ಪುನೀತ್ ಚಿತ್ರಗಳ ಹೆಸರಿನಲ್ಲಿ ಆಮಂತ್ರಣ ಪತ್ರಿಕೆ ರೆಡಿ!

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿಮಾನಿಯೊಬ್ಬರು ತನ್ನ ಮದುವೆಯ ಆಮಂತ್ರಣ ಪತ್ರಿಕೆಯನ್ನು ತನ್ನ ನೆಚ್ಚಿನ ನಟನ ಸಿನಿಮಾ ಹೆಸರುಗಳನ್ನು ಸೇರಿಸಿ ಮಾಡಿಸಿದ್ದಾರೆ.

ನವೀನ್ ತನ್ನ ಮದುವೆಯ ಆಮಂತ್ರಣ ಪತ್ರಿಕೆಯನ್ನು ವಿಶೇಷವಾಗಿ ಪ್ರಿಂಟ್ ಮಾಡಿಸಿದ್ದಾರೆ. ನವೀನ್ ಮೂಲತಃ ಬೆಂಗಳೂರಿನ ಮಾಗಡಿಯವರಾಗಿದ್ದು ಇವರ ಮದುವೆಯ ಆಮಂತ್ರಣ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

https://twitter.com/PuneethOfficial/status/1006216710469218304

 

‘ಆಕಾಶ್’ ವೇ ಚಪ್ಪರ, ‘ಪೃಥ್ವಿ’ ಯೇ ಹಸೆಮಣೆ, ಮದುವೆಯೇ ‘ಮಿಲನ’, ಈ ನವೀನ ‘ಮೈತ್ರಿ’ ಬದುಕಿಗೆ ‘ಹೊಸ ಬೆಳಕು’ ಪ್ರೀತಿ. ‘ಪರಮಾತ್ಮ’ನ ಸ್ಮರಿಸುತ್ತಾ, ನಮ್ಮೆಲ್ಲರ ‘ಅಭಿ’ಮಾನದ ಆಶೀರ್ವಾದ ಬಯಸುತ್ತಿರುವ ‘ಎರಡು ನಕ್ಷತ್ರಗಳು’ ನವೀನ್ ಕುಮಾರ್, ರಶ್ಮಿ ‘ಬಿಂದಾಸ್’ ಆಗಿ ಬನ್ನಿ. ಆರತಕ್ಷತೆಯ ‘ಅಪ್ಪು’ಗೆ ಮೂಹೂರ್ತದ ‘ಪವರ್’ ಎಂದು ಹೀಗೆ ಪುನೀತ್ ಅವರ ಎಲ್ಲ ಸಿನಿಮಾ ಹೆಸರನ್ನು ಬಳಸಿಕೊಂಡು ಆಮಂತ್ರಣ ಪತ್ರಿಕೆ ರೆಡಿ ಮಾಡಿಸಿದ್ದಾರೆ.

ಸದ್ಯ ನವೀನ್ ಅವರ ಮದುವೆಯ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಷ್ಟೇ ಅಲ್ಲದೇ ಟ್ವಿಟ್ಟರಿನಲ್ಲಿ ಪುನೀತ್ ರಾಜ್‍ಕುಮಾರ್ ನವೀನ್ ಹಾಗೂ ರಶ್ಮಿ ಜೋಡಿಗೆ ಶುಭಾಶಯ ಕೋರಿದ್ದಾರೆ. ನವೀನ್ ಹಾಗೂ ರಶ್ಮಿ ಮದುವೆ ಇದೇ ತಿಂಗಳು ಜೂನ್ 17 ಹಾಗೂ 18ರಂದು ನಡೆಯಲಿದೆ.

Comments

Leave a Reply

Your email address will not be published. Required fields are marked *