ಕರ್ನಾಟಕ ರತ್ನ ಅಪ್ಪು ಅಗಲಿ ನಾಳೆಗೆ 1 ತಿಂಗಳು- ಸಮಾಧಿಗೆ ಕುಟುಂಬಸ್ಥರಿಂದ ಪೂಜೆ

ಬೆಂಗಳೂರು: ಕರ್ನಾಟಕ ರತ್ನ, ಅಪರಂಜಿ ಅಪ್ಪು ಹಠಾತ್ ಅಗಲಿಕೆಗೆ ನಾಳೆಗೆ ಒಂದು ತಿಂಗಳು. ಒಂದು ಮಾಸ ಕಳೆದೋಗಿದ್ದರೂ ಕಣ್ಣೀರು ಬತ್ತುತ್ತಿಲ್ಲ. ಆಗುವ ಕಾರ್ಯ ಆಗಬೇಕಾದ ಕಾರಣ ದೊಡ್ಮನೆ ಕುಟುಂಬ ಪ್ರೀತಿಯ ಅಪ್ಪುವಿನ ತಿಂಗಳ ಪೂಜೆಗೆ ಸಿದ್ಧವಾಗುತ್ತಿದೆ. ಸದಾಶಿವನಗರ ಅಪ್ಪು ನಿವಾಸದಲ್ಲಿ ತಿಂಗಳ ಪೂಜೆ ನಡೆಯಲಿದೆ. ಹಾಗೆಯೇ ದೊಡ್ಮನೆ ಕುಟುಂಬ ಶಿವಣ್ಣ, ರಾಘಣ್ಣ ಸೇರಿದಂತೆ ಕುಟುಂಬಸ್ಥರು ಕಂಠೀರವ ಸ್ಟುಡಿಯೋಗೆ ತೆರಳಿ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ.

ಅಪ್ಪು ಅಂದ್ರೇನೆ ಎಲ್ಲರಿಗೂ ಅಚ್ಚುಮೆಚ್ಚು. ಸಿನಿಮಾರಂಗಕ್ಕಷ್ಟೇ ಅಲ್ಲ, ಕಿರುತೆರೆ ಜೊತೆಯಲ್ಲೂ ಅವರಿಗೆ ಒಳ್ಳೆಯ ನಂಟಿತ್ತು. ಹೀಗಾಗಿ ಕಿರುತೆರೆ ಅಸೋಸಿಯೇಷನ್ ವತಿಯಿಂದ, ಅಪ್ಪು ಅಮರ ಎಂಬ ಕಾರ್ಯಕ್ರಮ ನಡೆಸಿದ್ರು. ಕಿರಿತೆರೆಯ ಬಹುತೇಕ ಕಲಾವಿದರು ಭಾಗಿಯಾಗಿದ್ದರು. ಜಯನಗರದ ನ್ಯಾಷನಲ್ ಕಾಲೇಜ್‍ನ ಎಚ್‍ಎನ್ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಪ್ಪು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಇದನ್ನೂ ಓದಿ: ಕಟೀಲ್ ಅಸಂಬದ್ಧ ಹೇಳಿಕೆ ನೀಡ್ತಾನೆ: ಏಕವಚನದಲ್ಲಿ ಸತೀಶ್ ಜಾರಕಿಹೊಳಿ ವಾಗ್ದಾಳಿ

ಅಪ್ಪು ಬಾಲ್ಯದ ಚಿತ್ರಗಳಾದ ಬೆಟ್ಟದ ಹೂವು, ಭಕ್ತಪ್ರಹ್ಲಾದ, ಎರಡು ನಕ್ಷತ್ರಗಳು, ಭಾಗ್ಯವಂತರು ಚಿತ್ರದ ದೃಶ್ಯಗಳನ್ನು ಮರುಸೃಷ್ಟಿ ಮಾಡಲಾಯಿತು. ಈ ವೇಳೆ ಅಪ್ಪು ನೆನೆದ ಸಹೋದರಿ ಲಕ್ಷ್ಮಿ ಮತ್ತು ರಾಘಣ್ಣ ಭಾವುಕರಾದರು. ರಾಘಣ್ಣ ಮಾತಾಡಿ ಅಪ್ಪು ಏಕೆ ಇಷ್ಟು ಬೇಗ ಹೋದ 1 ತಿಂಗಳಿಂದ ಎಲ್ಲರಿಗೂ ಪ್ರಶ್ನೆಯಾಗಿದೆ. ಕೋಟ್ಯಾಧಿಪತಿ ಆರಂಭದ ವೇಳೆ ನನಗೆ ಭಯವಾಗುತ್ತೆ ಕಾರ್ಯಕ್ರಮ ಬಿಟ್ಟುಬಿಡ್ತಿನಿ ಅಂತಾ ಹೇಳಿದ್ದ. ಅಪ್ಪು ಹೆಚ್ಚು ಖ್ಯಾತಿ ಟಿವಿಯೂ ಕಾರಣ. ಅಪ್ಪು ಮ್ಯಾರಥಾನ್ ಓಡಬೇಕಿದ್ದವನು 100 ಮೀ ರೇಸ್ ಗೆ ಎಲ್ಲವನ್ನ ಮುಗಿಸಬಿಟ್ಟ. ಅಲ್ಲದೆ, ಕೋಟ್ಯಂತರ ದುಡ್ಡು, ಕಾರು ಇದ್ದರು ಎಕ್ಸಟ್ರಾ 5 ನಿಮಿಷ ಹೆಚ್ಚಾಗಿ ಇರಲಿಲ್ಲ. ಆಂಬ್ಯುಲೇನ್ಸ್ ಕರೆಸಿದ್ರೆ ಲೇಟ್ ಆಗುತ್ತೆ ಅಂತಾ ಕಾರಲ್ಲಿ ಹೊರಟಿದ್ವಿ. ಅಂಬ್ಯುಲೇನ್ಸ್ ಡಿಜಿಟಲ್ ಕಾರಣ ಆಗಬೇಕು. ಹಂದಿಯಾಗಿ ಬದುಕುವ ಬದಲು ಕೆಲವು ವರ್ಷ ನಂದಿಯಾಗಿ ಬದುಕಬೇಕು ಅಂತಾ ತೋರಿಸಿದ್ದಾನೆ. ಈಗಾಗಲೇ ಮತ್ತೊಂದು ಕಡೆ ಅಪ್ಪು ಹುಟ್ಟಿದ್ದಾನೆ ಅಂತ ಅನ್ನಿಸುತ್ತಿದೆ ಎಂದಿದ್ದಾರೆ.

Comments

Leave a Reply

Your email address will not be published. Required fields are marked *