ಸಿದ್ದರಾಮಯ್ಯ ಹೇಳುವುದೆಲ್ಲ ಸುಳ್ಳು: ಅಶೋಕ್

ಹಾಸನ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುವುದೆಲ್ಲ ಸುಳ್ಳು ಎಂದು ಕಂದಾಯ ಸಚಿವ ಆರ್.ಅಶೋಕ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ನಗರದ ಹೊರವಲಯದಲ್ಲಿ ಒಕ್ಕಲಿಗರ ಸಮುದಾಯ ಭವನಕ್ಕೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಹೇಳುವುದೆಲ್ಲ ಸುಳ್ಳು. ಅವರು ಐದು ವರ್ಷ ಇದ್ದಾಗ ಯಾಕೆ ಜಾತಿಗಣತಿಯನ್ನು ಬಿಡುಗಡೆ ಮಾಡಲಿಲ್ಲ. ಜಾತಿಗಣತಿಯ ಆಯುಕ್ತ ಇನ್ನು ವರದಿಗೆ ಸಹಿನೇ ಹಾಕಿಲ್ಲ. ಈಗ ಬಿಜೆಪಿ ಬಂದಿದೆ ಎಂದು ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಜಾತಿಗಣತಿ ಮಾಡಿಸಿದವರು ನಾವಲ್ಲ ಅವರು. ಸಿದ್ದರಾಮಯ್ಯ ಆಡುತ್ತಿರುವುದು ರಾಜಕೀಯದ ಕಪಟನಾಟಕ ಎಂದು ಹರಿಹಾಯ್ದರು. ಇದನ್ನೂ ಓದಿ: ನಾವು ಹಿಂದೂಗಳನ್ನು ಮತಾಂತರ ಮಾಡ್ತೇವೆ ಏನ್ ಮಾಡ್ತೀರಾ- ಚರ್ಚ್ ಫಾದರ್ ಅವಾಜ್

ಈಗಲೇ ಕಾಂಗ್ರೆಸ್ ಕಾಣ್ತಾಯಿಲ್ಲ ಮುಂದಿನ ದಿನಗಳಲ್ಲಿ ಬ್ಯಾಟರಿ ಹಾಕಿ ಪಕ್ಷವನ್ನು ಹುಡುಕುವ ಪರಿಸ್ಥಿತಿ ಬರುತ್ತೆ. ಆರ್‍ಎಸ್‍ಎಸ್ ರಾಜಕೀಯ ಪಕ್ಷವಲ್ಲ. ಅದು ಒಂದು ಸಾರ್ವಜನಿಕ ಸಂಸ್ಥೆ. ನಾನು ಕೂಡ ಅಲ್ಲಿಂದಲೇ ಬಂದವನು. ಈ ವಿಷ್ಯದಲ್ಲಿ ಕಾಂಗ್ರೆಸ್ ನವರು ನಮಗೆ ಬುದ್ಧಿ ಹೇಳುವ ಅವಶ್ಯಕತೆ ಇಲ್ಲ. ಅವರಿಂದ ಬುದ್ಧಿ ಹೇಳಿಸಿಕೊಳ್ಳುವ ಅಗತ್ಯವೂ ನಮಗಿಲ್ಲ ಎನ್ನುವ ಮೂಲಕ ಎಚ್.ಸಿ.ಮಹದೇವಪ್ಪ ಅವರ ಮಾತಿಗೆ ತಿರುಗೇಟು ನೀಡಿದರು.

Comments

Leave a Reply

Your email address will not be published. Required fields are marked *