ಗದಗ: ಪಾಳಿ ವಿಷಯಕ್ಕೆ ಸಂಬಂಧಪಟ್ಟಂತೆ ಇಬ್ಬರು ಮಹಿಳಾ ಕಂಡಕ್ಟರ್‌ಗಳು ಬೀದಿ ರಂಪಾಟ ಮಾಡಿಕೊಂಡ ಘಟನೆ ಗದಗನ ಜಿಮ್ಸ್ ಆಸ್ಪತ್ರೆಯ ಆವರಣದಲ್ಲಿ ನಡೆದಿದೆ.
ಕಳೆದ ಎರಡು ದಿನಗಳ ಹಿಂದೆ ನಡೆದ ಈ ಬೀದಿ ರಂಪಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು ಸಾರ್ವಜನಿಕರ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ನಗರ ಸಾರಿಗೆಯ ಇಬ್ಬರು ನಿರ್ವಾಹಕಿಯರು ಪಾಳಿಯ ವಿಷಯಕ್ಕೆ ಬಾಯಿಗೆ ಬಂದಂತೆ ಅವಾಚ್ಯ ಪದಗಳನ್ನು ಬಳಸಿ ಬೈದಾಡಿಕೊಂಡಿದ್ದಾರೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಕಿತ್ತಾಡಿಕೊಂಡ ಮಹಿಳಾ ಕಂಡಕ್ಟರ್‌ಗಳ ಈ ಬೀದಿ ರಂಪಾಟಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಅಷ್ಟೇ ಅಲ್ಲದೆ ಎರಡು ಬಸ್ಸುಗಳಲ್ಲಿ ಇದ್ದ ಪ್ರಯಾಣಿಕರು ಯಾಕಾದರೂ ಈ ಸರ್ಕಾರಿ ಬಸ್ ಏರಿದೆ ಅಂತ ಕಿಡಿಕಾರಿದ್ದಾರೆ. ನಿರ್ವಾಹಕಿಯರ ಹಾದಿ ರಂಪಾಟ ನೋಡಿದ ಮೇಲಾಧಿಕಾರಿಗಳು ಇಬ್ಬರಿಗೂ ಕ್ಲಾಸ್ ತೆಗೆದುಕೊಂಡು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎಂದು ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.
https://www.youtube.com/watch?v=efo0zDEVT-w
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply