ಮನದಾಸೆ ಬಿಚ್ಚಿಟ್ಟ ಗ್ಲಾಮರ್ ಲುಕ್‍ನಲ್ಲಿ ಮಿಂಚಿದ್ದ ಚುನಾವಣಾ ಅಧಿಕಾರಿ

ಲಕ್ನೋ: ಲೋಕಸಭಾ ಚುನಾವಣೆಯಲ್ಲಿ ಹಳದಿ ಸೀರೆ ಧರಿಸಿ ಇವಿಎಂ ಮಷಿನ್ ಹಿಡಿದು ಗ್ಲಾಮರ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದ ಪಿಡಬ್ಲ್ಯೂಡಿ ಅಧಿಕಾರಿ ತಾವು ‘ಬಿಗ್‍ಬಾಸ್’ ಶೋಗೆ ಹೋಗಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಪಿಡಬ್ಲ್ಯೂಡಿ ಅಧಿಕಾರಿ ರೀನಾ ದ್ವಿವೇದಿ ಅವರು ‘ಬಿಗ್‍ಬಾಸ್’ ಶೋನ ಮುಂದಿನ ಆವೃತ್ತಿಯಲ್ಲಿ ಭಾಗವಹಿಸುವ ಆಸೆ ವ್ಯಕ್ತಪಡಿಸಿದ್ದಾರೆ. ನನ್ನ ಕುಟುಂಬದವರು ನನಗೆ ಬೆಂಬಲ ನೀಡುತ್ತಿದ್ದಾರೆ. ಹೀಗಾಗಿ ಮುಂದೆ ನನಗೆ ಬಿಗ್‍ಬಾಸ್ ನಲ್ಲಿ ಅವಕಾಶ ಕೊಟ್ಟರೆ ಶೋನಲ್ಲಿ ಸ್ಪರ್ಧಿಯಾಗಿ ಹೋಗಲು ಇಚ್ಛಿಸಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಧರಿಸುವ ಬಟ್ಟೆಯಿಂದ ಮಹಿಳೆಯನ್ನು ವ್ಯಾಖ್ಯಾನಿಸಬಾರದು- ಇವಿಎಂ ಹಿಡಿದ ಅಧಿಕಾರಿ ಮಾತು

ನನ್ನ ಫೋಟೋ ಮೂಲಕ ಜನಪ್ರಿಯತೆ ಬಂದಿರುವುದು ಸಂತಸವಾಗಿದೆ. ತನ್ನ ಮಗ ಅದಿತ್ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಆತನ ಸ್ನೇಹಿತರು ಕೂಡ ನನ್ನ ಬಗ್ಗೆ ಕೇಳುತ್ತಿದ್ದಾರೆ ಎಂದು ರೀನಾ ಹೇಳಿದ್ದಾರೆ.

ರೀನಾ ದ್ವಿವೇದಿ ಅವರು ಚುನಾವಣೆ ಸಂದರ್ಭದಲ್ಲಿ ಗ್ಲಾಮರ್ ಲುಕ್‍ನಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರು. ಇವರು ಹಳದಿ ಸೀರೆ ಉಟ್ಟು, ಕೂಲಿಂಗ್ ಗ್ಲಾಸ್ ಹಾಕಿಕೊಂಡು ಕೈಯಲ್ಲಿ ಇವಿಎಂ ಹಿಡಿದುಕೊಂಡು ಕರ್ತವ್ಯಕ್ಕೆ ಹಾಜರಾಗಿದ್ದರು. ಅಂದು ಕ್ಲಿಕ್ಕಿಸಿದ್ದ ಅವರ ಗ್ಲಾಮರ್ ಲುಕ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

Comments

Leave a Reply

Your email address will not be published. Required fields are marked *