ತಂಗಿ ಬಗ್ಗೆ ರಶ್ಮಿಕಾ ಮಂದಣ್ಣ ಶಾಕಿಂಗ್ ಕಾಮೆಂಟ್: ಹೀಗ್ಯಾಕಂದ್ರು ಶ್ರೀವಲ್ಲಿ?

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಬೇಡಿಕೆಯಲ್ಲಿದ್ದಾರೆ. ಸದ್ಯ ‘ಛಾವಾ’ (Chhavva) ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ, ಪುಟ್ಟ ತಂಗಿ ಶಿಮನ್ ಮಂದಣ್ಣ ಬಗ್ಗೆ ನಟಿ ಮಾತನಾಡಿದ್ದಾರೆ. ನನ್ನ ತಂಗಿಗೆ ಐಷಾರಾಮಿ ಸವಲತ್ತು ಸಿಗಬಾರದು ಎಂದು ನಟಿ ಶಾಕಿಂಗ್ ಕಾಮೆಂಟ್ ಮಾಡಿದ್ದಾರೆ.

ರಶ್ಮಿಕಾ ಮಂದಣ್ಣ ಮಾತನಾಡಿ, ನನ್ನ ಮತ್ತು ತಂಗಿ ಮಧ್ಯೆ 16 ವರ್ಷಗಳ ಅಂತರ ಇದೆ. ಇದು ನಿನ್ನ ಜೀವನ. ನಿನ್ನ ಜೀವನದಲ್ಲಿ ನಮ್ಮನ್ನು ಸೇರಿಸಿಕೊಳ್ಳಬೇಡ ಎಂದು ನನ್ನ ಪೋಷಕರು ಹೇಳಿದ್ದರು. ನನ್ನ ತಂಗಿ ಕೇಳಿದ್ದನ್ನು ಪಡೆದುಕೊಳ್ಳಬಹುದು. ಬಾಲ್ಯದಲ್ಲಿ ನಾನು ಹೇಗೆ ಇದ್ದೆನೋ ಅದೇ ವಾತಾವರಣ ಅವಳಿಗೂ ಸಿಗಬೇಕು. ಆ ವಾತಾವರಣ ಸಿಕ್ಕಿದ್ದರಿಂದಲೇ ನಾನು ಈಗ ಹೀಗೆ ಇದ್ದೇನೆ. ನಾನು ಭದ್ರತೆ, ಕಂಫರ್ಟ್ ಕೊಡಬಹುದು. ಆದರೆ ಐಷಾರಾಮಿ ಸವಲತ್ತುಗಳನ್ನು ಕೊಡುವುದಿಲ್ಲ. ಅವಳು ಕೂಡ ಕಷ್ಟಪಟ್ಟು ಮುಂದೆ ಬರಬೇಕು ಎಂಬರ್ಥದಲ್ಲಿ ನಟಿ ಮಾತನಾಡಿದ್ದಾರೆ.

ಸದ್ಯ ನಟಿ ‘ಪುಷ್ಪ 2’ (Pushpa 2) ಮತ್ತು ‘ಛಾವಾ’ ಸಿನಿಮಾದ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ರಶ್ಮಿಕಾ ಮುಟ್ಟಿದೆಲ್ಲಾ ಚಿನ್ನ ಆಗುತ್ತಿದೆ. ಸಾಲು ಸಾಲು ಸಿನಿಮಾಗಳು ಸಕ್ಸಸ್ ಕಾಣುತ್ತಿದೆ. ಹಾಗಾಗಿ ಸಹಜವಾಗಿ ಅವರಿಗೆ ಬೇಡಿಕೆ ಹೆಚ್ಚಾಗಿದೆ.

ಇನ್ನೂ ಕುಬೇರ, ರೈನ್‌ಬೋ, ದಿ ಗರ್ಲ್‌ಫ್ರೆಂಡ್, ಅನಿಮಲ್ 2‌, ಪುಷ್ಪ ಪಾರ್ಟ್‌ 3 ಸೇರಿದಂತೆ ಹಲವು ಚಿತ್ರಗಳು ನಟಿಯ ಕೈಯಲ್ಲಿವೆ.