ಬೆಂಗ್ಳೂರಲ್ಲಿ ಯಮಗುಂಡಿ, ಮಳೆಗೆ 9 ಬಲಿ- ವರದಿ ಕೇಳಿದ ರಾಹುಲ್ ಗಾಂಧಿ

ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿಗಳಿಂದ ಸಾವನ್ನಪ್ಪಿರುವ ಹಾಗೂ ಭಾರೀ ಮಳೆಗೆ ಬಲಿಯಾದ ಘಟನೆಗಳಿಗೆ ಸಂಬಂಧಿಸಿದಂತೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ.

ಬೆಂಗಳೂರಿನಲ್ಲಿ ಕಳೆದ 15 ದಿನಗಳಿಂದ ಸುರಿಯುತ್ತಿರುವ ಮಹಾಮಳೆಗೆ ರಸ್ತೆ ಗುಂಡಿ ಬಿದ್ದು ನಾಲ್ವರು ಬಲಿಯಾಗಿದ್ದಾರೆ. ಶುಕ್ರವಾರ ಸುರಿದ ಮಳೆಗೆ ಐವರು ಸಾವನ್ನಪ್ಪಿದ್ದಾರೆ. ಇಷ್ಟೆಲ್ಲಾ ದುರಂತ ಸಂಭವಿಸಿದೆ ನೀವೇಲ್ಲಾ ಏನ್ ಮಾಡ್ತಿದ್ದೀರಿ. ಏನ್ ಕ್ರಮ ಕೈಗೊಂಡಿದ್ದಿರಾ ಅಂತೆಲ್ಲಾ ಸಿದ್ದರಾಮಯ್ಯ ಅವರ ಬಳಿ ವರದಿ ಕೇಳಿದ್ದಾರೆ.

ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಮೂಲಕ ಸಿಎಂ ಸಿದ್ದರಾಮಯ್ಯ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‍ಗೆ ಸಂದೇಶ ರವಾನಿಸಿದ್ದಾರೆ. ಅಲ್ದೆ ಪರಮೇಶ್ವರ್‍ಗೂ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.

ತಾಯಿ-ಮಗಳಿಗಾಗಿ ಮುಂದುವರಿದ ಹುಡುಕಾಟ: ಶುಕ್ರವಾರದಂತೆ ಶನಿವಾರ ರಾತ್ರಿ ಕೂಡ ಬೆಂಗಳೂರಲ್ಲಿ ವರುಣ ಬಿಟ್ಟುಬಿಡದೆ ಅಬ್ಬರಿಸಿದ್ದಾನೆ. ಬಿಟಿಎಂ ಲೇಔಟ್, ಹೆಚ್‍ಎಸ್‍ಆರ್ ಲೇಔಟ್, ಕೋರಮಂಗಲ ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿದ್ದು, ಮನೆಗಳಿಗೆ ನೀರು ನುಗ್ಗಿ ಜನ ಪರದಾಡಿದ್ದಾರೆ. ಶುಕ್ರವಾರ ಸುರಿದ ಭಾರೀ ಮಳೆಯ ಪರಿಣಾಮ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಕೆಂಪೇಗೌಡ ಲೇಔಟ್‍ನ ತಾಯಿ ನಿಂಗವ್ವ, ಮಗಳು ಪುಷ್ಪಾ ಶವ ಇನ್ನೂ ಪತ್ತೆಯಾಗಿಲ್ಲ. ಎರಡು ಶವಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ರಾಜಕಾಲುವೆಯ ನೀರು ಉಕ್ಕಿ ಹರಿದು ಮನೆಗೆ ನುಗ್ಗಿದ್ದರಿಂದ ತಾಯಿ ನಿಂಗವ್ವ ಹಾಗೂ ಮಗಳು ಪುಪ್ಪಾ ನೀರನ್ನು ಹೊರ ಹಾಕಲು ಯತ್ನಿಸಿದ್ರು. ಈ ವೇಳೆ ಇಬ್ಬರು ನೀರು ಪಾಲಾಗಿದ್ರು. ಘಟನೆ ಕಣ್ಣಾರೆ ಕಂಡರೂ ಸಹ ಎದೆಯಾಳದ ನೀರಿನಿಂದ ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ. ಇಂದು ಎನ್‍ಡಿಆರ್‍ಎಫ್, ಅಗ್ನಿಶಾಮಕ ಸಿಬ್ಬಂದಿ ಮತ್ತೆ ಶವಗಳಿಗಾಗಿ ಹುಡುಕಾಟ ಶುರು ಮಾಡಲಿದ್ದಾರೆ. ಆದ್ರೆ ರಾತ್ರಿನೂ ಬಿಟ್ಟುಬಿಡದೇ ಜೋರು ಮಳೆಯಾಗಿದ್ದು ಶವ ಇನ್ನಷ್ಟು ದೂರು ಕೊಚ್ಚಿಕೊಂಡು ಹೋಗಿದೆಯಾ ಎಂಬ ಆತಂಕ ಇದೀಗ ಎದುರಾಗಿದೆ.

https://www.youtube.com/watch?v=XEdzpIlmDHU

https://www.youtube.com/watch?v=_pU2WXHoAA4

Comments

Leave a Reply

Your email address will not be published. Required fields are marked *