ವಿಶೇಷ ವಿಮಾನದಲ್ಲಿ ಹೋದವರು ಕಾಂಗ್ರೆಸ್‌ ಢಮಾರ್‌ ಅಂದಾಗ ರೈಲಲ್ಲಿ ವಾಪಸಾದ್ರು: ಆರ್.ಅಶೋಕ್‌

ASHOK_ SESSION (2)

ಕಾರವಾರ: ಗೋವಾದಲ್ಲಿ ಸರ್ಕಾರ ರಚನೆಗೆ ಕಾಂಗ್ರೆಸ್‌ನವರು ಸರ್ಕಸ್‌ ಮಾಡಿದ್ದರು. ವಿಶೇಷ ವಿಮಾನದಲ್ಲಿ ಹೋದ ನಾಯಕರು ಕಾಂಗ್ರೆಸ್‌ ಢಮಾರ್‌ ಅಂದಾಗ ರೈಲಿನಲ್ಲಿ ವಾಪಸ್‌ ಬಂದರು ಎಂದು ಆರ್‌.ಅಶೋಕ್‌ ಲೇವಡಿ ಮಾಡಿದರು.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಚವೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉತ್ತರಪ್ರದೇಶದಲ್ಲಿ ಬುಲ್ಡೋಜರ್ ಸರ್ಕಾರ, ಜೆಸಿಬಿ ಸರ್ಕಾರ ಎಂದು ಟೀಕಿಸಿದರು. ಆದರೆ ಅಲ್ಲಿನ ಜನರು ಮತ್ತೆ ಅದೇ ಸರ್ಕಾರವನ್ನೇ ಆಯ್ಕೆ ಮಾಡಿದ್ದಾರೆ. ಗೋವಾದಲ್ಲಿ ಬಿಜೆಪಿ ಬರುವುದಿಲ್ಲ ಎಂದರು. ಕಾಂಗ್ರೆಸ್‌ನವರು ವಿಶೇಷ ವಿಮಾನದ ಮೂಲಕ ತೆರಳಿದ್ದರು.‌ ಸರ್ಕಾರ ಮಾಡಲು 40 ಮಂದಿಯನ್ನು ರೆಸಾರ್ಟ್‌ನಲ್ಲಿ ಕೂಡಿ ಹಾಕಿದ್ದರು. ಆದರೆ ಕಾಂಗ್ರೆಸ್ ಢಮಾರ್ ಅಂದಾಗ ವಿಶೇಷ ವಿಮಾನವಲ್ಲ, ರೈಲಿನಲ್ಲಿ ವಾಪಸಾದರು ಎಂದು ಕುಟುಕಿದರು. ಇದನ್ನೂ ಓದಿ: ಸಿಎಂಗೆ ಜೀರೊ ಟ್ರಾಫಿಕ್ ಕಲ್ಪಿಸಲು ಅಂಗಡಿ ಮುಂಗಟ್ಟು ಬಂದ್‌ – ಜನರ ಆಕ್ರೋಶ

