2ನೇ ಮದುವೆಯಾದ ಪಾಕಿಸ್ತಾನಿ ನಟಿ ಮಹಿರಾ ಖಾನ್

ಪಾಕಿಸ್ತಾನಿ ನಟಿ ಮಹಿರಾ ಖಾನ್ (Mahira Khan) ತಮ್ಮ ಬಹುಕಾಲದ ಗೆಳೆಯ ಸಲೀಂ ಕರೀಮ್ (Salim Karims) ಜೊತೆ ಅಕ್ಟೋಬರ್‌ 1ರಂದು ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಸಲೀಂ ಜೊತೆ ‘ರಯೀಸ್’ ನಟಿ 2ನೇ ಮದುವೆಯಾಗಿದ್ದಾರೆ. ಮದುವೆಯ ಸುಂದರ ಫೋಟೋ, ವಿಡಿಯೋ ತುಣುಕನ್ನ ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಗೆಳೆಯ ಸಲೀಂ ಜೊತೆ ಹಲವು ವರ್ಷಗಳ ಡೇಟಿಂಗ್ ಬಳಿಕ ಮಹಿರಾ ಸರಳವಾಗಿ ಗುರುಹಿರಿಯರ ಸಮ್ಮುಖದಲ್ಲಿ 2ನೇ ಬಾರಿ ಮದುವೆಯಾಗಿದ್ದಾರೆ. ಲೈಟ್ ಬಣ್ಣದ ಲೆಹೆಂಗಾದಲ್ಲಿ ನಟಿ ಮಿಂಚಿದ್ದಾರೆ. ಇದನ್ನೂ ಓದಿ:ಅಲ್ಲು ಬ್ಯುಸಿನೆಸ್ ಪಾರ್ಕ್ ನಲ್ಲಿ ಖ್ಯಾತ ನಟ ಅಲ್ಲು ರಾಮಲಿಂಗಯ್ಯ ಪ್ರತಿಮೆ

 

View this post on Instagram

 

A post shared by Mahira Khan (@mahirahkhan)

2007ರಲ್ಲಿ ಅಲಿ ಅಸ್ಕರಿ ಎಂಬುವವರ ಜೊತೆ ಮಹಿರಾ ಮದುವೆಯಾಗಿದ್ದರು. ಬಳಿಕ 2015ರಲ್ಲಿ ಇಬ್ಬರು ಬೇರೆಯಾದರು. ಮಹಿರಾಗೆ 13 ವರ್ಷದ ಮಗನಿದ್ದು, ತಾಯಿಯ 2ನೇ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ.

20017ರಲ್ಲಿ ‘ರಯೀಸ್’ (Raees) ಚಿತ್ರದಲ್ಲಿ ಶಾರುಖ್‌ಗೆ (Sharukh Khan) ಜೋಡಿಯಾಗಿ ಮಹಿರಾ ಖಾನ್ ನಟಿಸಿದ್ದರು. ಪಾಕಿಸ್ತಾನದ ಸಾಕಷ್ಟು ಸೀರಿಯಲ್ ಮತ್ತು ಸಿನಿಮಾಗಳಲ್ಲಿ ಮಹಿರಾ ನಟಿಸಿದ್ದಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]