ಕಾಗ್ರೆಸ್, ಆಪ್ ಅಪರಾಧದ ಪಾಲುದಾರರು: ಮೋದಿ

ಚಂಡೀಗಢ: ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷಗಳು ಅಪರಾಧದ ಪಾಲುದಾರರು ಎಂದು ಪ್ರಧಾನಿ ನರೇಂದ್ರ ಮೋದಿ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಎಎಪಿ ಕಾಂಗ್ರೆಸ್‍ನ ಫೋಟೋಕಾಪಿಯಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಸೇರಿದಂತೆ ಸೇನೆಯಲ್ಲಿ ಏನನ್ನಾದರೂ ಸಾಧಿಸದರೂ ಆ ಎರಡು ಪಕ್ಷಗಳಿಗೆ ಸಂತೋಷವಾಗುವುದಿಲ್ಲ ಎಂದ ಅವರು ಒಂದು ಪಕ್ಷ ಪಂಜಾಬ್‍ನ್ನು ಲೂಟಿ ಮಾಡಿದರೆ ಮತ್ತೊಂದು ಪಕ್ಷ ದೆಹಲಿಯಲ್ಲಿ ಭ್ರಷ್ಟಾಚಾರ ಮಾಡುತ್ತಿದೆ ಎಂದು ಕಿಡಿಕಾರಿದರು.

2016ರಲ್ಲಿ ಪಠಾಣ್‍ಕೋಟ್ ದಾಳಿಯಲ್ಲಿ ಹುತಾತ್ಮರಾದ ಯೋಧರ ತ್ಯಾಗವನ್ನು ಕಾಂಗ್ರೆಸ್ ಅವಮಾನಿಸಿದೆ. ಕಾಂಗ್ರೆಸ್ ನಾಯಕರು ಸರ್ಕಾರವನ್ನು, ಪಂಜಾಬ್‍ನ ಜನತೆಯನ್ನು ಹಾಗೂ ನಮ್ಮ ಸೈನ್ಯದ ಶೌರ್ಯದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಸೈನಿಕರ ತ್ಯಾಗವನ್ನು ಅವಮಾನಿಸಿದ್ದಾರೆ. 2019ರಲ್ಲಿ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯ ವಾರ್ಷಿಕೋತ್ಸವದ ಸಂದರ್ಭದಲ್ಲಿಯೂ ಕಾಂಗ್ರೆಸ್ ಅದನ್ನೇ ಮಾಡಿದೆ. ಪುಲ್ವಾಮಾ ವಾರ್ಷಿಕೋತ್ಸವದಂದು ಸಹ ಅವರು ತಮ್ಮ ಬುದ್ಧಿಯನ್ನು ಮುಂದುವರಿಸಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಯುಪಿ, ಬಿಹಾರದ ಜನತೆಗೆ ಪಂಜಾಬ್ ಪ್ರವೇಶಿಸಲು ಬಿಡಬೇಡಿ: ಚನ್ನಿ ವಿರುದ್ಧ ಬಿಜೆಪಿ, ಆಪ್ ಕೆಂಡ

2019 ಫೆಬ್ರವರಿ 14ರಂದು, ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ಗುಂಪು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‍ಪಿಎಫ್‍ನ ಬೆಂಗಾವಲು ಪಡೆ ಮೇಲೆ ದಾಳಿ ಮಾಡಿ 40 ಪಡೆಯ ಸಿಬ್ಬಂದಿ ಹುತಾತ್ಮರಾಗಿದ್ದರು. ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತೀಯ ಪಡೆಗಳು ನಡೆಸಿದ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸರ್ಜಿಕಲ್ ಸ್ಟ್ರೈಕ್‍ನ ಪುರಾವೆಯನ್ನು ನೀಡಲು ಕೇಳಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿಯಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಇದನ್ನೂ ಓದಿ: NSA ಅಜಿತ್ ದೋವಲ್ ನಿವಾಸಕ್ಕೆ ಅಕ್ರಮ ಪ್ರವೇಶ – ವ್ಯಕ್ತಿ ಬಂಧನ

Comments

Leave a Reply

Your email address will not be published. Required fields are marked *