ನಮಗೇ ನೀರಿಲ್ಲ, ತಮಿಳುನಾಡಿಗೆ ನೀರು ಬಿಡೋದು ಹೇಗೆ? ರಾಗಿಣಿ ದ್ವಿವೇದಿ ಪ್ರತಿಕ್ರಿಯೆ

ನ್ನಡ ಸಿನಿಮಾರಂಗದ ನಟ-ನಟಿಯರು ಕಾವೇರಿದ ಕಾವೇರಿ ಹೋರಾಟಕ್ಕೆ (Cauvery Protest) ಬೆಂಬಲ ಸೂಚಿಸಿದ್ದಾರೆ. ಕಿಚ್ಚ ಸುದೀಪ್(Kiccha Sudeep), ದರ್ಶನ್, ರಾಘವೇಂದ್ರ ರಾಜ್‌ಕುಮಾರ್, ಧ್ರುವ ಸರ್ಜಾ (Dhruva Sarja) ಸೇರಿದಂತೆ ಅನೇಕರು ನೀರಿಗಾಗಿ ಹೋರಾಡಲು ಸಿದ್ಧ ಎಂದು ಧ್ವನಿಯೆತ್ತಿದ್ದಾರೆ. ಈಗ ಕನ್ನಡದ ನಟಿ ರಾಗಿಣಿ ದ್ವಿವೇದಿ (Ragini Dwivedi) ಕೂಡ ಕಾವೇರಿ ಹೋರಾಟದ ಪರ ಮಾತನಾಡಿದ್ದಾರೆ. ನಮಗೇ ನೀರಿಲ್ಲ, ಇಂತಹ ಸಮಯದಲ್ಲಿ ತಮಿಳುನಾಡಿಗೆ ನೀರು ಬಿಡೋದು ಹೇಗೆ ಎಂದು ರಾಗಿಣಿ ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾತಾಡಿದ ನಟಿ ರಾಗಿಣಿ ದ್ವಿವೇದಿ, ನಮಗೆ ನೀರಿಲ್ಲ ಇಂತಹ ಸಮಯದಲ್ಲಿ ತಮಿಳುನಾಡಿಗೆ ನೀರು ಬಿಡೋದು ಹೇಗೆ? ಕಾವೇರಿ ಹೋರಾಟಕ್ಕೆ ನಾನು ಸದಾ ಸಿದ್ಧ. ರೈತರಿಗೆ ನೀರು ಮುಖ್ಯ, ರೈತರಿದ್ರೆ ನಮ್ಮ ಜೀವನ. ಯೋಚನೆ ಮಾಡಿ ನೀರು ಬಿಡಬೇಕು ಎಂದು ರಾಗಿಣಿ ಹೇಳಿದ್ದಾರೆ.

ನಮ್ಮ ರೈತರಿಗೆ ತೊಂದರೆ ಆದರೆ ನಾವು ಹೇಗೆ ಸುಮ್ಮನೆ ಇರೋಕೆ ಆಗುತ್ತೆ. ಕರ್ನಾಟಕ ನಮ್ಮ ಮನೆ, ಮೊದಲು ನಮ್ಮ ರೈತರ ಹಿತ ಮುಖ್ಯ. ಸ್ಯಾಂಡಲ್‌ವುಡ್ (Sandalwood) ಸದಾ ರೈತರ ಪರವಾಗಿ ಇರಲಿದೆ. ರೈತರ ಪರವಾಗಿ ನನ್ನ ಸಪೋರ್ಟ್ ಸಹ ಇದೆ. ಶುಕ್ರವಾರದ ಬಂದ್‌ಗೆ ಅಗತ್ಯ ಬಿದ್ದರೆ ನಾನು ಹೋಗಿ ಬೆಂಬಲ ಕೊಡ್ತೀನಿ. ಈಗಾಗಲೇ ಸಾಕಷ್ಟು ಜನ ಚಿತ್ರರಂಗದವರು ಬೆಂಬಲ ನೀಡಿದ್ದಾರೆ ಎಂದು ನಟಿ ರಾಗಿಣಿ ದ್ವಿವೇದಿ ಪ್ರತಿಕ್ರಿಯೆ ನೀಡಿದ್ದಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]