ನವದೆಹಲಿ: ಇತ್ತೀಚಿನ ದಿನಗಳಲ್ಲಿ ನಟ-ನಟಿಯರು ಏನೇ ಮಾಡಿದ್ರೂ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗೋದು ಸಾಮಾನ್ಯವಾಗಿ ಬಿಟ್ಟಿದೆ. ಅಂತೆಯೇ ಇದೀಗ ಬಾಲಿವುಡ್ ನಟಿ ರಾಧಿಕಾ ಆಪ್ಟೆ ಕೂಡ ಟ್ರೋಲ್ ಆಗಿದ್ದಾರೆ.
ರಾಧಿಕಾ ಅವರು ಇತ್ತೀಚೆಗೆ ಬಿಕಿನಿ ಧರಿಸಿ ತಮ್ಮ ಗೆಳೆಯನ ಜೊತೆ ಗೋವಾ ಬೀಚ್ ನಲ್ಲಿ ಕುಳಿತುಕೊಂಡಿರುವ ಫೋಟೋವೊಂದನ್ನು ಇನ್ ಸ್ಟಾಗ್ರಾಂ ನಲ್ಲಿ ಅಪ್ಲೋಡ್ ಮಾಡಿದ್ದು, ಇದೀಗ ಪರ-ವಿರೋಧ ಚರ್ಚೆಗಳಿಗೆ ಗ್ರಾಸರಾಗಿದ್ದಾರೆ.

ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ರಾಧಿಕಾ, ನಾನು ಟ್ರೋಲ್ ಆಗಿರೋ ವಿಚಾರ ನನಗೆ ತಿಳಿದಿಲ್ಲ. ನನ್ನ ಸಹಪಾಠಿಗಳು ಹೇಳಿದ ಬಳಿಕ ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಇದೊಂದು ಹಾಸ್ಯಾಸ್ಪದ ಸಂಗತಿಯಾಗಿದೆ. ಬೀಚ್ ನಲ್ಲಿ ನಾನು ಸೀರೆ ಉಟ್ಕೊಂಡು ನಡೆದಾಡಬೇಕು ಅಂತಾ ಜನ ನಿರೀಕ್ಷಿಸುತ್ತಿದ್ದಾರೆಯೇ ಅಂತ ಪ್ರಶ್ನಿಸಿದ್ದಾರೆ. ಟ್ರೋಲ್ ಮಾಡೋರ ಬಗ್ಗೆ ನನಗೆ ಗೊತ್ತಿಲ್ಲ. ಅವರಿಗೆ ಉತ್ತರ ಕೊಡುವ ಅವಶ್ಯಕತೆಯೂ ನನಗಿಲ್ಲ ಅಂತ ಖಡಕ್ಕಾಗಿ ಪ್ರತಿಕ್ರಿಯಿಸಿದ್ದಾರೆ.
ರಾಧಿಕಾ ಮಾತ್ರವಲ್ಲ ಈ ಹಿಂದೆ ಪ್ರಿಯಾಂಕಾ ಚೋಪ್ರಾ, ಈಶಾ ಗುಪ್ತಾ, ದೀಪಿಕಾ ಪಡುಕೋಣೆ, ಪರಿಣಿತಿ ಚೋಪ್ರಾ ಮೊದಲಾದವರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದರು.
https://www.instagram.com/p/BflPW8VHDI9/?utm_source=ig_embed&utm_campaign=embed_profile_upsell_control

Leave a Reply