ಇದು ಸಹಜ ಬರಗಾಲವಲ್ಲ, ರಾಜ್ಯ ಸರ್ಕಾರ ಸೃಷ್ಟಿಸಿರುವ ಕೃತಕ ಬರಗಾಲ: ರಾಘವೇಶ್ವರ ಶ್ರೀ

– ರಾಮಚಂದ್ರಾಪುರ ಮಠದಿಂದ 24 ಲೋಡ್ ಮೇವು ಸರಬರಾಜು

ಬೆಂಗಳೂರು: ಇದು ಸಹಜ ಬರಗಾಲವಲ್ಲ, ರಾಜ್ಯ ಸರ್ಕಾರ ಸೃಷ್ಟಿಸಿರುವ ಕೃತಕ ಬರಗಾಲ. ರಾಜ್ಯದ ಜನುವಾರುಗಳಿಗೆ ಮೇವಿಲ್ಲ, ಅದ್ರೇ ಸರ್ಕಾರ ಮಾತ್ರ ಕಸಾಯಿಖಾನೆಗಳ ಅಭಿವೃದ್ಧಿಗೆ ಸಹಾಯ ಮಾಡುತ್ತಿದೆ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಗಿರಿನಗರದಲ್ಲಿರುವ ಶ್ರೀ ರಾಮಚಂದ್ರಾಪುರದ ಮಠದಲ್ಲಿ ಆಯೋಜನೆಗೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಮಲೆ ಮಹದೇಶ್ವರ ಬೆಟ್ಟದ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಗೋವುಗಳಿಗೆ ಮೇವಿನ ಸಮಸ್ಯೆ ಉಂಟಾಗಿದೆ. ಅಲ್ಲಿನ ಗೋಪಾಲಕರು ಯಾವುದೇ ವ್ಯಾಪಾರದ ದೃಷ್ಟಿ ಇಲ್ಲದೇ ಗೋವುಗಳನ್ನು ಸಾಕುತ್ತಿದ್ದಾರೆ. ಗೋವುಗಳ ಆಹಾರದ ಮೂಲ ಬೆಟ್ಟದ ಸಸ್ಯರಾಶಿಯಾಗಿದೆ. ಅದರೆ ಸರ್ಕಾರ ಬೆಟ್ಟಕ್ಕೆ ಬೇಲಿ ಹಾಕಿ ಗೋವುಗಳಿಗೆ ಮೇವಿಲ್ಲದಂತೆ ಮಾಡಿದೆ ಎಂದು ಆರೋಪಿಸಿದರು.

ಮಲೆ ಮಹಾದೇಶ್ವರ ಬೆಟ್ಟದಲ್ಲಿ ದೇಶಿ ತಳಿಯ 4 ರಿಂದ 5 ಲಕ್ಷಕ್ಕೂ ಅಧಿಕ ಗೋವುಗಳಿದ್ದು ಇವುಗಳ ನಾಶಕ್ಕೆ ಸರ್ಕಾರ ಕಾರಣವಾಗುತ್ತಿದೆ. ಮೇವಿಲ್ಲದೆ ಗೋವುಗಳು ಕಸಾಯಿಖಾನೆಗೆ ಸೇರುವ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ. ಆ ಕಾರಣದಿಂದ ಗೋವುಗಳ ರಕ್ಷಣೆಗೆ ಮಠ ಮುಂದಾಗಿದ್ದು 24ನೇ ಯೋಗ ಪಟ್ಟಾಭಿಷೇಕದ ಪ್ರಯುಕ್ತ 24 ಲಾರಿ ಲೋಡ್ ಮೇವನ್ನ ಸರಬರಾಜು ಮಾಡಲು ಮುಂದಾಗಿದ್ದು ಮಠದ ಭಕ್ತರು ಮತ್ತು ಶಿಷ್ಯರ ಸಹಕರದಿಂದ ಅಡಿಕೆ ಹಾಳೆಗಳನ್ನ ಪುಡಿ ಮಾಡಿ ಮೇವನ್ನ ಒದಗಿಸುವ ಕಾರ್ಯಕ್ಕೆ ಏಪ್ರಿಲ್ 2 ರಿಂದ ಚಾಲನೆ ನೀಡುತ್ತೇವೆ. ಜನರು ಇನ್ನೂ ಮೂರು ತಿಂಗಳು ಸರಳ ಜೀವನವನ್ನು ಅನುಸರಿಸಿ, ಉಳಿಸಿದ ಹಣವನ್ನ ಗೋವಿನ ರಕ್ಷಣೆಗೆ ನೀಡಿ ಎಂದು ರಾಘವೇಂದ್ರ ಶ್ರೀಗಳು ಕರೆಕೊಟ್ಟರು.

 

Comments

Leave a Reply

Your email address will not be published. Required fields are marked *