ಮಹಿಳೆಯೊಂದಿಗೆ 14 ಸಾವಿರ ಕಿ.ಮೀ ಪ್ರಯಾಣಿಸಿದ ಹೆಬ್ಬಾವು!

ಕ್ಯಾನ್ಬೆರಾ: ಸ್ಕಾಟ್ಲೆಂಡ್ ಮಹಿಳೆಯೊಬ್ಬರ ಲಗೇಜಿನಲ್ಲಿ ಹೆಬ್ಬಾವೊಂದು ಬರೋಬ್ಬರಿ 14 ಸಾವಿರ ಕಿ.ಮೀ ಪ್ರಯಾಣ ಮಾಡಿರುವ ಆಘಾತಕಾರಿ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

ಸ್ಕಾಟ್ಲೆಂಡ್ ಮೂಲದ ಮರಿಯಾ ಬೋಕ್ಸಾಲ್ ಮಹಿಳೆಯ ಲಗೇಜಿನಲ್ಲಿ ಹೆಬ್ಬಾವು ಕಂಡು ಬಂದಿದೆ. ಬೋಕ್ಸಾಲಾ ಅವರು ರಜೆ ಬಳಿಕ ಆಸ್ಟ್ರೇಲಿಯಾದಿಂದ ಸ್ಕಾಟ್ಲೆಂಡ್‍ಗೆ ತೆರಳುತ್ತಿದ್ದರು. ಅವರ ಜೊತೆ ಲಗೇಜಿನಲ್ಲಿ ಶೂ ಒಳಗೆ ಹೆಬ್ಬಾವು ಸೇರಿಕೊಂಡಿದೆ. ಆದರೆ ಅದನ್ನು ಬೋಕ್ಸಾಲ್ ಗಮನಿಸಿರಲಿಲ್ಲ. ಕೊನೆಗೆ ಹೆಬ್ಬಾವಿನ ಜೊತೆ ಬರೋಬ್ಬರಿ 14,000 ಕಿ.ಮೀವರೆಗೂ ಪ್ರಯಾಣ ಮಾಡಿದ್ದಾರೆ.

ಮಹಿಳೆ ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ಏರ್‌ಪೋರ್ಟ್‌ ಗೆ ಬಂದಿದ್ದಾರೆ. ಅಲ್ಲಿ ಬ್ಯಾಗಿನ ಪರಿಶೀಲನೆ ಮಾಡುವಾಗ ಈ ಹೆಬ್ಬಾವು ಪತ್ತೆಯಾಗಿದೆ. ತಕ್ಷಣ ಮಹಿಳೆ ಪ್ರಾಣಿ ರಕ್ಷಣಾ ಸಂಗ್ರಹಾಲಯಕ್ಕೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಕ್ಷಣ ಸ್ಥಳಕ್ಕೆ ಬಂದು ಬ್ಯಾಗಿನಿಂದ ಹೆಬ್ಬಾವನ್ನು ಯಶಸ್ವಿಯಾಗಿ ತೆಗೆದಿದ್ದಾರೆ.

ಮೊದಲಿಗೆ ನಾನು ಅದನ್ನು ತಮಾಷೆ ಮಾಡಲು ಕುಟುಂಬದವರು ಆಟಿಕೆ ಅಂದರೆ ನಕಲಿ ಹಾವನ್ನು ಇರಿಸಲಾಗಿದೆ ಎಂದುಕೊಂಡಿದೆ. ಆದರೆ ಅದನ್ನು ಹೊರಗಡೆಯಿಂದ ಮುಟ್ಟಿದಾಗ ಅದು ಅಲಗಾಡಿತು. ಆ ಕ್ಷಣ ನನಗೆ ನಿಜವಾಗಿಯೂ ಆಘಾತವಾಗಿತ್ತು ಎಂದು ಬೋಕ್ಸಾಲ್ ಹೇಳಿದ್ದಾರೆ.

ನಮಗೆ ಕರೆ ಬಂದು ಬ್ಯಾಗಿನಲ್ಲಿ ಶೂ ಒಳಗೆ ಅಡಗಿದ್ದ ಹೆಬ್ಬಾವನ್ನು ಸುರಕ್ಷಿತವಾಗಿ ಹೊರ ತೆಗೆದಿದ್ದೇವೆ. ಮಚ್ಚೆಯುಳ್ಳ ಸ್ಪಾಟ್ಟೆಡ್ ಹೆಬ್ಬಾವು ಎಂದು ಗುರುತಿಸಲಾಗಿದೆ. ಇದು ಶೂ ಒಳಗೆ ತನ್ನ ಪೊರೆಯನ್ನು ಬಿಟ್ಟಿತ್ತು ಎಂದು ಪ್ರಾಣಿ ರಕ್ಷಕ ಅಧಿಕಾರಿ ಟೇಲರ್ ಜಾನ್ಸ್ಟೋನ್ ತಿಳಿಸಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಇದೇ ಮೊದಲ ಬಾರಿಗೆ ಹಾವು ಪತ್ತೆಯಾಗಿಲ್ಲ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ವ್ಯಕ್ತಿಯೊಬ್ಬ 20 ಜೀವಂತ ಹಾವುಗಳನ್ನು ತನ್ನ ಹ್ಯಾಂಡ್ ಬ್ಯಾಗಿನಲ್ಲಿ ಇಟ್ಟುಕೊಂಡು ಜರ್ಮನಿಯಿಂದ ರಷ್ಯಾಕ್ಕೆ ವಿಮಾನದ ಮೂಲಕ ಪ್ರಯಾಣ ಬೆಳೆಸಿದ್ದನು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *