ಶೂಟಿಂಗ್, ತಿಂಡಿ ಬಿಟ್ಟು ಪುನೀತ್‍ಗೆ ಪ್ರಪಂಚವೇ ಗೊತ್ತಿರಲಿಲ್ಲ – ಅಪ್ಪು ನೆನೆದು ಸಹೋದರಿ ಲಕ್ಷ್ಮೀ ಕಣ್ಣೀರು

ಬೆಂಗಳೂರು: ಪುನೀತ್‍ಗೆ ಶೂಟಿಂಗ್, ತಿಂಡಿ ಬಿಟ್ಟು ಪ್ರಪಂಚನೇ ಗೊತ್ತಿರಲಿಲ್ಲ ಅಂತ ತಮ್ಮನನ್ನು ನೆನೆದು ಸಹೋದರಿ ಲಕ್ಷ್ಮೀ ಸಹೋದರಿ ಕಣ್ಣೀರಿಟ್ಟಿದ್ದಾರೆ.

ಪವರ್ ಸ್ಟಾರ್ ನಟ ಪುನೀತ್ ರಾಜ್‍ಕುಮಾರ್ ಸ್ಮರಣೆ ಕಾರ್ಯಕ್ರಮ ಹಿನ್ನೆಲೆ ಅನ್ನದಾನವನ್ನು ಕಾಕ್ಸ್ ಟೌನ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಗಂಗಮ್ಮ ದೇವಸ್ಥಾನ ದೊಡ್ಡಕುಂಟೆ ದೇಗುಲದ ಮುಂದೆ ನಡೆದ ಈ ಕಾರ್ಯಕ್ರದಲ್ಲಿ ಅಪ್ಪು ಅವರ ಹಿರಿಯ ಅಕ್ಕ ಲಕ್ಷ್ಮೀ ಅವರು ಪಾಲ್ಗೊಂಡಿದ್ದರು.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕ್ಷಣ ಕ್ಷಣಕ್ಕೂ ಕಣ್ಣೀರು ಬಿಟ್ಟು ಬೇರೆನು ತೋಚುತ್ತಿಲ್ಲ. ನಾನು ಬೆಳೆಸಿದ ಕೂಸಿಗೆ ಯಾಕೆ ಹೀಗೆ ಆಯ್ತು ಅನಿಸುತ್ತದೆ. ನನಗೂ ಪುನೀತ್‍ಗೂ 12 ವರ್ಷ ವ್ಯತ್ಯಾಸವಿದೆ. ಶೂಟಿಂಗ್, ತಿಂಡಿ ಬಿಟ್ಟು ನನ್ನ ಅಪ್ಪುಗೆ ಪ್ರಪಂಚವೇ ಗೊತ್ತಿರಲಿಲ್ಲ. ಚಿಕ್ಕವನಿದ್ದಾಗ ನನ್ನ ಮದುವೆಯ ಫಂಕ್ಷನ್ ಅಂತ ಸಂಭ್ರಮದಿಂದ ಕುಣಿದಾಡಿದ್ದ. ಅಪ್ಪು ಸಾಮಾಜಿಕ ಕೆಲಸ ಮಾಡಿರುವುದು ಗೊತ್ತೆ ಇಲ್ಲ. ನಮ್ಮ ಅಪ್ಪಾಜಿ ಬಿಟ್ಟರೆ ನಮ್ಮ ಅಮ್ಮನನ್ನು ನೆನಪಿಸಿದ ಸಹೋದರ ನನ್ನ ಅಪ್ಪು ಎಂದು ಕಣ್ಣೀರಿಟ್ಟರು. ಇದನ್ನೂ ಓದಿ: ಅಪ್ಪು ಮಾಡಿದ ಕೆಲಸಗಳನ್ನು ಮುಂದುವರಿಸಬೇಕು ಅಂದ್ಕೊಂಡಿದ್ದೇನೆ: ರಾಘವೇಂದ್ರ ರಾಜ್‍ಕುಮಾರ್

