ವರ್ಷ ಮೂರು, ಮರೆಯದ ನೆನಪು ನೂರು: ಅಪ್ಪು ನೆನೆದ ರಾಘಣ್ಣ

ವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರು ಅಗಲಿ ಇಂದಿಗೆ (ಅ.29) 3 ವರ್ಷ ಕಳೆದಿದೆ. ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿಗೆ ಕುಟುಂಬಸ್ಥರಿಂದ ವಿಶೇಷ ಪೂಜೆ ಮಾಡಲಾಯಿತು. ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ರಾಘಣ್ಣ, ವರ್ಷ ಮೂರು ಮರೆಯದ ನೆನಪು ನೂರು ಎಂದು ಸಹೋದರ ಪುನೀತ್‌ರನ್ನು ಸ್ಮರಿಸಿದ್ದಾರೆ.

ನಾವು ಪುನೀತ್ ದಿನ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಹೇಗೆ ದಿನಗಳು ಉರುಳುತ್ತಿದೆ. ಜನಗಳಿಗೆ ಅಪ್ಪು ಮೇಲಿನ ಪ್ರೀತಿ ಕಮ್ಮಿಯಾಗುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಅಪ್ಪು ಮೇಲಿನ ಜನಗಳ ಪ್ರೀತಿ ಹೆಚ್ಚಾಗುತ್ತಿದೆ. ವರ್ಷ ಮೂರು ಮರೆಯದ ನೆನಪು ನೂರು ಎಂದು ಅಪ್ಪು ಕುರಿತು ರಾಘಣ್ಣ (Raghavendra Rajkumar) ಮಾತನಾಡಿದ್ದಾರೆ. ಪ್ರತಿದಿನ ಆತನ ನೋವಿನಲ್ಲೇ ನಾವು ಕಾಲ ಕಳೆಯುತ್ತಿದ್ದೇವೆ ಎಂದಿದ್ದಾರೆ.

ಪುನೀತ್ ಕೊಟ್ಟ ಸ್ಪೂರ್ತಿ ಹಿನ್ನಲೆಯಲ್ಲಿ ಅಪ್ಪು ಹುಟ್ಟುಹಬ್ಬವನನ್ನ ಸ್ಪೂರ್ತಿ ದಿನವಾಗಿ ಆಚರಿಸುತ್ತೇವೆ. ನಿಮ್ಮ ಪ್ರೀತಿಗೆ ಬೆಲೆ ಕಟ್ಟೋಕೆ ಆಗೋಲ್ಲ. ಅಪ್ಪು ನಮ್ಮ ಮನೆಗೆ ಮಾತ್ರ ಅಲ್ಲ, ಎಲ್ಲರಿಗೂ ಬೇಕು ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ಅಪ್ಪು ಅಗಲಿಕೆಗೆ 3 ವರ್ಷ, ರಾಜ್ಯಾದ್ಯಂತ ಪುಣ್ಯಸ್ಮರಣೆ – ಕುಟುಂಬಸ್ಥರಿಂದ ಸಮಾಧಿಗೆ ಪೂಜೆ

ಅಂದಹಾಗೆ, 2021ರ ಅ.29ರಂದು ಪುನೀತ್ ರಾಜ್‌ಕುಮಾರ್ ಅವರು ನಿಧನರಾದರು. ಕರುನಾಡ ಕಿರುನಗೆ ಕಣ್ಮರೆಯಾದ ದಿನ.