ಸೂಪರ್ ಹೀರೋ ರೂಪತಾಳಿದ ಚರಣ್‍ಜಿತ್ ಸಿಂಗ್ ಚನ್ನಿ

ಚಂಡೀಗಢ: ಪಂಜಾಬ್‍ನಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಚನ್ನಿ ಸೂಪರ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ.

ಚರಣ್‍ಜಿತ್ ಸಿಂಗ್ ಸೂಪರ್ ಹೀರೋ ಆಗಿ ಕಾಣಿಸಿಕೊಂಡಿರುವ ವೀಡಿಯೋವನ್ನು ಪಂಜಾಬ್ ಕಾಂಗ್ರೆಸ್ ಟ್ಟಿಟ್ಟರ್‌ನಲ್ಲಿ ಟ್ವೀಟ್ ಮಾಡಿದೆ. ಅವೆಂಜರ್ಸ್‍ನಲ್ಲಿ ಕಾಣುವಂತೆ ಚನ್ನಿ, ರಾಹುಲ್ ಗಾಂಧಿ,  ನವಜೋತ್ ಸಿಂಗ್ ಸಿಧು, ನರೇಂದ್ರ ಮೋದಿ, ಕೇಜ್ರಿವಾಲ್ ಸೇರಿದಂತೆ ಹಲವು ನಾಯಕರ ಮುಖಗಳನ್ನು ಈ ವೀಡಿಯೋದಲ್ಲಿ ನೋಡಬಹುದಾಗಿದೆ. ನವಜೋತ್ ಸಿಂಗ್ ಸಿಧು ಜೊತೆಗೆ ಚರಣ್‌ಜಿತ್‌ ಸಿಂಗ್ ಚನ್ನಿಯವರ ಮುಖಗಳನ್ನು ಥಾರ್, ಬ್ರೂಸ್ ಬ್ಯಾನರ್ ಮತ್ತು ಕ್ಯಾಪ್ಟನ್ ಅಮೆರಿಕಾ ಪಾತ್ರಗಳಲ್ಲಿ ತೋರಿಸಲಾಗಿದೆ. ಏಲಿಯನ್ಸ್ ಶತ್ರುಗಳ ಪಾತ್ರಗಳಲ್ಲಿ ನರೇಂದ್ರ ಮೋದಿ, ಕೇಜ್ರಿವಾಲ್, ಅಮರಿಂದರ್‌ ಸಿಂಗ್‌ ಅವರ ಮುಖಗಳನ್ನು ಕಾಣಬಹುದಾಗಿದೆ. ಇದನ್ನೂ ಓದಿ: ರಾಜಕೀಯ ಪಕ್ಷಗಳಿಂದ ಉಚಿತ ಯೋಜನೆಗಳ ಭರವಸೆ – ಸುಪ್ರೀಂಕೋರ್ಟ್‍ಗೆ ಪಿಐಎಲ್ ಸಲ್ಲಿಕೆ, ಚು.ಆಯೋಗಕ್ಕೆ ನೋಟಿಸ್

ಅವೆಂಜರ್ಸ್‍ಗಳ ಫೈಟ್‍ನಲ್ಲಿ ಮೊದಲು ಕಾಂಗ್ರೆಸ್ ನಾಯಕರಮೇಲೆ ದಾಳಿ ನಡೆದಾಗ ಚನ್ನಿ ಚೂಪರ್ ಹೀರೋ ಆಗಿ ಬಂದು ಕಾಪಾಡುವ ಸನ್ನಿವೇಶ ಈ ವೀಡಿಯೋದಲ್ಲಿದೆ. ಈ ಬಗ್ಗೆ ಬರೆದುಕೊಂಡಿರುವ ಪಂಜಾಬ್ ಕಾಂಗ್ರೆಸ್, ಪಂಜಾಬ್ ಮತ್ತು ಇಲ್ಲಿನ ಜನರ ವಿರುದ್ಧ ಹಿಡಿತ ಸಾಧಿಸಲು ಯತ್ನಿಸುವವರ ವಿರುದ್ಧ ಹೋರಾಡಿ ನಮ್ಮ ರಾಜ್ಯವನ್ನು ರಕ್ಷಿಸಲು ನಾವು ಸದಾ ಸಿದ್ಧರಿರುವುದಾಗಿ ಈ ವೀಡಿಯೋದಲ್ಲಿ ತಿಳಿಸಿದೆ. ಇದನ್ನೂ ಓದಿ: ಆತ್ಮನಿರ್ಭರ್ ಭಾರತಕ್ಕೆ ಹೊಸ ರೂಪ ನೀಡಿದ ದೆಹಲಿ ಮೆಟ್ರೋ

ಪಂಜಾಬ್ ಕಾಂಗ್ರೆಸ್ ಒಳಜಗಳದ ಬಳಿಕ ಕ್ಯಾಪ್ಟನ್ ಅಮರಿಂದರ್ ಸಿಂಗ್ ಪಕ್ಷ ತೊರೆದು ಬಳಿಕ ಚನ್ನಿ ಮುಖ್ಯಮಂತ್ರಿ ಪಟ್ಟಕ್ಕೇರಿದ್ದರು. ಇದೀಗ ಮತ್ತೊಮ್ಮೆ ಪಟ್ಟಕ್ಕೇರುವ ಇರಾದೆಯಲ್ಲಿ ಪಂಜಾಬ್ ಕಾಂಗ್ರೆಸ್ ಇದೆ. ಪಂಜಾಬ್‍ನಲ್ಲಿ ಫೆಬ್ರವರಿ 20 ರಂದು ಚುನಾವಣೆ ಆರಂಭವಾಗಲಿದ್ದು, ಮಾರ್ಚ್ 10 ರಂದು ಫಲಿತಾಂಶ ಹೊರಬಿಳಲಿದೆ.

Comments

Leave a Reply

Your email address will not be published. Required fields are marked *