ಬಾಲಿವುಡ್ ಸಿನಿಮಾ ಉಲ್ಲೇಖಿಸಿ ಮತಗಳವು ಬಗ್ಗೆ ರಾಹುಲ್ ಗಾಂಧಿ ಪಂಚ್

ನವದೆಹಲಿ: ವೋಟ್‌ಚೋರಿ (Vote Chori) ವಿರುದ್ಧ ಸಮರ ಸಾರಿರುವ ರಾಹುಲ್ ಗಾಂಧಿ (Rahul Gandhi) ಬಾಲಿವುಡ್ ಸಿನಿಮಾಗಳನ್ನು ಉಲ್ಲೇಖಿಸಿ ಎಕ್ಸ್‌ನಲ್ಲಿ ಹೊಸ ವೀಡಿಯೋ ಹಂಚಿಕೊಂಡಿದ್ದಾರೆ. ‘ಚೋರಿ ಚೋರಿ, ಚುಪ್ಕೆ ಚುಪ್ಕೆ’ ಇನ್ನು ಮುಂದೆ ನಡೆಯಲ್ಲ. ಜನ ಈಗ ಎಚ್ಚೆತ್ತುಕೊಂಡಿದ್ದಾರೆ ಎಂದು ಹೇಳಿದ್ದಾರೆ.

‘ಮತಗಳ್ಳತನ’ ಆರೋಪದ ವಿರುದ್ಧ ‘ಲಾಪಾಟ ವೋಟ್’ ಎಂಬ ಹೊಸ ವೀಡಿಯೋವನ್ನು ಬಿಡುಗಡೆ ಮಾಡುವ ಮೂಲಕ ಚುನಾವಣಾ ಆಯೋಗದ ವಿರುದ್ಧದ ತನ್ನ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದೆ. ವೀಡಿಯೋದಲ್ಲಿ, ಒಬ್ಬ ವ್ಯಕ್ತಿ ಪೊಲೀಸ್ ಠಾಣೆಯಲ್ಲಿ ತನ್ನ ‘ಮತಗಳ್ಳತನವಾಗಿದೆ’ ಎಂದು ಬೇಡಿಕೊಳ್ಳುತ್ತಿರುವುದನ್ನು ಮತ್ತು ಅಲ್ಲಿನ ಅಧಿಕಾರಿಗಳಿಗೆ ‘ಲಕ್ಷಾಂತರ ಮತಗಳನ್ನು ಕಳ್ಳತನ ಮಾಡಲಾಗುತ್ತಿದೆ’ ಎಂದು ಹೇಳುತ್ತಿರುವುದನ್ನು ಕಾಣಬಹುದು. ಈ ವೇಳೆ ಪೊಲೀಸ್ ಸಿಬ್ಬಂದಿ ತಮ್ಮ ಮತವನ್ನು ಸಹ ‘ಕದ್ದಿದ್ದಾರೆಯೇ’ ಎಂದು ಆಶ್ಚರ್ಯ ಪಡುತ್ತಿದ್ದಾರೆ. ಒಂದು ನಿಮಿಷದ ವೀಡಿಯೋಗೆ ‘ಲಾಪಾಟ ವೋಟ್’ ಎಂದು ಹೆಸರಿಸಲಾಗಿದ್ದು, ‘ಲೇಡೀಸ್’ ಅನ್ನು ತೆಗೆದು ಹಾಕಲಾಗಿದೆ. ಇದು ಕಿರಣ್ ರಾವ್ ನಿರ್ದೇಶನದ ‘ಲಾಪಾಟ ಲೇಡೀಸ್’ ಚಿತ್ರವನ್ನು ಉಲ್ಲೇಖಿಸುತ್ತದೆ. ಇದನ್ನೂ ಓದಿ: ಅಣುಬಾಂಬ್‌ ಪರೀಕ್ಷೆಯನ್ನು ವಿಶ್ವವೇ ವಿರೋಧಿಸಿದಾಗ ಇನ್ನೂ 2 ಬಾಂಬ್‌ ಪರೀಕ್ಷೆ ಮಾಡಿ ಅಂದವರು ಅಟಲ್‌ಜೀ: ಬಿಎಲ್‌ ಸಂತೋಷ್‌

ಕಾಂಗ್ರೆಸ್ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ವೀಡಿಯೋವನ್ನು ಪೋಸ್ಟ್ ಮಾಡಿ `ನಿಮ್ಮ ಮತಗಳ್ಳತನ, ಹಕ್ಕುಗಳ ಕಳ್ಳತನ’ ಎಂದು ಹೇಳಿದೆ. ಒಟ್ಟಾಗಿ ಮತಗಳ್ಳತನದ ವಿರುದ್ಧ ನಮ್ಮ ಧ್ವನಿ ಎತ್ತೋಣ ಮತ್ತು ನಮ್ಮ ಹಕ್ಕುಗಳನ್ನು ಉಳಿಸೋಣ ಅಂತ ಕಾಂಗ್ರೆಸ್ ಕರೆ ನೀಡಿದೆ. ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭೂಕುಸಿತ – ಶಿರಾಡಿ ಘಾಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್

ಈ ಮಧ್ಯೆ, ನಾಳೆ ಕೇಂದ್ರ ಚುನಾವಣಾ ಆಯೋಗ ನಾಳೆ (ಭಾನುವಾರ) ಮಧ್ಯಾಹ್ನ 3 ಗಂಟೆಗೆ ಸುದ್ದಿಗೋಷ್ಠಿ ನಡೆಸುವುದಾಗಿ ತಿಳಿಸಿದೆ. ರಾಹುಲ್ ಗಾಂಧಿ ಆರೋಪಗಳಿಗೆ ಉತ್ತರ ಕೊಡುವ ಸಾಧ್ಯತೆ ಇದೆ. ಇದನ್ನೂ ಓದಿ: ಆರ್‌ಎಸ್‌ಎಸ್‌ ಭಾರತದ ತಾಲಿಬಾನ್‌: ಬಿಕೆ ಹರಿಪ್ರಸಾದ್‌