ಮಾತೃ ಭಾಷೆಯಲ್ಲಿ ಕೊಡಗಿನ ಜನರಿಗೆ ರಶ್ಮಿಕಾ ಮಂದಣ್ಣ ಮನವಿ

‘ಪುಷ್ಪ’ ಬ್ಯೂಟಿ ರಶ್ಮಿಕಾ ಮಂದಣ್ಣ (Rashmika Mandanna) ಟಾಪ್ ನಟಿಯರಲ್ಲಿ ಒಬ್ಬರಾಗಿ ಸೌತ್ ಮತ್ತು ಬಾಲಿವುಡ್‌ನಲ್ಲಿ ಗುರುತಿಸಿಕೊಳ್ತಿದ್ದಾರೆ. ಇದೀಗ ಮಾತೃ ಭಾಷೆಯಲ್ಲಿ ರಶ್ಮಿಕಾ ಮಾತನಾಡಿ ಕೊಡಗಿನ ಜನರ ಮನಗೆದ್ದಿದ್ದಾರೆ. ಹುಟ್ಟೂರಿನ ಜನರಿಗೆ ನಟಿ ಪ್ರೀತಿಯಿಂದ ಮನವಿಯೊಂದನ್ನು ಮಾಡಿದ್ದಾರೆ.

ಎಲ್ಲರಿಗೂ ನಮಸ್ಕಾರ, ಕೊಡಗಿನಲ್ಲಿ ಫ್ರೆಂಡ್ ಮದುವೆಗೆ ಬಂದ್ದೀನಿ. ಕೊಡಗಿನಲ್ಲಿರುವಾಗ ನಿಮ್ಮ ಜೊತೆ ಮಾತನಾಡೋದು ಖುಷಿ ವಿಚಾರ ಹೀಗಾಗಿ ಈ ವಿಡಿಯೋ ಮಾಡಿದ್ದೇನೆ. ನಿಮ್ಮ ಆಶೀರ್ವಾದಿಂದ ಇಷ್ಟು ಮುಂದೆ ಬಂದಿದ್ದೀನಿ. ಈಗಲೂ ನಾನು ಕಾವೇರಮ್ಮ ಮತ್ತು ಇಗ್ಗುತಪ್ಪ ಆಶೀರ್ವಾದಿಂದ ಮುಂದುವರಿಯುತ್ತಿದ್ದೇನೆ. ನೀವು ಯಾವಾಗಲೂ ನನಗೆ ಸಪೋರ್ಟ್ ಮಾಡಿದ್ದೀರಾ. ಇನ್ನಷ್ಟು ಹಾರ್ಡ್ ವರ್ಕ್ ಮಾಡಿ ನಾನು ಮುಂದೆ ಮತ್ತಷ್ಟು ಸಾಧಿಸುತ್ತೇನೆ ಎಂದು ಪ್ರಾಮಿಸ್ ಮಾಡುತ್ತೇನೆ. ನಿಮ್ಮೆಲ್ಲರ ಬೆಂಬಲಕ್ಕೆ ಥ್ಯಾಂಕ್ಸ್. ನೀವು ಯಾವಾಗಲೂ ನಮ್ಮ ಮನಸ್ಸಲ್ಲಿ ಇರುತ್ತೀರಾ ಎಂದು ನಟಿ ಧನ್ಯವಾದ ತಿಳಿಸಿದ್ದಾರೆ. ನಟಿ ಶೇರ್ ಮಾಡಿರುವ ಈ ವಿಡಿಯೋ ಕೊಡಗು ಜನರ ಮನಗೆದ್ದಿದೆ. ನಮ್ಮ ಬೆಂಬಲ ಎಂದಿಗೂ ನಿಮಗಿದೆ ಎಂದಿದ್ದಾರೆ.

ಅಂದಹಾಗೆ, ರಶ್ಮಿಕಾ ಮಂದಣ್ಣಗೆ ಈಗ ಬಾಲಿವುಡ್‌ನಲ್ಲಿ ಭಾರೀ ಬೇಡಿಕೆ ಹೊಂದಿದ್ದಾರೆ. ಆಯುಷ್ಮಾನ್ ಖುರಾನಾ ಜೊತೆ ಹೊಸ ಸಿನಿಮಾ ಮಾಡಲು ಮುಂದಾಗಿದ್ದಾರೆ. ಹಾರರ್ ಕಾಮಿಡಿ ಚಿತ್ರದಲ್ಲಿ ಪುಷ್ಪ ನಟಿ ಕಾಣಿಸಿಕೊಳ್ತಿದ್ದಾರೆ. ಇದನ್ನೂ ಓದಿ:ಸಿಹಿಸುದ್ದಿ ಕೊಟ್ಟ ನಟಿ- ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಹರ್ಷಿಕಾ ದಂಪತಿ

ಇದರ ಜೊತೆಗೆ ಪುಷ್ಪ 2 (Pushpa 2), ಅನಿಮಲ್ 2, ಸಿಖಂದರ್, ರೈನ್‌ಬೋ, ದಿ ಗರ್ಲ್‌ಫ್ರೆಂಡ್ ಸಿನಿಮಾ ಸೇರಿದಂತೆ ಹಲವು ಚಿತ್ರಗಳು ರಶ್ಮಿಕಾ ಕೈಯಲ್ಲಿವೆ.‌