ಇನ್ನೊಂದು ವರ್ಷದಲ್ಲಿ ಕರ್ನಾಟಕದಲ್ಲಿ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನವರು ಬೇಕೆಂದು ನಿತ್ಯ ಒಂದೊಂದು ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ದೇಶದಲ್ಲಿ 50 ವರ್ಷ ಕಾಂಗ್ರೆಸ್ ಆಡಳಿತ ನಡೆಸಿದೆ. ಆದರೆ ಅವರಿದ್ದಾಗ ಏನು ನಡೆಯಿತು ಎಂಬುದನ್ನು ಹೇಳುತ್ತಿಲ್ಲ. ಬಿಜೆಪಿ, ಜೆಡಿಎಸ್ ಸೇರಿದಂತೆ ಯಾವ ಪಕ್ಷಕ್ಕೂ ಇಷ್ಟು ವರ್ಷ ಆಡಳಿತ ನಡೆಸುವ ಅವಕಾಶ ದೊರೆತಿಲ್ಲ. ಅಷ್ಟೇ ಅಲ್ಲ ಅಮೆರಿಕ, ಲಂಡನ್ ದೇಶಗಳಲ್ಲಿಯೂ ಇಂತಹ ಅವಕಾಶ ಸಿಕ್ಕಿಲ್ಲ. ಹೀಗಿರುವಾಗ ಕಾಂಗ್ರೆಸ್ 50 ವರ್ಷದ ಆಡಳಿತದಲ್ಲಿ ಗರೀಬಿ ಹಠಾವೋ ಘೋಷಣೆಯೊಂದನ್ನು ಮಾಡಿರುವುದನ್ನು ಬಿಟ್ಟು ಬೇರೇನೂ ಮಾಡಿಲ್ಲ. ಬದಲಾಗಿ ಬಡವರನ್ನು ತುಳಿದಿದ್ದಾರೆ ಎಂದು ಕಿಡಿಕಾರಿದರು.

ಇದೀಗ ಚುನಾವಣೆ ಬಂದಿರುವ ಹಿನ್ನೆಲೆ ಬೇರೆ ಬೇರೆ ಆರೋಪ ಮಾಡುತ್ತಿದ್ದಾರೆ. ಇದು ಇನ್ನೂ ಹೆಚ್ಚಾಗಲಿದೆ.‌ ಕಾಂಗ್ರೆಸ್‌ನವರ ನಡೆ ಆಪಾದನೆಗಳ ಕಡೆ ಆಗಲಿದೆ. ನೀವು ಏನು ಮಾಡಿದ್ರಿ ಎಂದು ಕಾಂಗ್ರೆಸ್‌ನವರನ್ನು ಕೇಳಿದರೆ, ತಾವು ತಪ್ಪು ಮಾಡಿದ್ದೇವೆ, ನೀವು ಒಳ್ಳೇದು ಮಾಡಿದ್ದೀರಿ ಎಂದು ನಮಗೆ ಬುದ್ದಿವಾದ ಹೇಳುತ್ತಾರೆ. ಅವರಿಗೆ ಒಳ್ಳೆಯ ಕೆಲಸ ಮಾಡಲು ಸಾಧ್ಯವಿಲ್ಲ ಎಂಬ ಭಾವನೆ ಇದೆ.‌ ಆದರೆ ನಾವು ಇದೆಲ್ಲವನ್ನು ಮೀರಿ ಅಭಿವೃದ್ಧಿ ಮಾಡುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ರೈತ ವಿರೋಧಿ ಕೃಷಿ ಕಾಯ್ದೆ ಹಿಂಪಡೆಯಲು ಆಗ್ರಹ

ಪ್ರತಿಭಟನೆ ವೇಳೆ ಡಿ.ಕೆ.ಶಿವಕುಮಾರ್ ಬ್ಯಾರಿಕೇಡ್ ಮೇಲೆ ಹತ್ತಿ ನಿಂತ ಘಟನೆ ಕುರಿತು ಪ್ರತಿಕ್ರಿಯಿಸಿದ ಅಶೋಕ್, ಕಾಂಗ್ರೆಸ್‌ನ ಅಧ್ಯಕ್ಷರು ಗೌರವ ಇಟ್ಟುಕೊಂಡು ಪ್ರತಿಭಟನೆ ಮಾಡಬೇಕು. ಹುಡುಗಾಟ ಮಾಡುವುದು ಒಳ್ಳೆಯದಲ್ಲ. ಮುಂದೆ ಇನ್ನೂ ಒಂದು ವರ್ಷ ಹೋರಾಟ ಮಾಡಬೇಕಾಗಿದೆ ಎಂದು ಚಾಟಿ ಬೀಸಿದರು.

Comments

Leave a Reply

Your email address will not be published. Required fields are marked *