ಜನರು ನೋವಿನಲ್ಲಿರುವಾಗ ಸರ್ಕಾರ ನಿದ್ರಿಸುತ್ತಿದೆ: ರಾಹುಲ್ ಗಾಂಧಿ

ನವದೆಹಲಿ: ಜನರ ಸಂಕಷ್ಟಕ್ಕೆ ಸ್ಪಂದಿಸದ ಕೇಂದ್ರ ಸರ್ಕಾರವು ನಿದ್ರಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಡಳಿತ ಸರ್ಕಾರದ ವಿರುದ್ಧವಾಗಿ ವಾಗ್ದಾಳಿ ನಡೆಸಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?:
ಜನರು ನೋವು ಮತ್ತು ಸಂಕಷ್ಟದಲ್ಲಿರುವಾಗ ಭಾರತ ಸರ್ಕಾರವು ನಿದ್ರಿಸುತ್ತಿದೆ. ಬನ್ನಿ ಅವರನ್ನು ಎಬ್ಬಿಸೋಣ ಎಂದು ತಿಳಿಸಿದ್ದಾರೆ. #SpeakUpforCovidNyay ಹ್ಯಾಶ್‍ಟ್ಯಾಗ್ ಅಡಿಯಲ್ಲಿ ದೇಶದಾದ್ಯಂತ ಟ್ವಿಟರ್ ಅಭಿಯಾನವನ್ನು ಕಾಂಗ್ರೆಸ್ ಆರಂಭಿಸಿದೆ.  ಇದನ್ನೂ ಓದಿ: ಐ ಡೋಂಟ್ ಕೇರ್, ಐ ಡೋಂಟ್ ಲೈಕ್ – ಲಸಿಕೆ ಬೇಡವೆಂದು ಹಠ ಹಿಡಿದ ವೃದ್ಧ

ಈ ವಿಚಾರಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಘಟಕವು, ದೇಶಕ್ಕೆ ಕೊರೊನಾ ಸೋಂಕು ವಕ್ಕರಿಸಿದ ಮೊದಲ ದಿನದಿಂದಲೂ ಜನರನ್ನು ಪ್ರತಿ ಹಂತದಲ್ಲೂ ಜೀವ ಹಿಂಡಿದ್ದು ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬೆಡ್, ವೆಂಟಿಲೇಟರ್, ಆಮ್ಲಜನಕ, ಕೊನೆಗೆ ಸ್ಮಶಾನದಲ್ಲಿಯೂ ಜನರನ್ನು ಸಾಲಿನಲ್ಲಿ ನಿಲ್ಲಿಸಿದರು. ಸರ್ಕಾರದ ಬೇಜವಾಬ್ದಾರಿಯಿಂದಾಗಿ ಪ್ರಾಣ ಬಿಟ್ಟವರ ಕುಟುಂಬಗಳಿಗೆ 4 ಲಕ್ಷ ಪರಿಹಾರ ನೀಡಲೇಬೇಕು ಎಂದು ಒತ್ತಾಯಿಸಿ ಟ್ವೀಟ್ ಮಾಡಿದೆ. ಇದನ್ನೂ ಓದಿ: ಓಮಿಕ್ರಾನ್ ಬಗ್ಗೆ ಆತಂಕ ಬೇಡ- ಸೋಂಕಿತನ ಅಭಯ

Comments

Leave a Reply

Your email address will not be published. Required fields are marked *