ರಾಜ್‍ಕುಮಾರ್ ಮಕ್ಕಳ ಜೊತೆ ನಾನು ಆ್ಯಕ್ಟಿಂಗ್ ಮಾಡ್ಬೇಕುಂತ ಅಮ್ಮನಿಗೆ ಆಸೆ ಇತ್ತು: ರಚಿತಾ ರಾಮ್

ಬೆಂಗಳೂರು: ವರನಟ ಡಾ. ರಾಜ್ ಕುಮಾರ್ ಮಕ್ಕಳ ಜೊತೆ ನಾನು ನಟನೆ ಮಾಡಬೇಕು ಅಂತ ನಟಿ ರಚಿತಾ ರಾಮ್ ಗದ್ಗದಿತರಾದರು.

ಕಂಠೀರವ ಸ್ಟೇಡಿಯಂನಲ್ಲಿ ಅಪ್ಪು ಅಂತಿಮ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಭಾವುಕರಾದರು. ಗುರು ಕಿರಣ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ನಾವು ಸೇರಿದ್ದೆವು. ಹಾಗೆ ಪಾರ್ಟಿ ಮುಗಿಸಿ ಹೊರಡುವಾಗ ಬಾಯ್, ಹುಷಾರು ಅಂದ್ರು. 3 ವರ್ಷ ಆದ ಮೇಲೆ ಅಪ್ಪು ಸರ್ ಸಿಕ್ಕಿದ್ರು ಎಂದು ಕಣ್ಣೀರು ಹಾಕಿದ್ರು.

PUNEET RAJKUMAR

ತುಂಬಾ ಬೇಜಾರು, ಸಂಕಟ ಆಗ್ತಿದೆ. ಕೈ ನಡುಗುತ್ತಿದೆ. ಮಾತೇ ಬರುತ್ತಿಲ್ಲ ಎಂದು ರಚಿತಾ ಬೇಸರ ವ್ಯಕ್ತಪಡಿಸಿದರು. ನಿನ್ನೆ ಸಂಜೆಯಿಂದಲೇ ನಟನ ಮೃತದೇಹವನ್ನು ಅಂತಿಮ ದರ್ಶನಕ್ಕೆ ಇಡಲಾಗಿದ್ದು, ಇದುವರೆಗೂ ಅಭಿಮಾನಿಗಳು, ಸೆಲೆಬ್ರಿಟ್ರಿಗಳು ಸೇರಿದಂತೆ ಸಾವುರಾರು ಮಂದಿ ಪುನೀತ್ ಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಕೇವಲ ಸ್ಯಾಂಡಲ್‍ವುಡ್ ಮಾತ್ರವಲ್ಲದೆ ತೆಲುಗು ಸ್ಟಾರ್ ಗಳು ಕೂಡ ಬಂದು ನಟನ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಇದನ್ನೂ ಓದಿ: ನಿಜವಾಗಲೂ ಭಗವಂತ ಪುನೀತ್‍ಗೆ ಬಹಳ ದೊಡ್ಡ ಅನ್ಯಾಯ ಮಾಡಿದ್ದಾನೆ: ಚಿರಂಜೀವಿ

ಅಪ್ಪು ಪುತ್ರಿ ಕೆಲ ಗಂಟೆಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದಿದ್ದು, ಸದಾಶಿವನಗರದಲ್ಲಿರುವ ಪುನೀತ್ ನಿವಾಸಕ್ಕೆ ತೆರಳಿದ್ದಾರೆ. ಧೃತಿ ತಮ್ಮ ತಂದೆಯ ಅಂತಿಮದ ದರ್ಶನ ಪಡೆಯಲಿದ್ದಾರೆ. ನಾಳೆ ಬೆಳಗ್ಗೆ ಪುನೀತ್ ಅಂತ್ಯಕ್ರಿಯೆ ನಡೆಯಲಿದೆ. ಇದನ್ನೂ ಓದಿ: ರಾಜಕುಮಾರನಂತೆ ಬಾಳಬೇಕಿದ್ದ ನನ್ನ ತಮ್ಮ ಇನ್ನಿಲ್ಲ ಅಂತಂದ್ರೆ ನಂಬಲು ಅಸಾಧ್ಯ: ಸುಧಾರಾಣಿ

Comments

Leave a Reply

Your email address will not be published. Required fields are marked *