ಪದ್ಮಭೂಷಣ ಪ್ರಶಸ್ತಿಗೆ ಪಿ.ವಿ. ಸಿಂಧು ಶಿಫಾರಸು

ನವದೆಹಲಿ: ಭಾರತದ ಖ್ಯಾತ ಬ್ಯಾಂಡ್ಮಿಟನ್ ಆಟಗಾರ್ತಿ ಪಿ.ವಿ ಸಿಂಧು ಅವರನ್ನು ಪದ್ಮ ಭೂಷಣ ಪ್ರಶಸ್ತಿಗೆ ಕ್ರೀಡಾ ಇಲಾಖೆಯು ಶಿಫಾರಸು ಮಾಡಿದೆ. ಈ ಮೂಲಕ ಪ್ರಸ್ತುತ ವರ್ಷದಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಶಿಫಾರಸುಗೊಂಡ ಎರಡನೇ ಕ್ರೀಡಾಪಟು ಆಗಿದ್ದಾರೆ.

ಕಳೆದ ವರ್ಷ ರಿಯೋ ಒಲಂಪಿಕ್‍ನಲ್ಲಿ ಬೆಳ್ಳಿ ಪದಕವನ್ನು ಜಯಿಸುವ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದ ಸಿಂಧು, ನಂತರದಲ್ಲಿ ತಮ್ಮ ಅತ್ಯುತ್ತಮ ಫಾರ್ಮ್ ಮುಂದುವರೆಸಿದ್ದರು. 2017ರಲ್ಲಿ ಇಂಡಿಯನ್ ಓಪನ್ ಸೀರಿಸ್ ಹಾಗೂ ಸಯ್ಯದ್ ಮೋದಿ ಗ್ರಾಂಡ್ ಪ್ರಶಸ್ತಿಯನ್ನು ಜಯಿಸಿದ್ದರು. ಕಳೆದ ವಾರ ನಡೆದ ಕೊರಿಯಾ ಸೂಪರ್ ಸೀರಿಸ್‍ನಲ್ಲಿ ಜಪಾನ್‍ನ ನೊಜೊಮಿ ಒಕುಹರಾ ವಿರುದ್ಧ ಜಯಸಾಧಿಸಿ ಪ್ರಶಸ್ತಿ ಜಯಿಸಿದ್ದರು.

ಸಿಂಧು ಅವರ ಪರಿಶ್ರಮ ಹಾಗೂ ಸಾಧನೆಗಳು ಅವರನ್ನು ಈ ಪ್ರಶಸ್ತಿಗೆ ಶಿಪಾರಸು ಮಾಡುವಂತೆ ಮಾಡಿದೆ. ಕ್ರೀಡಾ ಇಲಾಖೆಯ ವತಿಯಿಂದ ಸಿಂಧು ಅವರ ಹೆಸರನ್ನು ಪದ್ಮಭೂಷಣದ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಹಲವು ಭಾರತೀಯರಿಗೆ ಸಿಂಧು ಸ್ಪೂರ್ತಿಯಾಗಿದ್ದಾರೆ ಎಂದು ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಈ ಪ್ರಶಸ್ತಿಗೆ ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ, ಹಾಲಿ ವಿಕೆಟ್ ಕೀಪರ್ ಎಂ.ಎಸ್.ಧೋನಿ ಅವರನ್ನು ಬಿಸಿಸಿಐ ಶಿಫಾರಸು ಮಾಡಿತ್ತು.

Comments

Leave a Reply

Your email address will not be published. Required fields are marked *