ಹೆಚ್‍ಡಿಕೆ ಉದ್ದೇಶ ಒಳ್ಳೆಯದಾಗಿಲ್ಲ, ಜನಪರ ಉದ್ದೇಶ ಅವರಿಗಿಲ್ಲ: ಧ್ರುವನಾರಾಯಣ್

ಮೈಸೂರು: ಸಿಎಂ ಕುಮಾರಸ್ವಾಮಿ ಉದ್ದೇಶ ಒಳ್ಳೆಯದಾಗಿಲ್ಲ. ಅವರಿಗೆ ಜನಪರ ಉದ್ದೇಶವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಕಿಡಿಕಾರಿದರು.

ಮೇಕೆದಾಟು ಪಾದಯಾತ್ರೆ ವಿಚಾರವಾಗಿ ಹೆಚ್‍ಡಿಕೆ ಕಾಂಗ್ರೆಸ್ ಮಕ್ಮಲ್ ಟೋಪಿ ಹಾಕುತ್ತಿದೆ ಎಂದು ಟೀಕಿಸಿದ್ದರು. ಇದಕ್ಕೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಧ್ರುವನಾರಾಯಣ್ ಅವರು, ಯಾರು ಯಾರಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ? ಇದು ಕುಮಾರಸ್ವಾಮಿ ಅವರಿಗೆ ಗೊತ್ತಿದೆ. 20-20 ವೇಳೆ 2018ರಲ್ಲಿ ಕುಮಾರಸ್ವಾಮಿ ಅವರು ಮಕ್ಮಲ್ ಟೋಪಿ ಹಾಕಿದ್ದರು ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ಸೇವಾ ಭಾರತಿ ಟ್ರಸ್ಟ್​ನಿಂದ ಕಿಮ್ಸ್​​ಗೆ ಆಂಬುಲೆನ್ಸ್ ಹಸ್ತಾಂತರ

ಜೆಡಿಎಸ್ ಹತಾಶೆಯ ಮನೋಭಾವನೆಯಿಂದ ವರ್ತಿಸುತ್ತಿದೆ. ಜೆಡಿಎಸ್ ನಾಯಕರು ಕಾಂಗ್ರೆಸ್ ಕಡೆ ಬರುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಅವರನ್ನು ಹತಾಶರನ್ನಾಗಿಸಿದೆ. ಸೋಲು ನಿರಾಶೆಯಿಂದ ಕುಮಾರಸ್ವಾಮಿ ಅವರು ಈ ರೀತಿ ಮಾತನಾಡುತ್ತಿದ್ದಾರೆ. ಅವರ ಉದ್ದೇಶ ಒಳ್ಳೆಯದಾಗಿಲ್ಲ. ಜನಪರ ಉದ್ದೇಶ ಅವರಿಗಿಲ್ಲ. ಕೋಮುವಾದಿ ಪಕ್ಷವನ್ನು ದೂರ ಇಡಲು ನಾವು ಅವರಿಗೆ ಅವಕಾಶ ಕೊಟ್ಟಿದ್ದೇವೆ. ಕಾಂಗ್ರೆಸ್ ಪಕ್ಷ ಯಾವತ್ತು ಅನ್ಯಾಯ ಮಾಡಿಲ್ಲ. ಸಮ್ಮಿಶ್ರ ಸರ್ಕಾರದ ನಂತರವೂ ಪ್ರಧಾನಿ ದೇವೇಗೌಡರಿಗೆ ಬೆಂಬಲ ನೀಡಿದ್ದೇವೆ. ಆದರೂ ಜೆಡಿಎಸ್ ಅವಕಾಶವಾದಿ ರಾಜಕಾರಣ ಮಾಡುತ್ತಾರೆ ಎಂದು ವಿರೋಧ ವ್ಯಕ್ತಪಡಿಸಿದರು.

ಸಂಸದ ಪ್ರತಾಪ್ ಸಿಂಹ ಹೇಳಿಕೆಗೂ ತಿರುಗೇಟು ನೀಡಿದ ಅವರು, ಹನುಮನ್ ಪಾದಯಾತ್ರೆ, ರಾಮನ ಪಾದಯಾತ್ರೆಯಲ್ಲಿ ಅವರು ಬ್ಯುಸಿ ಇದ್ದಾರೆ. ಮತಧರ್ಮದ ಹೆಸರಿನಲ್ಲಿ ಪಾದಯಾತ್ರೆ ಮಾಡುತ್ತಾರೆ. ಈ ಮೂಲಕ ಅವರು ಜನರಿಗೆ ಮಕ್ಮಲ್ ಟೋಪಿ ಹಾಕುತ್ತಾರೆ. ಇದು ಜನರಿಗೆ ಗೊತ್ತಾಗಿದೆ ಎಂದು ವಾಗ್ದಾಳಿ ಮಾಡಿದರು. ಇದನ್ನೂ ಓದಿ:  ಪ್ರವಾಹ ಪರಿಹಾರ ತಕ್ಷಣ ಬಿಡುಗಡೆಗೆ ಸೂಚನೆ: ಕಾರಜೋಳ

ನಿಯಂತ್ರಣದಲ್ಲಿರುವ ಹಿಂದೂ ದೇವಾಲಯಗಳನ್ನು ಶೀಘ್ರವೇ ಕಾನೂನು ಮುಕ್ತ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ನಡೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಜನರನ್ನು ಬಕ್ರ ಮಾಡಲು ಮುಂದಾಗಿದೆ. ಬಿಜೆಪಿ ಯಾವಾಗಲೂ ಹಿಡನ್ ಅಜೆಂಡ್ ಹೊಂದಿದೆ. ಆರ್‌ಎಸ್‍ಎಸ್ ಯಾವ ರೀತಿ ಹೇಳುತ್ತೆ, ಆ ರೀತಿ ಮಾಡುತ್ತೆ. ಇದು ಹೊಸದೇನಲ್ಲ. ಮುಜರಾಯಿ ಇಲಾಖೆ ಚೆನ್ನಾಗಿ ಕೆಲಸ ಮಾಡುತ್ತಿದೆ. ದೇವಸ್ಥಾನದ ನಿರ್ವಹಣೆ ಚೆನ್ನಾಗಿದೆ ಎಂದರು.

Comments

Leave a Reply

Your email address will not be published. Required fields are marked *