ದೇವರೊಂದಿಗೆ ದೇವರಾದ ಪುನೀತ್ ರಾಜ್‌ಕುಮಾರ್

ಬೆಳಗಾವಿ: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಅಗಲಿ ಎರಡು ತಿಂಗಳು ಕಳೆದರೂ ಅಭಿಮಾನಿಗಳ ಮನದಲ್ಲಿ ಅಜರಾಮರರಾಗಿದ್ದಾರೆ. ಅಭಿಮಾನಿಗಳು ಒಂದಲ್ಲಾ ಒಂದು ರೀತಿಯಲ್ಲಿ ತಮ್ಮ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎನ್ನುವಂತೆ ಗೋಕಾಕ್‌ನ ಅಂಗಡಿಯೊಂದರಲ್ಲಿ ಅಭಿಮಾನಿಯೊಬ್ಬರು ಅಪ್ಪು ಫೋಟೋ ಫ್ರೇಮ್ ಅನ್ನು ದೇವರ ಫೋಟೋ ಬಳಿ ಇಟ್ಟು ಪೂಜೆ ಸಲ್ಲಿಸಿ ಅಭಿಮಾನ ಮೆರೆದಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ ಶನಿವಾರ ಉದ್ಯಮಿ ಆನಂದ ಗೋಟಡಕಿ ಒಡೆತನದ ಕಲ್ಯಾಣಿ ಸ್ವೀಟ್ಸ್ ಉದ್ಘಾಟನೆ ಸಮಾರಂಭ ನಡೆದಿತ್ತು. ಈ ವೇಳೆ ಸತ್ಯಂ ಫೋಟೋ ಫ್ರೇಮ್ ವರ್ಕ್ಸ್ ಸಿಬ್ಬಂದಿ ಅಪ್ಪು ಫೋಟೋ ಫ್ರೇಮ್ ಗಿಫ್ಟ್ ನೀಡಿದ್ದರು. ಇದನ್ನೂ ಓದಿ:  ಬಿಹಾರ್‌ ಸಿಎಂ ಪುತ್ರ ತನ್ನ ತಂದೆಗಿಂತಲೂ 5 ಪಟ್ಟು ಹೆಚ್ಚು ಶ್ರೀಮಂತ

ಈ ಫೋಟೋ ಫ್ರೇಮ್ ಅನ್ನು ದೇವರ ಬಳಿ ಇಟ್ಟು, ಪೂಜೆ ಸಲ್ಲಿಸಲಾಯಿತು. ಲಕ್ಷ್ಮೀ ದೇವಿ ಪಕ್ಕ ಅಪ್ಪು ಫೋಟೋ ಇಟ್ಟು ನಮನ ಸಲ್ಲಿಸಲಾಯಿತು. ಕಾರ್ಯಕ್ರಮಕ್ಕೆ ಬಂದ ಪ್ರತಿಯೊಬ್ಬರಿಂದ ದೇವರ ಜೊತೆ ಅಪ್ಪುವಿಗೂ ನಮನ ಸಲ್ಲಿಸಿದರು. ಅಭಿಮಾನಿಗಳ ಮನದಲ್ಲಿ ಪವರ್‌ಸ್ಟಾರ್ ದಿವಂಗತ ಪುನೀತ್ ರಾಜಕುಮಾರ್ ದೇವರೊಂದಿಗೆ ದೇವರಾಗಿದ್ದಾರೆ. ಇದನ್ನೂ ಓದಿ: ರಾವತ್ ಇದ್ದ ಹೆಲಿಕಾಪ್ಟರ್ ಪತನದ ತನಿಖಾ ವರದಿ ಮುಂದಿನ ವಾರ ಸಲ್ಲಿಕೆ?

Comments

Leave a Reply

Your email address will not be published. Required fields are marked *