ಅಪ್ಪು ಆಸೆ ಕೊನೆಗೂ ಈಡೇರಲೇ ಇಲ್ಲ – ಖ್ಯಾತ ನಟನ ಬಗ್ಗೆ ಪುನೀತ್ ಮಾತು

PUNEET RAJKUMAR

ಬೆಂಗಳೂರು: ಹೃದಯಾಘಾತದಿಂದ ನಟ ಪುನೀತ್ ರಾಜ್‍ಕುಮಾರ್ ನಿಧನರಾದ ಸುದ್ದಿ ಕನ್ನಡ ಚಿತ್ರರಂಗ ಹಾಗೂ ಅಭಿಮಾನಿಗಳಿಗೆ ನಿಜಕ್ಕೂ ಆಘಾತಕಾರಿ ವಿಷಯವಾಗಿದೆ. ಪುನೀತ್ ನಿಧನಕ್ಕೆ ಕನ್ನಡ ಚಿತ್ರರಂಗದ ನಟ-ನಟಿಯರು ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ಸೂಚಿಸಿದ್ದಾರೆ. ಚಿತ್ರರಂಗದಲ್ಲಿ ತನ್ನ ಮಾರ್ಗದರ್ಶಕ ಅಪ್ಪು ನಿಧನಕ್ಕೆ ಸಂತಾಪ ಸೂಚಿಸಿರುವ ನಟ ದಾನಿಶ್ ಸೇಠ್ ಅವರು, ಪುನೀತ್ ರಾಜ್‍ಕುಮಾರ್ ಅವರ ಕೊನೆಗೂ ಈಡೇರದ ಒಂದು ಆಸೆಯ ಕುರಿತು ಇನ್‍ಸ್ಟಾ ಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

DANISH SAIT

“ನಾನು ಛಿದ್ರಗೊಂಡಿದ್ದೇನೆ, ಹೃದಯ ಚೂರಾಗಿ ಹೋಗಿದೆ. ನನ್ನ ಬಾಯಲ್ಲಿ ಪದಗಳೇ ಹೊರಡದಾಗಿದೆ” ಎಂದು ದಾನಿಶ್ ನೋವಿನಿಂದ ಇನ್‍ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

INSTA

ನನ್ನ ಪುನೀತ್ ಅಣ್ಣ ಇನ್ನಿಲ್ಲ, ಆತ ವಿಶ್ವದಲ್ಲೇ ಒಬ್ಬ ಅತ್ಯುತ್ತಮ ಮಾನವೀಯ ವ್ಯಕ್ತಿ ಎಂದು ಸ್ಮರಿಸಿದ್ದಾರೆ. ಇದನ್ನೂ ಓದಿ: 30 ವರ್ಷದ ಒಡನಾಟ ಹೇಗೆ ಮರೆಯಲಿ: ಜಗ್ಗೇಶ್ ಕಣ್ಣೀರು

ಪುನೀತ್ ರಾಜ್‍ಕುಮಾರ್ ಅವರ ಪಿಆರ್‍ಕೆ ಪ್ರೊಡಕ್ಷನ್‍ನ ಬೆಂಬಲದೊಂದಿಗೆ ಫ್ರೆಂಚ್ ಬಿರಿಯಾನಿ ಕಳೆದ ವರ್ಷ ಜುಲೈನಲ್ಲಿ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಬಿಡುಗಡೆಯಾಯಿತು. ಪುನೀತ್ ರಾಜ್‍ಕುಮಾರ್ ಒಮ್ಮೆ ಜೆಫ್ ಬೆಜೋಸ್ ಜೊತೆ ಅಮೆಜಾನ್ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಇದು ಸಿನಿಮಾ ತಾರೆಯರ ಗ್ಯಾಲಕ್ಸಿಯೊಂದಿಗಿನ ಕಾರ್ಯಕ್ರಮವಾಗಿದ್ದರಿಂದ ಎಲ್ಲರೂ ಪರಸ್ಪರ ಭೇಟಿಯಾಗುವುದು ಹಾಗೂ ಜೆಫ್ ಬೆಜೋಸ್ ಅವರೊಂದಿಗೆ ಫೋಟೊ ಕ್ಲಿಕ್ಕಿಸಿಕೊಳ್ಳುವಲ್ಲಿ ನಿರತರಾಗಿದ್ದರು.

