ತಾನು ಯಾರನ್ನು ಕೊಲ್ಲುತ್ತಿದ್ದೇನೆ ಎಂದು ಸಾವು ಯಾಕೆ ಕೇರ್ ಮಾಡುವುದಿಲ್ಲ: ರಾಮ್ ಗೋಪಾಲ್ ವರ್ಮಾ

– ಸಾವಿಗೆ ತಾರತಮ್ಯ ಇಲ್ಲ, ಯಾರನ್ನು ಬೇಕಾದರೂ ಕೊಲ್ಲುತ್ತದೆ

ಬೆಂಗಳೂರು: ಸ್ಯಾಂಡಲ್‍ವುಡ್‍ನ ಬೆಟ್ಟದ ಹೂ, ನಟ ಪುನೀತ್ ರಾಜ್‍ಕುಮಾರ್ ಅವರ ನಿಧನಕ್ಕೆ ಚಿತ್ರರಂಗ, ಅಭಿಮಾನಿಗಳ ಬಳಗ ಕಂಬನಿ ಮಿಡಿಯುತ್ತಿದ್ದಾರೆ. ಇದೇ ವಿಚಾರವಾಗಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸರಣಿ ಟ್ವೀಟ್ ಮಾಡಿ ಕೆಲವು ವಿಚಾರವನ್ನು ಹಂಚಿಕೊಂಡಿದ್ದಾರೆ.

ರೆಗ್ಯೂಲರ್ ವರ್ಕೌಟ್ ಜೊತೆಗೆ ಆರೋಗ್ಯಕರ ಅಭ್ಯಾಸ ಇಟ್ಟುಕೊಳ್ಳುವುದು ಹಾಗೂ ಸಡನ್ ಸಾವು ಸಂಭವಿಸುವುದರ ನಡುವೆ ಯಾವುದೇ ಸಂಬಂಧ ಇಲ್ಲ ಎಂಬ ಕಟು ಸತ್ಯವು ಪುನೀತ್ ಅವರ ದುರಂತ ನಿಧನದಿಂದ ಬಯಲಾಗಿದೆ. ತಾನು ಯಾರನ್ನು ಕೊಲ್ಲುತ್ತಿದ್ದೇನೆ ಎಂದು ಸಾವು ಯಾಕೆ ಕೇರ್ ಮಾಡುವುದಿಲ್ಲ ದೇವರು ಇರುವುದೇ ಹೌದಾದರೆ ಅವನೇ ಉತ್ತರಿಸಬೇಕು ಎಂದು ಬರೆದುಕೊಂಡು ವರ್ಮಾ ಟ್ವೀಟ್ ಮಾಡಿದ್ದಾರೆ.

ಪುನೀತ್ ರಾಜ್‍ಕುಮಾರ್ ಸಾವು ಈಗಲೂ ಒಂದು ಕೆಟ್ಟ ಕನಸಿನಂತೆ ಅನಿಸುತ್ತಿದೆ. ಅವರ ಆಪ್ತರ ಪರಿಸ್ಥಿತಿ ಏನಾಗಿರಬಹುದು ಅಂತ ಊಹಿಸಲೂ ಸಾಧ್ಯವಾಗುತ್ತಿಲ್ಲ. ಸಾವಿಗೆ ತಾರತಮ್ಯ ಇಲ್ಲ. ಅದು ಯಾರನ್ನು ಬೇಕಾದರೂ ಕೊಲ್ಲುತ್ತದೆ. ನಮ್ಮಲ್ಲಿ ಯಾರಾದರೂ ಯಾವಾಗ ಬೇಕಿದ್ದರೂ ಸಾಯಬಹುದು ಎಂಬುದು ಭಯಾನಕ ಸತ್ಯ. ಬದುಕಿರುವಾಗಲೇ ಫಾಸ್ಟ್ ಫಾರ್ವರ್ಡ್ ಮೋಡ್‍ನಲ್ಲಿ ಜೀವಿಸಬೇಕು ಎಂದು ರಾಮ್ ಗೋಪಾಲ್ ವರ್ಮಾ ಸರಣಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ರಾಜಕುಮಾರನಂತೆ ಬಾಳಬೇಕಿದ್ದ ನನ್ನ ತಮ್ಮ ಇನ್ನಿಲ್ಲ ಅಂತಂದ್ರೆ ನಂಬಲು ಅಸಾಧ್ಯ: ಸುಧಾರಾಣಿ

ಫಿಟ್ನೆಸ್ ಕಾಪಾಡಿಕೊಂಡಿರುವವರಿಗೆ ಈ ರೀತಿ ಸಾವು ಸಂಭವಿಸುವುದಿಲ್ಲ ಎಂದು ಅನೇಕರು ಹೇಳುವುದುಂಟು. ಆದರೆ ಪುನೀತ್ ರಾಜ್‍ಕುಮಾರ್ ನಿಧನದ ಬಳಿಕ ಆ ಮಾತನ್ನು ನಂಬಲಾಗುತ್ತಿಲ್ಲ. ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದ ಬಿಗ್‍ಬಾಸ್ ವಿನ್ನರ್ ಸಿದ್ದಾರ್ಥ್ ಶುಕ್ಲಾ ಕೂಡ ಇದೇ ರೀತಿ ಹೃದಯಾಘಾತದಿಂದ ಇತ್ತೀಚೆಗೆ ನಿಧನರಾಗಿದ್ದು ಈಗ ನೆನಪಾಗುತ್ತಿದೆ. ಇಂದು ಸಂಜೆ ಕಂಠೀರವ ಸೇಡಿಯಂನಲ್ಲಿ ಪುನೀತ್ ರಾಜ್‍ಕುಮಾರ್ ಅವರ ಅಂತ್ಯಕ್ತಿಯೆ ನಡೆಯಲಿದೆ. ಇದನ್ನೂ ಓದಿ:   ಪತಿ ನಿಧನದ ಸುದ್ದಿ ಕೇಳ್ತಿದ್ದಂತೆ ಕಣ್ಣೀರಿಡುತ್ತಲೇ ಮೌನಕ್ಕೆ ಶರಣಾದ ಪತ್ನಿ ಅಶ್ವಿನಿ

Comments

Leave a Reply

Your email address will not be published. Required fields are marked *