ನಮ್ಮ ದೇಶದ ರಾಹುಲ್ ಗಾಂಧಿ ಪಾಕ್ ಲೀಡರ್: ಶ್ರೀರಾಮುಲು ವ್ಯಂಗ್ಯ

ಚಿತ್ರದುರ್ಗ: ಭಾರತ ಗೆಲ್ಲಬೇಕು ಅಂದರೆ ಪ್ರಧಾನಿ ನರೇಂದ್ರ ಮೋದಿಗೆ ಬೆಂಬಲಿಸಿ, ಪಾಕಿಸ್ತಾನ ಗೆಲ್ಲಬೇಕಾದರೆ ಕಾಂಗ್ರೆಸ್ಸಿಗೆ ಬೆಂಬಲ ನೀಡಿ. ನಮ್ಮ ದೇಶದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪಾಕ್ ಲೀಡರ್ ಎಂದು ಬಿಜೆಪಿ ಶಾಸಕ ಶ್ರೀರಾಮುಲು ಟಾಂಗ್ ಕೊಟ್ಟಿದ್ದಾರೆ.

ಇಂದು ಚಿತ್ರದುರ್ಗದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ಗೆಲ್ಲಬೇಕು ಅಂದರೆ ಮೋದಿಯನ್ನು ಬೆಂಬಲಿಸಿ. ಪಾಕ್ ಗೆಲ್ಲಬೇಕು ಎಂದರೆ ಕಾಂಗ್ರೆಸ್ ಬೆಂಬಲಿಸಿ ಎಂದು ಹೇಳಿದರು.

ವಯನಾಡ್‍ನಲ್ಲಿ ಪಾಕ್ ಧ್ವಜಗಳು ರಾರಾಜಿಸಿವೆ. ನಮ್ಮ ಕೂದಲು ಮುಟ್ಟಲು ಪಾಕ್‍ಗೆ ಆಗಲ್ಲ. ನಾವು ಕೆಮ್ಮಿದರೆ ಪಾಕ್ ಇರಲ್ಲ. ಅರ್ಧ ಕರ್ನಾಟಕ ಸೇರಿದರೆ ಭೂಪಟದಲ್ಲಿ ಪಾಕ್ ಇರಲ್ಲ. ನಮ್ಮ ದೇಶದ ರಾಹುಲ್ ಪಾಕ್ ಲೀಡರ್. ನೀವು ಬಾಂಬ್ ಹಾಕಿದರೆ ಕಲ್ಲು ಹಾಕುತ್ತೇವೆ. ನಾವು ಮದಕರಿ ವಂಶಸ್ಥರು, ಬ್ರಿಟಿಷರಿಗೇನೇ ಹೆದರಿಲ್ಲ ಎಂದು ಕಿಡಿಕಾರಿದರು.

ಕಾಂಗ್ರೆಸ್ ಅವರು ಗಾಂಧಿ ಹೆಸರು ತೆಗೆದು ಚುನಾವಣೆ ಮಾಡಿ. ನಿಮಗೆ ಅದು ತೆಗೆಯಲು ತಾಕತ್ ಇಲ್ಲ. ಸೋಲಿನ ಭೀತಿಯಿಂದ ವಯಾನಾಡ್‍ನಲ್ಲಿ ರಾಹುಲ್ ಗಾಂಧಿ ನಿಂತಿದ್ದಾರೆ ಎಂದು ಟಾಂಗ್ ಕೊಟ್ಟರು.

Comments

Leave a Reply

Your email address will not be published. Required fields are marked *