PANKAJ TRIPATHI

ಆದರೆ, ಆ ಸ್ಥಳದಲ್ಲಿ ಪುನೀತ್ ರಾಜ್‍ಕುಮಾರ್ ಅವರು ಎಲ್ಲರಿಗಿಂತ ಭಿನ್ನವಾಗಿ ಕಾಣಿಸಿಕೊಂಡರು. ಆಗ ಅಮೆಜಾನ್ ಪ್ರೈಮ್ ವಿಡಿಯೊ ತಂಡ ಪುನೀತ್ ಅವರ ಬಳಿಗೆ ಹೋಗಿ, “ಅಪ್ಪು, ನೀವು ಯಾಕೆ ಯಾರೊಂದಿಗೂ ಫೋಟೊ ತೆಗೆದುಕೊಳ್ಳುತ್ತಿಲ್ಲ? ಎಲ್ಲರಿಂದಲೂ ದೂರ ಹೋಗಿ ಸುಮ್ಮನೆ ಯಾಕೆ ನಿಂತಿದ್ದೀರಿ? ಯಾರ ಹೆಸರನ್ನಾದರೂ ಹೇಳಿ ಅವರನ್ನು ನಿಮ್ಮ ಬಳಿಗೆ ಫೋಟೊ ತೆಗೆಸಿಕೊಳ್ಳಲು ಕರೆತರುತ್ತೇವೆ” ಎಂದು ಕೇಳಿತಂತೆ. ಆಗ ಪುನೀತ್ ಅವರು ನಸು ನಗುತ್ತಲೇ, “ನಿಜವಾಗಿಯೂ? ನಾನು ನಟ ಪಂಕಜ್ ತ್ರಿಪಾಠಿ ಅವರನ್ನು ಭೇಟಿಯಾಗಬೇಕು” ಎಂದು ಮನದಾಸೆ ವ್ಯಕ್ತಪಡಿಸಿದ್ದರಂತೆ.  ಇದನ್ನೂ ಓದಿ: ಅಪ್ಪು ಕುಟುಂಬವನ್ನು ವೈಯಕ್ತಿಕವಾಗಿ ಭೇಟಿ ಮಾಡುತ್ತೇನೆ: ರಮ್ಯಾ

ಸಿನಿಮಾರಂಗದಲ್ಲಿ ನಟ ಪಂಕಜ್ ತ್ರಿಪಾಠಿ ಇಂದು ಎಲ್ಲರಿಗೂ ಚಿರಪರಿಚಿತ. ಆದರೆ 2012ರಲ್ಲಿ ತೆರೆಕಂಡ “ಗ್ಯಾಂಗ್ಸ್ ಆಫ್ ವಸ್ಸೆಯ್‍ಪುರ” ಸಿನಿಮಾಗೂ ಮುಂಚೆ ತಾನು ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಸಾಕಷ್ಟು ಹೋರಾಟ ನಡೆಸಿದ್ದರು ಎಂಬುದು ಪುನೀತ್ ಅವರ ಅಭಿಪ್ರಾಯವಾಗಿತ್ತು.

PUNEET

“ನನ್ನ ಅಪ್ಪು ಅಣ್ಣ ಯಾವಾಗಲೂ ಕಿಕ್ಕಿರಿದ ಕೋಣೆಯಲ್ಲಿ ಪ್ರತಿಭೆಯನ್ನು ಗುರುತಿಸುತ್ತಿದ್ದರು” ಸೇಠ್ ಸ್ಮರಿಸಿದ್ದಾರೆ.

Comments

Leave a Reply

Your email address will not be published. Required fields are marked *