ಚುನಾವಣೆಗೆ ರಾಹುಲ್ ಗಾಂಧಿಗೆ ಎಷ್ಟು ಹಣ ನೀಡಲಾಗಿದೆ? – ಲೆಕ್ಕ ನೀಡಿದ ಕಾಂಗ್ರೆಸ್‌

ನವದೆಹಲಿ: ಕಳೆದ ಲೋಕಸಭೆ ಚುನಾವಣೆಯಲ್ಲಿ (Lok Sabah Election) ರಾಯ್ ಬರೇಲಿ (Raebareli) ಮತ್ತು ವಯನಾಡ್‌ನಿಂದ (Wayanad) ಸ್ಪರ್ಧಿಸಿದ್ದ ರಾಹುಲ್ ಗಾಂಧಿ (Rahul Gandhi) ಅವರಿಗೆ ಚುನಾವಣಾ ಖರ್ಚು ವೆಚ್ಚಗಳಿಗೆ ತಲಾ 70 ಲಕ್ಷ ರೂಪಾಯಿ ಪಕ್ಷದ ಕಡೆಯಿಂದ ನೀಡಲಾಗಿತ್ತು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ (Election Commission) ಕಾಂಗ್ರೆಸ್‌ ತಿಳಿಸಿದೆ.

ಚುನಾವಣಾ ವೆಚ್ಚಗಳಿಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗಕ್ಕ ಕಾಂಗ್ರೆಸ್‌ ಮಾಹಿತಿ ನೀಡಿದೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಲ್ಲಿ ಕಂಗನಾ ರನೌತ್ ವಿರುದ್ಧ ಸ್ಪರ್ಧಿಸಿದ್ದ ವಿಕ್ರಮಾಧಿತ್ಯ ಸಿಂಗ್ ಅವರಿಗೆ 87 ಲಕ್ಷ ನೀಡಲಾಗಿದೆ. ಇದು ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ನೀಡಿದ ಹಣದ ಪೈಕಿ ಹೆಚ್ಚು ಎಂದು ಹೇಳಿಕೊಂಡಿದೆ. ಇದನ್ನೂ ಓದಿ: ಸುಪ್ರೀಂ ಛೀಮಾರಿ ಹಾಕಿದ ಬೆನ್ನಲ್ಲೇ ಕ್ಷಮೆಯಾಚಿಸಿದ ರೇವಂತ್ ರೆಡ್ಡಿ

ಅಮೇಥಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸಿದ್ದ ಕಿಶೋರಿ ಲಾಲ್ ಶರ್ಮಾ, ಕೇರಳದ ಅಲಪ್ಪುಳದಿಂದ ಸ್ಪರ್ಧಿಸಿದ್ದ ಕೆ.ಸಿ ವೇಣುಗೋಪಾಲ್, ತಮಿಳುನಾಡಿನ ವಿರುಧುನಗರದಿಂದ ಸ್ಪರ್ಧಿಸಿದ್ದ ಮಾಣಿಕಂ ಟ್ಯಾಗೋರ್, ಗುಲ್ಬರ್ಗದ ಕಾಂಗ್ರೆಸ್ ಅಭ್ಯರ್ಥಿಗಳಾದ ರಾಧಾಕೃಷ್ಣ ಮತ್ತು ಪಂಜಾಬ್‌ನ ಆನಂದಪುರ ಸಾಹಿಬ್ ಅಭ್ಯರ್ಥಿ ವಿಜಯ್ ಇಂದರ್ ಸಿಂಗ್ಲಾಗೆ ತಲಾ 70 ಲಕ್ಷ ರೂ. ನೀಡಿದೆ. ಕಾಂಗ್ರೆಸ್‌ನ ಹಿರಿಯ ನಾಯಕರಾದ ಆನಂದ್ ಶರ್ಮಾ ಮತ್ತು ದಿಗ್ವಿಜಯ್ ಸಿಂಗ್ ಇಬ್ಬರೂ ಚುನಾವಣೆಯಲ್ಲಿ ಸೋತಿದ್ದು ಕ್ರಮವಾಗಿ 46 ಲಕ್ಷ ಮತ್ತು 50 ಲಕ್ಷ ರೂ. ನೀಡಿದೆ. ಇದನ್ನೂ ಓದಿ: ಕಿತ್ತೂರು ಪಟ್ಟಣ ಪಂಚಾಯಿತಿ ಬಿಜೆಪಿ ಸದಸ್ಯನ ಕಿಡ್ನ್ಯಾಪ್ – ಕಾಂಗ್ರೆಸ್ ಶಾಸಕನ ಆಪ್ತರ ವಿರುದ್ಧ ದೂರು

ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮಿತಿಯನ್ನು ಲೋಕಸಭೆ ಚುನಾವಣೆಗೆ 70 ಲಕ್ಷ ರೂ.ನಿಂದ ದಿಂದ 95 ಲಕ್ಷ ರೂ.ಗೆ ತ್ತು ವಿಧಾನಸಭೆ ಚುನಾವಣೆಗೆ 28 ​​ಲಕ್ಷ ರೂ.ನಿಂದ 40 ಲಕ್ಷ ರೂ.ಗೆ ಹೆಚ್ಚಿಸಲಾಗಿತ್ತು. 2024ರ ಲೋಕಸಭಾ ಚುನಾವಣೆಯನ್ನು ಏಳು ಹಂತಗಳಲ್ಲಿ ನಡೆಸಲಾಗಿತ್ತು ಮತ್ತು ಜೂನ್ 4 ರಂದು ಫಲಿತಾಂಶ ಪ್ರಕಟವಾಗಿತ್ತು.