ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ಯಶಸ್ಸಿನ ನಾಗಾಲೋಟದಲ್ಲಿರೋ ನಟಿ ರಚಿತಾ ರಾಮ್. ಕಮರ್ಶಿಯಲ್ ಚಿತ್ರಗಳಲ್ಲಿಯೂ ಭಾರೀ ಬೇಡಿಕೆ ಹಿಂದಿರೋ ಘಳಿಗೆಯಲ್ಲಿಯೇ ಭಿನ್ನ ಬಗೆಯ ಚಿತ್ರಗಳಲ್ಲಿಯೂ ನಟಿಸುತ್ತಿರುವ ರಚಿತಾ ರಾಮ್‍ಗೆ ಇದೀಗ ತಾವೇ ನಟಿಸಿರೋ ಚಿತ್ರವೊಂದರ ಸೀನು ಮತ್ತು ಫೋಟೋವೊಂದು ತುಂಬಾ ಫೇವರಿಟ್ ಆಗಿದೆ. ಮತ್ತದನ್ನು ರಚಿತಾ ಖುಷಿಯಿಂದಲೇ ಹೇಳಿಕೊಂಡಿದ್ದಾರೆ.
ಬಹುಶಃ ಡಬ್ಬಿಂಗ್ ಹಂತದಲ್ಲಿ ಸೆರೆ ಹಿಡಿದ ಚಿತ್ರವೊಂದನ್ನು ರಚಿತಾ ಸಾಮಾಜಿಕ ಜಾಲತಾಣಗಳ ಮೂಲಕ ಜಾಹೀರು ಮಾಡಿದ್ದಾರೆ. ಜೊತೆಗೆ ಇದು ತುಂಬಾ ಮುದ್ದು ಮುದ್ದಾಗಿರುವ, ತನಗೆ ತುಂಬಾ ಇಷ್ಟವಾದ ಫೋಟೋ ಅಂತಲೂ ರಚಿತಾ ಹೇಳಿಕೊಂಡಿದ್ದಾರೆ.
ಇದು ರಚಿತಾ ರಾಮ್ ನಟಿಸಿರೋ ರುಸ್ತುಂ ಚಿತ್ರದ ದೃಶ್ಯ. ಡಬ್ಬಿಂಗ್ ಹಂತದಲ್ಲಿ ರಚಿತಾ ಸೆರೆ ಹಿಡಿದಿರೋ ಈ ಚಿತ್ರದಲ್ಲಿ ವಿವೇಕ್ ಒಬೆರಾಯ್ ರಚಿತಾ ಕೆನ್ನೆ ಸವರಿ ಮುದ್ದು ಮಾಡುತ್ತಿರೋವಂಥಾ ರೊಮ್ಯಾಂಟಿಕ್ ಸೀನಿದೆ. ಇದು ಇದುವರೆಗಿನ ಅಷ್ಟೂ ಚಿತ್ರಗಳಲ್ಲಿ ರಚಿತಾಗೆ ತುಂಬಾ ಹಿಡಿಸಿರೋ ಚಿತ್ರವಂತೆ!
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
#favouritepicture❤ pic.twitter.com/pq2FtcBepZ
— Rachita Ram (@RachitaRamDQ) October 11, 2018

Leave a Reply