ಲಡಾಖ್‌ನಲ್ಲಿ ಚೀನಾದಿಂದ ಪ್ಯಾಂಗ್ಯಾಂಗ್‌ ಸೇತುವೆ ನಿರ್ಮಾಣ – ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

RAHULGANDHI

ನವದೆಹಲಿ: ಲಡಾಖ್‍ನ ಪ್ಯಾಂಗ್ಯಾಂಗ್‌ ತ್ಸೋ ಸರೋವರದ ಮೇಲೆ ಚೀನಾ ಆಯಕಟ್ಟಿನ ಸೇತುವೆಯನ್ನು ನಿರ್ಮಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಸೇತುವೆಯನ್ನು ಉದ್ಘಾಟಿಸಲು ಹೋಗಬಹುದು ಎಂದು ವಾಗ್ದಾಳಿ ನಡೆಸಿದ್ದಾರೆ.

ಲಡಾಖ್‍ನ ಪ್ಯಾಂಗ್ಯಾಂಗ್‌ ತ್ಸೋ ಸರೋವರದ ಮೇಲೆ ಚೀನಾ ಆಯಕಟ್ಟಿನ ಸೇತುವೆಯನ್ನು ನಿರ್ಮಿಸುತ್ತಿರುವ ಬಗ್ಗೆ ಮೋದಿ ಅವರು ಮೌನವಹಿಸಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ. ಚೀನಾ ನಮ್ಮ ದೇಶದಲ್ಲಿ ಆಯಕಟ್ಟಿನ ಸೇತುವೆಯನ್ನು ನಿರ್ಮಿಸುತ್ತಿದೆ. ಮೋದಿ ಅವರು ಈ ಬಗ್ಗೆ ಮೌನವಾಗಿರುವುದರಿಂದಾಗಿ ಚೀನಾ ಸೈನಿಕರಲ್ಲಿ ಉತ್ಸಾಹ ಹುಕ್ಕಿಹರಿಯುತ್ತಿದೆ. ಈಗ ಈ ಸೇತುವೆಯನ್ನು ಉದ್ಘಾಟಿಸಲು ಪ್ರಧಾನಿ ಹೋಗಬಹುದು ಎಂಬ ಭಯವಿದೆ ಎಂದು ಟ್ವೀಟ್ ಮೂಲಕ ಆರೋಪಿಸಿದ್ದಾರೆ. ಅಲ್ಲದೇ ಸೇತುವೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ನಗರ ಪಂಚಾಯತ್‌ ಚುನಾವಣಾ ಫಲಿತಾಂಶ – ಬಿಜೆಪಿ ಅತಿ ದೊಡ್ಡ ಪಕ್ಷ

ಪೂರ್ವ ಲಡಾಖ್‍ನಲ್ಲಿ ಚೀನಾದೊಂದಿಗಿನ ಗಡಿ ವಿವಾದವನ್ನು ನಿಭಾಯಿಸುತ್ತಿರುವ ಬಗ್ಗೆ, ಮೋದಿ ಮತ್ತು ಅವರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ಯಾಂಗ್ಯಾಂಗ್‌ ಸರೋವರಕ್ಕೆ ಅಡ್ಡಲಾಗಿ ಚೀನಾ ನಿರ್ಮಿಸುತ್ತಿರುವ ಸೇತುವೆಯು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಸುಮಾರು 60 ವರ್ಷಗಳ ಹಿಂದಿನ ಪ್ರದೇಶದಲ್ಲಿದೆ. ದೇಶದ ಭದ್ರತಾ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಸರ್ಕಾರ ತಿಳಿಸಿತ್ತು ಆದರೆ ಈಗ ಮಾಡುತ್ತಿರುವುದ ಏನು ಎಂದಿದ್ದಾರೆ.

Comments

Leave a Reply

Your email address will not be published. Required fields are marked *