ಅಪ್ಪು ಬಗ್ಗೆ ಟಿವಿಲಿ ಬರುತ್ತಿದೆ ನೋಡಿ ಅಂತ ತ್ಯಾಗಣ್ಣ ಕರೆ ಮಾಡಿದ್ದರು. ಆಗ ಅಶ್ವಿನಿ ಅವರಿಗೆ ಕರೆ ಮಾಡಿದೇ ಅವರು ಫೋನ್ ತೆಗೆದಿಲ್ಲ. ಆಗ ಮಂಗಳಕ್ಕಾಗೆ ಫೋನ್ ಮಾಡಿದೆ. ಅವರು ಅಪ್ಪು ಬಿಟ್ ಹೋದ ಅಂದ್ರು. ಏನ್ ಹೇಳ್ತಾ ಇದ್ದಿಯಾ ನೀನು ಅಂದೇ ಅಷ್ಟೇ ಅವತ್ತು ಏನ್ ಆಯ್ತು ಅಂತ ಆಮೇಲೆ ನನಗೆ ಗೊತ್ತೇ ಆಗಲಿಲ್ಲ ಎಂದು ಬೇಸರ ತೋಡಿಕೊಂಡರು.

ಇದೇ ವೇಳೆ ಲಕ್ಷ್ಮೀ ಅವರ ಪತಿ ನಿರ್ಮಾಪಕ ಗೋವಿಂದ್ ಅವರು ಮಾತನಾಡಿ, ಗೋವಿಂದ್ ಮಾಮ.. ಗೋವಿಂದ್ ಮಾಮ.. ಎಂದು ಮುದ್ದು, ಮುದ್ದಾಗಿ ಮಾತನಾಡುತ್ತಿದ್ದ ನಮ್ಮ ಅಪ್ಪುಗೆ ಹೀಗೆ ಆಯ್ತಾಲ್ಲ ಅಂತ ನಂಬುಲು ಆಗುತ್ತಿಲ್ಲ. ಅಪ್ಪು ಫ್ಯಾಮಿಲಿ ಜೊತೆ ನಾವು ಸದಾ ಇರುತ್ತೇವೆ. ಇನ್ನು ಮುಂದೆ ಅವರ ಮನೆಗೆ ಹೆಚ್ಚಾಗಿ ಹೋಗಿ ಬರುತ್ತಿರುತ್ತೇವೆ. ಅವರ ಪತ್ನಿ ಹಾಗೂ ಮಕ್ಕಳಲ್ಲಿ ಅಪ್ಪುವನ್ನು ಕಾಣುತ್ತೇವೆ ಎಂದರು. ಇದನ್ನೂ ಓದಿ: ಸಣ್ಣ ವಯಸ್ಸಿನ ದೊಡ್ಡ ಕಲಾವಿದನನ್ನು ಕಳೆದುಕೊಂಡಿದ್ದೇವೆ: ರಮೇಶ್ ಜಾರಕಿಹೊಳಿ

ಲಾಸ್ಟ್ ಟೈಮ್ ಅಪ್ಪು ನೋಡಿದಾಗ ಅಪ್ಪಾಜಿ ನೋಡಿದಂತೆ ಆಯ್ತು. ಮದುವೆ ಸಮಾರಂಭವೊಂದಕ್ಕೆ ಹೋಗಿದ್ವಿ ಅಲ್ಲಿಗೆ ಬಂದ ಅಪ್ಪು ವೈಟ್ ಪಂಚೆ, ವೈಟ್ ಶರ್ಟ್ ಹಾಕಿದ್ದ. ಆಗ ಏನ್ ಅಪ್ಪು ಅಪ್ಪಾಜಿ ತರ ಕಾಣ್ತಾ ಇದ್ದಿಯಾ ಮನೆಗೆ ಹೋಗಿ ದೃಷ್ಟಿ ತೆಗೆಸಿಕೊ ಅಂದೆ. ಮಾಮ ಇದು ಜಾಹೀರಾತು ಮಾಡಿದ್ದೆ. ಆಗ ತೆಗೆದುಕೊಂಡಿದ್ದು ಅಂತ ಅಪ್ಪು ಹೇಳಿದ್ದ. ಆ ಮಾತು ಈಗಲೂ ಕಿವಿಲಿ ಕೇಳುತ್ತಿದೆ. ಅಪ್ಪು ಸಮಾಜಕ್ಕೆ ಇಷ್ಟೆಲ್ಲಾ ಮಾಡಿದ ಅಂತ ಗೊತ್ತಿರಲಿಲ್ಲ. ಯಾರಿಗೂ ಹೇಳಿಬೇಡಿ ಅಂತ ಹೇಳಿ ಅಪ್ಪು ಸಹಾಯ ಮಾಡುತ್ತಿದ್ದ ಎಂದು ಹೇಳಿದರು.

Comments

Leave a Reply

Your email address will not be published. Required fields are marked *