ಅಪ್ಪುನಂತ ತಮ್ಮನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ: ಶಿವಣ್ಣ ಭಾವುಕ

– ಅಪ್ಪು ಸಮಾಜ ಸೇವೆಯಲ್ಲಿ ತೊಡಿಗಿದ್ದು ನನಗೆ ಗೊತ್ತಿರಲಿಲ್ಲ
– ಯಾರೂ ಆತುರಪಡಬೇಡಿ

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಅವರ ಸ್ಮರಣಾರ್ಥಕವಾಗಿ ಅನ್ನಸಂತರ್ಪಣೆಯನ್ನು ಅರಮನೆ ಮೈದಾನದಲ್ಲಿ ಮಾಡಲಾಗುತ್ತಿದೆ. ಲಕ್ಷಾಂತರ ಅಭಿಮಾನಿಗಳು ಅನ್ನಸಂತರ್ಪಣೆಯಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಶಿವರಾಜ್‍ಕುಮಾರ್ ಅವರು ಅಭಿಮಾನಿಗಳಿಗೆ ಕೈ ಮುಗಿದು ಮನವಿ ಮಾಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹುಷಾರಾಗಿ ಊಟ ಮಾಡಿ ಮನೆಗೆ ಹೋಗಿ. ಯಾರೂ ಆತುರಪಡಬೇಡಿ. ನಿಮ್ಮ ಆಶೀರ್ವಾದ ಪ್ರೀತಿ ಬೇಕು ನಮಗೆ. ಅಪ್ಪು ಹೆಸರಿನಲ್ಲಿ ಒಳ್ಳೆಯ ಕೆಲವನ್ನು ಮಾಡಿ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಅಭಿಮಾನಿಗಳಿಗೆ ಕೈ ಮುಗಿದು ಶಿವರಾಜ್‍ಕುಮಾರ್ ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ಅಪ್ಪು ಆತ್ಮದ ಜೊತೆ ಮಾತಾಡಿದ್ದಾಗಿ ವೀಡಿಯೋ ಅಪ್ಲೋಡ್- ಚಾರ್ಲಿಗೆ ಅಭಿಮಾನಿಗಳು ಕ್ಲಾಸ್

ಅಪ್ಪು ಆಸೆ ನೆರವೇರುತ್ತಿದೆ. ಹೀಗೆ ಅವನ ಆಸೆ ನೆರವೇರಬೇಕು ಎಂದು ದೇವರ ಇಚ್ಛೆ ಇತ್ತು ಅನ್ನಿಸುತ್ತಿದೆ. ಅಭಿಮಾನಿಗಳಿಂದ ನಾವು ಈ ಸ್ಥಾನದಲ್ಲಿ ಇದ್ದೇವೆ. ಅವರಿಂದ ಪಡೆದಿದ್ದನ್ನು ಅವರಿಗೆ ಕೊಡುತ್ತಿದ್ದೇವೆ. ಅಪ್ಪು ಸಮಾಜ ಸೇವೆ ಕಾರ್ಯಗಳಲ್ಲಿ ತೊಡಿದ್ದು, ನನಗೆ ಗೊತ್ತಿರಲಿಲ್ಲ. ನಾವು ಇಂಥಹ ವಿಚಾರಗಳನ್ನು ಮಾತನಾಡುತ್ತಿರಲಿಲ್ಲ. ಕುಟುಂಬದ ಸದಸ್ಯರಿಗೆ ಈ ವಿಚಾರ ಗೊತ್ತಿಲ್ಲ ಎಂದರೆ ಅಪ್ಪು ಈ ವಿಚಾರವಾನ್ನು ಎಷ್ಟು ಸಿಕ್ರೇಟ್ ಆಗಿ ಇಟ್ಟಿರಬೇಕು ಎಂದು ತಿಳಿಯುತ್ತದೆ. ನನಗೆ ಹೆಮ್ಮೆ ಆಗುತ್ತದೆ. ಅಪ್ಪುನಂತ ತಮ್ಮನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ ಎಂದಿದ್ದಾರೆ. ಇದನ್ನೂ ಓದಿ: ಖುದ್ದು ರಕ್ತದಾನ ಮಾಡಿ ಮಾದರಿಯಾದ ನಟ ಶಿವರಾಜ್ ಕುಮಾರ್

ಎಡಗೈಯಲ್ಲಿ ಮಾಡುವ ಸಹಾಯ ಬಲಗೈಗೆ ಗೊತ್ತಾಗಬಾರದು ಎಂದು ಅಪ್ಪಾಜಿ ಹೇಳುತ್ತಿದ್ದರು. ನಾವು ಅದನ್ನು ಫಾಲೋ ಮಾಡುತ್ತಿದ್ದೇವೆ. ಸಮಾಧಾನವಾಗಿ ಅನ್ನಸಂತರ್ಪಣೆಯಲ್ಲಿ ಭಾಗಿಯಾಗಿ, ಮಾಡುವ ಕಾರ್ಯ ಯಾವುದು ಎಂದು ಮನೆಗ ತಿಳಿದಿದೆ. ಪ್ರತಿಯೊಬ್ಬ ಅಭಿಮಾನಿಗಳಿಗೂ ವ್ಯವಸ್ಥೆ ಮಾಡಲಾಗಿದೆ. ನಮ್ಮ ಕೈಲಾದಷ್ಟು ಅನ್ನಸಂತರ್ಪಣೆ ಮಾಡುತ್ತಿದ್ದೇವೆ. ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *