‘ಅಲ್ಲು ಅರ್ಜುನ್‌’ ಫ್ಯಾನ್ಸ್‌ಗೆ ಪುಷ್ಪರಾಜ್‌ ವಾರ್ನಿಂಗ್

ತೆಲಂಗಾಣದಲ್ಲಿ ಸಾಕಷ್ಟು ಬೆಳವಣಿಗೆಗಳು ಆಗುತ್ತಿವೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ (Revanth Reddy) ಮತ್ತು ಅಲ್ಲು ಅರ್ಜುನ್ (Allu Arjun) ವಾಕ್ಸಮರದ ಹಿನ್ನೆಲೆ ನಟನಿಗೆ ಫೇಕ್ ಐಡಿ, ಫೇಕ್ ಪ್ರೊಪೈಲ್‌ಗಳ ಕಾಟ ಶುರುವಾಗಿದೆ. ಹಾಗಾಗಿ ಅಭಿಮಾನದ ಹೆಸರಿನಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡುವವರಿಗೆ ಅಲ್ಲು ಅರ್ಜುನ್ ವಾರ್ನಿಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:ಈ ಡೌವ್‌ಗಳನ್ನು ಬಿಟ್ಟು ಮನೆ ಕಡೆ ಹೋಗೋದು ಒಳ್ಳೆಯದು: ಚೈತ್ರಾಗೆ ರಜತ್ ಟಾಂಗ್

ನಿಮ್ಮ ಭಾವನೆಗಳನ್ನು ಜವಾಬ್ದಾರಿಯುತವಾಗಿ ವ್ಯಕ್ತಪಡಿಸಬೇಕು ಎಂದು ನಾನು ನನ್ನ ಅಭಿಮಾನಿಗಳಿಗೆ ಮನವಿ ಮಾಡುತ್ತೇನೆ. ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಯಾವುದೇ ರೀತಿಯ ಇನ್ನೊಬ್ಬರಿಗೆ ನೋವು ಆಗುವ ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಬೇಡಿ ಎಂದು ಅಲ್ಲು ಅರ್ಜುನ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಫೇಕ್ ಐಡಿ ಹಾಗೂ ಫೇಕ್ ಸೋಷಿಯಲ್ ಮೀಡಿಯಾ ಖಾತೆಗಳನ್ನು ಬಳಸಿ ನನ್ನ ಅಭಿಮಾನಿಗಳು ಎಂದು ಹೇಳುತ್ತಾ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅಂತಹ ಪೋಸ್ಟ್‌ಗಳನ್ನು ಮಾಡಬೇಡಿ ಎಂದು ಅಭಿಮಾನಿಗಳಿಗೆ ಕೇಳಿಕೊಳ್ಳುತ್ತೇನೆ ಎಂದು ಅಲ್ಲು ಅರ್ಜುನ್ ಎಂದಿದ್ದಾರೆ.

ಅಂದಹಾಗೆ, ಡಿ.4ರಂದು ‘ಪುಷ್ಪ 2’ ಪ್ರದರ್ಶನಕ್ಕೆ ಅಲ್ಲು ಅರ್ಜುನ್ ಪ್ರಿಮಿಯರ್ ಶೋ ನೋಡಲು ಬಂದ ವೇಳೆ, ಕಾಲ್ತುಳಿತದಿಂದ ಮಹಿಳೆಯೊಬ್ಬರು ಸಾವನಪ್ಪಿದ್ದರು. ಇದಕ್ಕೆ ಅಲ್ಲು ಅರ್ಜುನ್ ಅವರೇ ಕಾರಣ ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಆರೋಪಿಸಿದ್ದರು. ಈ ಬೆನ್ನಲ್ಲೇ ಕಿಡಿಗೇಡಿಗಳ ಫೇಕ್ ಐಡಿ ಮತ್ತು ಪ್ರೊಪೈಲ್‌ಗಳ ಕ್ರಿಯೇಟ್ ಮಾಡಿರುವ ಹಿನ್ನೆಲೆ ಅಲ್ಲು ಅರ್ಜುನ್ ರಿಯಾಕ್ಟ್ ಮಾಡಿದ್ದಾರೆ.

ಇನ್ನೂ ಇದೇ ಡಿ.5ರಂದು ಬಹುಭಾಷೆಗಳಲ್ಲಿ ‘ಪುಷ್ಪ 2’ ಸಿನಿಮಾ ರಿಲೀಸ್ ಆಗಿತ್ತು. ಅಲ್ಲು ಅರ್ಜುನ್ ಜೊತೆ ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಡಾಲಿ, ತಾರಕ್ ಪೊನ್ನಪ್ಪ ನಟಿಸಿದ್ದಾರೆ.