ಸಿದ್ದಗಂಗಾ ಶ್ರೀಗಳಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ರಾಹುಲ್, ಸಿಎಂ

ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಡೆದಾಡುವ ದೇವರು ಎಂದೇ ಖ್ಯಾತರಾಗಿರೋ ತುಮಕೂರು ಸಿದ್ದಗಂಗಾ ಮಠದ ಶ್ರೀ ಶ್ರೀ ಶಿವಕುಮಾರ್ ಸ್ವಾಮೀಜಿ ಅವರಿಗೆ ಶುಭಾಶಯ ತಿಳಿಸಿದ್ದಾರೆ.

111ನೇ ಹುಟ್ಟಯಹಬ್ಬದ ಸಂಭ್ರಮದಲ್ಲಿರೋ ಸ್ವಾಮೀಜಿಗಳಿಗೆ ಇಬ್ಬರು ನಿಮ್ಮ ನಿರಂತರ ಸೇವೆ ಮುಂದುವರೆಯಲಿ ಅಂತ ಆಶಿಸಿದ್ದಾರೆ. ಇದನ್ನೂ ಓದಿ: 111ರ ಸಂಭ್ರಮದಲ್ಲಿ ಸಿದ್ದಗಂಗಾ ಶ್ರೀ- ಮೋದಿ, ಅಮಿತ್ ಶಾ ಕನ್ನಡದಲ್ಲೇ ವಿಶ್

ಸಿಎಂ ಸಿದ್ದರಾಮಯ್ಯ ಅವರು ಈ ಕುರಿತು ಟ್ವೀಟ್ ಮಾಡಿದ್ದು, `ಕಾಯಕ ಯೋಗಿ ಬಸವಣ್ಣನವರ ಸಮ ಸಮಾಜ, ದುರ್ಬಲರ ಸಬಲೀಕರಣ ಮುಂತಾದ ತತ್ವಗಳಿಗೆ ಸಂಪೂರ್ಣ ಬದ್ಧರಾಗಿ ಸಾಮಾಜಿಕ ಸೇವೆಯನ್ನೇ ಬದುಕನ್ನಾಗಿಸಿಕೊಂಡಿರುವ ಸಿದ್ದಗಂಗಾ ಮಠಾಧೀಶರಾದ ತ್ರಿವಿಧ ದಾಸೋಹಿ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರು 111ನೇ ಜನ್ಮದಿನೋತ್ಸವ ಆಚರಣೆ ಮಾಡಿಕೊಳ್ಳುತ್ತಿರುವುದು ಅತ್ಯಂತ ಸಂತಸ ನೀಡಿದೆ. ನಿಮ್ಮ ಸೇವೆ ಹೀಗೆ ನಿರಂತರ ಸಾಗಲಿ’ ಅಂತ ಹೇಳುವ ಮೂಲಕ ಶುಭ ಕೋರಿದ್ದಾರೆ. ಇದನ್ನೂ ಓದಿ: ಸತತ 4ತಾಸು ಮರಳಲ್ಲೇ ಸಿದ್ದಗಂಗಾ ಶ್ರೀಯವರನ್ನು ರಚಿಸಿದ ಕಲಾವಿದ!

Comments

Leave a Reply

Your email address will not be published. Required fields are marked *