತಿ ಆಗಿವೆ. ಒಟ್ಟಾರೆ ಕಳೆದ ಒಂದು ತಿಂಗಳಲ್ಲಿ ಜಿಲ್ಲೆಯಲ್ಲಿ ಸುಮಾರು 2 ಸಾವಿರ ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದು, ಪೋಷಕರಲ್ಲಿ ಅತಂಕ ಮನೆ ಮಾಡಿದೆ. ರಿಮ್ಸ್ ಆಸ್ಪತ್ರೆಯಲ್ಲಿ ಮಕ್ಕಳಿಗಾಗಿ ಹೆಚ್ಚುವರಿ ಬೆಡ್ ಹಾಗೂ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ. ಸದ್ಯ ಇರುವ ಬೆಡ್‍ಗಳು ಸಾಲುತ್ತಿಲ್ಲ. ಹೀಗಾಗಿ ಬೇರೆ ವಿಭಾಗಗಳ ಕೊಠಡಿಗಳನ್ನು ಮಕ್ಕಳ ವಿಭಾಗಗಳಾಗಿ ಪರಿವರ್ತಿಸಲು ರಿಮ್ಸ್ ಆಡಳಿತ ಮಂಡಳಿ ಮುಂದಾಗಿದೆ.  ಇದನ್ನೂ ಓದಿ: ಕಬ್ಬಿನ ಗದ್ದೆಗೆ ಬೆಂಕಿ- ನೂರಾರು ಟನ್ ಕಬ್ಬು ಬೆಂಕಿಗಾಹುತಿ

ಮಳೆ, ವಾತಾವರಣ ಬದಲಾವಣೆ ಹಾಗೂ ಜನರು ಸಾಮಾಜಿಕ ಅಂತರ ಕಾಪಾಡದೆ ಗುಂಪು ಗುಂಪಾಗಿ ಓಡಾಡುವುದು ಮಕ್ಕಳಲ್ಲಿ ವೈರಲ್ ಫೀವರ್ ಹೆಚ್ಚಾಗಲು ಕಾರಣವಾಗುತ್ತಿದೆ ಎಂದು ಮಕ್ಕಳ ತಜ್ಞರು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *