ಅಧಿಕಾರಕ್ಕೆ ಬಂದರೆ ಬಡವರ ಖಾತೆಗೆ ದುಡ್ಡು – ರಾಹುಲ್ ಗಾಂಧಿ

ರಾಯ್‍ಪುರ: 2019ರಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಬಡವರ ಕುಟುಂಬಕ್ಕೆ ಕನಿಷ್ಠ ಆದಾಯ ಗ್ಯಾರಂಟಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಛತ್ತೀಸ್‍ಗಢದ ರಾಯಪುರದಲ್ಲಿ ಮಾತನಾಡಿದ ಅವರು, ದೇಶದ ಎಲ್ಲಾ ರಾಜ್ಯಗಳಲ್ಲೂ ಇರುವ ಬಡವರಿಗೆ ಕನಿಷ್ಠ ಆದಾಯ ದೊರೆಯುವಂತೆ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ. ಇಂತದ ಯೋಜನೆ ವಿಶ್ವದಲ್ಲೇ ಮೊದಲು ಆಗಿದ್ದು, ಬೇರೆ ಯಾವುದೇ ದೇಶದಲ್ಲಿ ಇಂತಹ ಯೋಜನೆ ಜಾರಿ ಮಾಡಿಲ್ಲ ಎಂದರು.

ದೇಶದಲ್ಲಿ ಯಾರು ಬಡತನ ಮತ್ತು ಹಸಿವಿನಿಂದ ಇರಬಾರದು ಎಂಬುವುದು ನಮ್ಮ ಉದ್ದೇಶ. ಈ ಯೋಜನೆಯನ್ನು ಛತ್ತೀಸ್‍ಗಢ, ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ ಎಲ್ಲಾ ರಾಜ್ಯಗಳಲ್ಲೂ ಜಾರಿ ಮಾಡಲಾಗುವುದು. ಕಾಂಗ್ರೆಸ್ ಇಂತಹ ಐತಿಹಾಸ ನಿರ್ಧಾರವನ್ನು ಮೊದಲ ಬಾರಿಗೆ ತೆಗೆದುಕೊಳ್ಳುತ್ತಿದೆ. ಇದು ಈಡೇರಲು ನೀವು ನಮಗೆ ಒಂದು ಅವಕಾಶ ನೀಡಬೇಕು ಎಂದು ಹೇಳಿದರು.

ಕಿಸಾನ್ ಆಹಾರ್ ಸಮ್ಮೇಳನದಲ್ಲಿ ಮಾತನಾಡಿದ ರಾಹುಲ್ ಗಾಂಧಿ 15 ವರ್ಷಗಳ ಬಳಿಕ ಅಧಿಕಾರಕ್ಕೆ ಬರಲು ಕಾರಣರಾದ ಚತ್ತೀಸ್‍ಗಢದ ಜನರಿಗೆ, ವಿಶೇಷವಾಗಿ ರೈತರಿಗೆ ಕೃತಜತ್ಞೆಗಳನ್ನು ತಿಳಿಸಿದರು.

ರಾಹುಲ್ ಗಾಂಧಿ ನೀಡಿದ ಈ ಭರವಸೆಯ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಕಾಮೆಂಟ್ ಮಾಡಿ ತಿಳಿಸಿ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *