‘ಅಪ್ಪು’ ಸವಿನೆನಪು – ನ.9 ರಂದು ಅಭಿಮಾನಿಗಳಿಗೆ ಅನ್ನಸಂತರ್ಪಣೆ

ಬೆಂಗಳೂರು: ಪುನೀತ್ ಸವಿನೆನಪಿನಲ್ಲಿ ನವೆಂಬರ್ 9 ರಂದು ಅರಮನೆ ಮೈದಾನದಲ್ಲಿ ಅಭಿಮಾನಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಪುನೀತ್ ರಾಜ್‍ಕುಮಾರ್ ಓರ್ವ ನಟ ಮಾತ್ರ ಅಲ್ಲ. ರಾಜ್ಯದ ಹಲವರ ಬಾಳು ಬೆಳಗಿದ ಮಹಾನ್ ವ್ಯಕ್ತಿ. ಸಂಕಷ್ಟದಲ್ಲಿ ನೆರವಿನ ಹಸ್ತ ಚಾಚಿದ ಕರುಣಾಮಯಿ. ಸಾವಿರಾರು ಅಭಿಮಾನಿಗಳ ಪಾಲಿನ ಆರಾಧ್ಯ ದೈವ. ಹೀಗಾಗಿ ಪುನೀತ್ ಅಗಲಿಕೆ ಆಘಾತದಿಂದ ಹೊರಬರುವುದಕ್ಕೆ ಸಾಧ್ಯವಾಗದೆ ಅಭಿಮಾನಿಗಳು ಇನ್ನೂ ಕಣ್ಣೀರಿಡುತ್ತಿದ್ದಾರೆ. ಇದನ್ನೂ ಓದಿ: ನೇತ್ರದಾನಕ್ಕೆ ಸ್ಫೂರ್ತಿಯಾದ ” ರಾಜರತ್ನ” – ಅಪ್ಪು ಬಳಿಕ ಹೆಚ್ಚಾಗ್ತಿದೆ ನೇತ್ರದಾನಿಗಳ ಸಂಖ್ಯೆ

ಇದರ ಬೆನ್ನಲ್ಲೇ ಪುನೀತ್ ಸ್ಮರಣಾರ್ಥ ಹಲವು ಕಾರ್ಯಕ್ರಮಗಳು ನಿರ್ಧಾರವಾಗಿವೆ. ಚಿತ್ರರಂಗದಿಂದ ದೊಡ್ಡ ಮಟ್ಟದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಸಿದ್ಧತೆ ನಡೀತಿದೆ. ಇದಕ್ಕೆ ಸರ್ಕಾರವೂ ಕೈಜೋಡಿಸಿದೆ. ಇದೇ ವಿಚಾರವಾಗಿ ಶುಕ್ರವಾರ ಸಿಎಂ ಬೊಮ್ಮಾಯಿ ಪುನೀತ್ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರ ಜೊತೆ ಚರ್ಚೆ ನಡೆಸಿದರು. ಇದೇ 8ರಂದು ಪುನೀತ್ ಪುಣ್ಯತಿಥಿ ಆಚರಿಸಿದರೆ, 9 ರಂದು ಅರಮನೆ ಮೈದಾನದಲ್ಲಿ ಅಭಿಮಾನಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇನ್ನು ನವೆಂಬರ್ 16ರಂದು ಚಲನಚಿತ್ರ ವಾಣಿಜ್ಯ ಮಂಡಳಿ ಪುನೀತ್ ನಮನ ಹೆಸರಿನಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಭದ್ರತೆ ಹಾಗೂ ಸಂಚಾರ ವ್ಯವಸ್ಥೆ ಕಲ್ಪಿಸಲು ಸರ್ಕಾರ ನಿರ್ಧರಿಸಿದೆ. ಇದನ್ನೂ ಓದಿ: ಪತ್ನಿಯ ಎದೆಹಾಲು ಕದ್ದು ಕುಡಿದ ಆಯುಷ್ಮಾನ್ ಖುರಾನಾ

ಪ್ರಮುಖ ರಸ್ತೆ, ಪಾರ್ಕ್‍ಗಳಿಗೆ ಪುನೀತ್ ಹೆಸರಿಡಲು ಅಭಿಮಾನಿಗಳು ಒತ್ತಾಯಿಸಿದ್ದಾರೆ. ಈ ಸಂಬಂಧ ಬಿಬಿಎಂಪಿ ಜೊತೆ ಚರ್ಚಿಸಿ ಸಿಎಂ ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ. ವೆಸ್ಟ್ ಆಫ್ ಕಾರ್ಡ್ ರಸ್ತೆ ಅಥವಾ ಬಳ್ಳಾರಿ ರಸ್ತೆಗೆ ಪುನೀತ್ ಹೆಸರಿಡಲು ಒತ್ತಾಯ ಕೇಳಿ ಬಂದಿದೆ. ಪುನೀತ್ ಹೆಸರಿಡಲು ಪ್ರಮುಖ ಪಾರ್ಕ್, ಕ್ರೀಡಾಂಗಣ, ಮೈದಾನ, ಸರ್ಕಲ್‍ಗಳ ಪಟ್ಟಿಯನ್ನು ಬಿಬಿಎಂಪಿ ಮಾಡಿಕೊಳ್ಳುತ್ತಿದೆ.

Comments

Leave a Reply

Your email address will not be published. Required fields are marked *