ಟೂತ್ ಬ್ರಷ್ ಮೇಲೆ ಬಾಸ್ಕೆಟ್ ಬಾಲ್ ಸ್ಪಿನ್ ಮಾಡಿ ವಿಶ್ವ ದಾಖಲೆ : ವಿಡಿಯೋ ನೋಡಿ

ಧರ್ಮಕೋಟ್: ಬೆರಳಿನ ಮೇಲೆ ಬ್ಯಾಸ್ಕೆಟ್ ಬಾಲ್ ತಿರುಗಿಸಬಹುದು. ಆದ್ರೆ ಬಾಯಲ್ಲಿ ಇಟ್ಟುಕೊಂಡು ಬ್ಯಾಸ್ಕೆಟ್ ಬಾಲ್ ತಿರುಗಿಸೋದು, ಅದ್ರಲ್ಲೂ ಟೂತ್ ಬ್ರಷ್ ಮೇಲೆ ಸುತ್ತಿಸುವುದು ಸುಲಭದ ಮಾತಲ್ಲ. ಆದ್ರೆ ಇಲ್ಲೊಬ್ಬ ಭಾರತೀಯ ವ್ಯಕ್ತಿ ಬಾಯಲ್ಲಿ ಟೂತ್ ಬ್ರಷ್ ಇರಿಸಿಕೊಂಡು ಅದರ ಮೇಲೆ ಬ್ಯಾಸ್ಕೆಟ್ ಬಾಲ್ ತಿರುಗಿಸಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಹೌದು. ಪಂಜಾಬ್ ನಿವಾಸಿಯಾದ 25 ವರ್ಷದ ಯುವಕ ಸಂದೀಪ್ ಸಿಂಗ್ ತನ್ನ ವಿಶಿಷ್ಟ ಕೌಶಲ್ಯದಿಂದ ಇಂತಹದ್ದೊಂದು ಸಾಧನೆ ಮಾಡಿದ್ದಾರೆ. ಬಾಯಲ್ಲಿ ಟೂತ್ ಬ್ರಷ್ ಇರಿಸಿಕೊಂಡು ಅದರ ಮೇಲೆ 53 ಸೆಕೆಂಡ್‍ಗಳ ಕಾಲ ಬ್ಯಾಸ್ಕೆಟ್ ಬಾಲ್ ಸ್ಪಿನ್ ಮಾಡೋ ಮೂಲಕ ಟೂತ್ ಬ್ರಷ್ ಮೇಲೆ ದೀರ್ಘ ಅವಧಿಯವರೆಗೆ ಬ್ಯಾಸ್ಕೆಟ್ ಬಾಲ್ ಸ್ಪಿನ್ ಮಾಡಿದ ದಾಖಲೆ ಮುರಿದಿದ್ದಾರೆ.

ಇವರು ಏಪ್ರಿಲ್ 8ರಂದು ಧರ್ಮಕೋಟ್‍ನಲ್ಲಿ ಪ್ರೇಕ್ಷಕರ ಮುಂದೆ ಟೂತ್‍ಬ್ರಷ್ ಮೇಲೆ ಬ್ಯಾಸ್ಕೆಟ್ ಬಾಲ್ ತಿರುಗಿಸಿ ಪ್ರದರ್ಶನ ನೀಡಿದ್ರು. ಇದರ ವಿಡಿಯೋವನ್ನ ಗಿನ್ನಿಸ್ ವಿಶ್ವ ದಾಖಲೆಯವರು ಬುಧವಾರದಂದು ಯೂಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಿದ್ದಾರೆ.

ಮೊದಲಿಗೆ ಸಂದೀಪ್ ತಮ್ಮ ಬೆರಳಿನ ಮೇಲೆ ಬ್ಯಾಸ್ಕೆಟ್ ಬಾಲ್ ತಿರುಗಿಸಿ ನಂತರ ಅದನ್ನು ಟೂತ್ ಬ್ರಷ್ ಮೇಲೆ ಇರಿಸಿಕೊಂಡು ಮತ್ತೆ ತಿರುಗಿಸಿದ್ದಾರೆ. ಬಳಿಕ ಟೂತ್ ಬ್ರಷ್ ಬಾಯಲ್ಲಿ ಇಟ್ಟುಕೊಂಡು ತಲೆಯನ್ನು ಪಕ್ಕಕ್ಕೆ ವಾಲಿಸಿಕೊಂಡು ಸ್ಪಿನ್ ಮಾಡೋದನ್ನ ವಿಡಿಯೋದಲ್ಲಿ ನೋಡಬಹುದು. ಸಂದೀಪ್ ಅವರು 53 ಸೆಕೆಂಡ್‍ಗಳ ಕಾಲ ಕೈಯ್ಯಲ್ಲಿ ಮುಟ್ಟದೇ ಬಾಯಲ್ಲೇ ಬ್ಯಾಸ್ಕೆಟ್ ಬಾಲನ್ನ ಸ್ಪಿನ್ ಮಾಡಿದ್ದಾರೆ. ಈ ಹಿಂದೆ ಅವರು ಮಾಡಿದ್ದ ದಾಖಲೆಗಿಂತ 6.84 ಸೆಕೆಂಡ್‍ನಷ್ಟು ಕಾಲ ಹೆಚ್ಚಿಗೆ ಸ್ಪಿನ್ ಮಾಡಿ ದಾಖಲೆ ಮುರಿದಿದ್ದಾರೆ.

ವಿಶ್ವ ದಾಖಲೆ ಮುರಿಯುವುದು ನನ್ನ ಕನಸಾಗಿತ್ತು ಎಂದು ಸಂದೀಪ್ ಹೇಳಿದ್ದಾರೆ.

 

 

Comments

Leave a Reply

Your email address will not be published. Required fields are marked *