ಅಪ್ಪು ಜೊತೆಗಿನ ಲಾಸ್ಟ್ ಸೆಲ್ಫಿ ಶೇರ್ ಮಾಡಿದ ರಾಘಣ್ಣ

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್‍ಕುಮಾರ್ ಅವರನ್ನು ಕಳೆದುಕೊಂಡು 5 ದಿನವಾಗಿದೆ. ಅಪ್ಪು ಇಲ್ಲದ ದಿನ, ಮತ್ತು ಅವರ ಜೊತೆಗೆ ತೆಗೆದುಕೊಂಡಿರುವ ಕೊನೆಯ ಫೋಟೋವನ್ನು ರಾಘವೇಂದ್ರ ರಾಜ್‍ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಪುನೀತ್ ರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಜೊತೆಗೆ ತೆಗೆದುಕೊಂಡಂತಹ ಸೆಲ್ಫಿ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಜೊತೆಗೆ ಭಾವುಕ ನುಡಿಗಳನ್ನು ಕೂಡ ಬರೆದುಕೊಂಡಿದ್ದಾರೆ ರಾಘವೇಂದ್ರ ರಾಜಕುಮಾರ್. ಇತ್ತೀಚಿಗೆ ನನಗೆ ದಾದಾಸಾಹೇಬ್ ಫಾಲ್ಕೆ ಎಂಎಸ್‍ಕೆ ಟ್ರಸ್ಟ್ ವತಿಯಿಂದ ಜೀವನ ಸಾಧನೆ ಪ್ರಶಸ್ತಿ ಬಂದಿತ್ತು. ಅದು ಅಪ್ಪುಗೆ ಎಲ್ಲಿಲ್ಲದ ಸಂತಸವನ್ನು ತಂದುಕೊಟ್ಟಿತ್ತು. ನನ್ನನ್ನು ತಕ್ಷಣ ಭೇಟಿ ಮಾಡಿ ರಾಘಣ್ಣ ನೀವು ಕೂಡ ಈ ಮೂರ್ತಿಯ ಹಾಗೆಯೇ ಅಪ್ಪಾಜಿಯವರ ಮೂರ್ತಿಯನ್ನು ಮಾಡಿ ಎಂದಿನಂತೆ ಡಾಕ್ಟರ್ ರಾಜಕುಮಾರ್ ಟ್ರಸ್ಟ್ ವತಿಯಿಂದ ನೀಡುವ ಪ್ರಶಸ್ತಿಯನ್ನು ಇದೇ ರೂಪದಲ್ಲಿ ಮಾಡೋಣ ಎಂದು ಹೇಳಿದನು. ಅಪ್ಪು ನಿನ್ನ ಆಲೋಚನೆಗೆ ನನ್ನದೊಂದು ನಮನ. ಲವ್ ಯು ಮಗನೇ ಎಂದು ರಾಘವೇಂದ್ರ ರಾಜ್‍ಕುಮಾರ್ ಬರೆದುಕೊಂಡು ಅಪ್ಪುನನ್ನು ನೆನಪು ಮಾಡಿಕೊಂಡಿದ್ದಾರೆ. ಇದನ್ನೂ ಓದಿ:  ಅಪ್ಪು ಕೊನೆ ಕ್ಷಣದ ವಿಡಿಯೋ ಲಭ್ಯ

ಅಪ್ಪು ಕಂಡರೆ ಇಡೀ ಕರುನಾಡಿಗೆ ಅಚ್ಚುಮೆಚ್ಚು. ಮನೆಯಲ್ಲೂ ಕೂಡ ಅಪ್ಪು ಎಲ್ಲರ ಮುದ್ದಿನ ಮಗ. ರಾಘವೇಂದ್ರ ರಾಜ್‍ಕುಮಾರ್ ಅವರ ಶಕ್ತಿಯಾಗಿದ್ದರು ಪುನೀತ್ ರಾಜ್‍ಕುಮಾರ್. ಶಿವಣ್ಣಗೂ ಪುನೀತ್ ರಾಜ್‍ಕುಮಾರ್ ಅಷ್ಟೇ ಪ್ರೀತಿ ಇತ್ತು. ಇದ್ದರೆ ಇವರ ರೀತಿ ಸಹೋದರರಿರಬೇಕು ಎಂದು ಎಲ್ಲರೂ ಹೇಳುತ್ತಿದ್ದರು. ಪುನೀತ್ ಸಿನಿಮಾ ರಂಗದಲ್ಲಿಯಾಗಲಿ, ವೈಯಕ್ತಿಕ ಜೀವನದಲ್ಲಿ ಆಗಲಿ ಒಂದು ಸಣ್ಣ ಕಾಂಟ್ರವರ್ಸಿ ಕೂಡ ಮಾಡಿಕೊಂಡವರಲ್ಲ. ಸದಾ ನಗುಮುಖದಿಂದಲೇ ಬಂದವರನ್ನು ಮಾತನಾಡಿಸುತ್ತಿದರು. ಆದರೆ ಇನ್ನೂ ಮುಂದೆ ಆ ಅಪ್ಪು ನಗು ನೆನಪು ಮಾತ್ರ. ಈ ಕಹಿ ಸತ್ಯ ಅರಗಿಸಿಕೊಳ್ಳಲಾಗದಿದ್ದರೂ ಸತ್ಯವೇ. ಇದನ್ನೂ ಓದಿ: ಶಿವಮೊಗ್ಗದಲ್ಲಿ ರಸ್ತೆಗೆ ಪುನೀತ್ ರಾಜ್‍ಕುಮಾರ್ ಹೆಸರಿಟ್ಟ ಸ್ಥಳೀಯರು

Comments

Leave a Reply

Your email address will not be published. Required fields are marked *