ಇತಿಹಾಸ ಪ್ರಸಿದ್ಧ ಪುತ್ತೂರಿನ ಮಹಾಲಿಂಗೇಶ್ವರ ಜಾತ್ರೆಯಲ್ಲಿ ಮುಸ್ಲಿಮರ ಆಟೋಗಳಿಗೆ ನಿಷೇಧ

ಮಂಗಳೂರು: ರಾಜ್ಯದಲ್ಲಿ ಹಿಜಬ್ ಸಂಘರ್ಷದಿಂದ ಶುರುವಾಗಿರುವ ಧರ್ಮ ದಂಗಲ್ ಸದ್ಯಕ್ಕೆ ನಿಲ್ಲೋ ಹಾಗೆ ಕಾಣುತ್ತಿಲ್ಲ. ಇದೀಗ ದಕ್ಷಿಣ ಕನ್ನಡದ ಪುತ್ತೂರಿನ ಪ್ರಸಿದ್ಧ ಮಹಾಲಿಂಗೇಶ್ವರ ಜಾತ್ರೆಯಲ್ಲಿ ಮುಸ್ಲಿಮರ ಆಟೋಗಳಿಗೆ ನಿಷೇಧ ಹೇರಲಾಗಿದೆ.

ರಾಜ್ಯದಲ್ಲಿ ಧರ್ಮ ದಂಗಲ್ ದಿನಕ್ಕೊಂದು ವಿಷಯ, ರೂಪ, ಬಣ್ಣ ಪಡೀತಿದೆ. ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧದ ಜೊತೆಗೆ ಇದೀಗ ಮುಸ್ಲಿಂ ಡ್ರೈವರ್ಸ್ ಬಹಿಷ್ಕಾರ ಆಗಿದೆ. ಜಾತ್ರೆ ವೇಳೆ ಹಿಂದೂಗಳ ಆಟೋಗಳನ್ನೇ ಬಳಸುವಂತೆ ಹಿಂದೂಜಾಗರಣ ವೇದಿಕೆ ಪುತ್ತೂರಿನಾದ್ಯಂತ ಆಟೋಗಳಿಗೆ ಭಗವಾಧ್ವಜ ನೀಡಿ ಅಭಿಯಾನ ಆರಂಭಿಸಿದೆ. ನಾಳೆಯಿಂದ ಏಪ್ರಿಲ್ 20ರವರೆಗೆ ಮಹಾಲಿಂಗೇಶ್ವರ ಜಾತ್ರೆ ನಡೆಯಲಿದ್ದು, ಲಕ್ಷಾಂತರ ಜನ ಸೇರಲಿದ್ದಾರೆ. ಇದನ್ನೂ ಓದಿ: ಹಿಂದೂಯೇತರ ಅಂಗಡಿಯಲ್ಲಿದ್ದ ಕಲ್ಲಂಗಡಿ, ತೆಂಗಿನಕಾಯಿ ಒಡೆದುಹಾಕಿದ ಶ್ರೀರಾಮಸೇನೆ ಕಾರ್ಯಕರ್ತರು

ಭಗವಾಧ್ವಜ ಇರುವ ಆಟೋ ಮಾತ್ರ ಬಳಸೋಣ. ಜಾತ್ರೆಗೆ ಬರುವ ನೆಪದಲ್ಲಿ ಹಿಂದೂ ಹೆಣ್ಣುಮಕ್ಕಳಿಗೆ ಮೋಸ ಮಾಡ್ತಾರೆ. ಹಿಂದೂ ಹೆಣ್ಣುಮಕ್ಕಳನ್ನು ಹಿಂದೂಗಳೇ ರಕ್ಷಿಸಬೇಕಾದ ಸಮಯ ಬಂದಿದೆ. ಅಲ್ಲದೆ, ಹಿಂದುತ್ವದ ಹೆಸರಿನಲ್ಲಿ ಬಂದ ಸರ್ಕಾರ ಹಿಂದೂಗಳಿಗೆ ಸಹಕಾರ ನೀಡುತ್ತಿಲ್ಲ. ಹಿಂದೂಗಳ ಮೇಲೆಯೇ ಕೇಸ್‍ಗಳನ್ನು ದಾಖಲಿಸಲಾಗುತ್ತಿದೆ ಎಂದು ಸರ್ಕಾರದ ವಿರುದ್ಧವೂ ಹಿಂದೂಜಾಗರಣ ವೇದಿಕೆ ಮುಖಂಡರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಲವ್ ಜಿಹಾದ್‍ಗೆ ಮುಂದಾದವರ ಮನೆ ಹೊಕ್ಕು ಹೊಡೆಯಬೇಕು: EX MLC ನಾರಾಯಣಸಾ ಭಾಂಡಗೆ

Comments

Leave a Reply

Your email address will not be published. Required fields are marked *