ಅಪ್ಪು ಅಗಲಿಕೆ ವಿಚಾರ ಸೋದರತ್ತೆಗೆ ಗೊತ್ತೆ ಇಲ್ಲ

ಚಾಮರಾಜನಗರ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಅಕಾಲಿಕ ನಿಧನಕ್ಕೆ ಇಡೀ ರಾಜ್ಯವೇ ತಮ್ಮ ಮನೆಯ ಸದಸ್ಯನನ್ನೇ ಕಳೆದುಕೊಂಡಿದ್ದೇವೆ ಎನ್ನುವಷ್ಟರ ಮಟ್ಟಿಗೆ ಕಂಬನಿ ಮಿಡಿದಿದೆ. ದೇಶದ ಮೂಲೆ ಮೂಲೆಯಿಂದ ಗಣ್ಯಾತಿಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಆದರೆ ಡಾ.ರಾಜ್‍ಕುಮಾರ್ ಹಿರಿಯ ಜೀವವೊಂದಕ್ಕೆ ಅಪ್ಪು ಅಗಲಿದ ವಿಚಾರವೇ ಗೊತ್ತಿಲ್ಲ.

PUNEET RAJKUMAR

ಆ ಹಿರಿಯ ಜೀವ ಬೇರೆ ಯಾರೂ ಅಲ್ಲ, ಡಾ.ರಾಜ್‍ಕುಮಾರ್ ಅವರ ತಂಗಿ, ಪುನೀತ್ ರಾಜ್‍ಕುಮಾರ್‍ಗೆ ಅತ್ಯಂತ ಪ್ರೀತಿಯ ಸೋದರತ್ತೆಯಾದ 90 ವರ್ಷದ ನಾಗಮ್ಮ. ಸೋದರತ್ತೆ ಎಂದರೆ ಅಪ್ಪುವಿಗೆ ಎಲ್ಲಿಲ್ಲದ ಪ್ರೀತಿ. ಹಾಗೆಯೇ ಡಾ.ರಾಜ್‍ಕುಮಾರ್ ಅವರ ಕಿರಿಯ ಪುತ್ರ ಎಂಬ ಕಾರಣಕ್ಕೆ ಪುನೀತ್ ಅವರನ್ನು ಕಂಡರೆ ನಾಗಮ್ಮ ಅವರಿಗೂ ತುಂಬಾ ವಾತ್ಸಲ್ಯ. ಪುನೀತ್ ರಾಜ್‍ಕುಮಾರ್ ಆಗಾಗ್ಗೆ ತಮಿಳುನಾಡಿನಲ್ಲಿರುವ ಗಾಜನೂರಿನ ಮನೆಗೆ ಹೋಗುತ್ತಿದ್ದುದೇ ತನ್ನ ಪ್ರೀತಿಯ ಸೋದರತ್ತೆ ನಾಗಮ್ಮ ಅವರನ್ನು ನೋಡಲು. ಇದನ್ನೂ ಓದಿ:   ಪತಿ ನಿಧನದ ಸುದ್ದಿ ಕೇಳ್ತಿದ್ದಂತೆ ಕಣ್ಣೀರಿಡುತ್ತಲೇ ಮೌನಕ್ಕೆ ಶರಣಾದ ಪತ್ನಿ ಅಶ್ವಿನಿ

ಇಂತಹ ಸೋದರತ್ತೆಗೆ ಈಗ ಪುನೀತ್ ರಾಜ್‍ಕುಮಾರ್ ನಿಧನ ಹೊಂದಿರುವ ವಿಚಾರವೇ ಗೊತ್ತಿಲ್ಲ. ಸಧ್ಯಕ್ಕೆ ಡಾ.ರಾಜ್ ಕುಟುಂಬದ ಅತ್ಯಂತ ಹಿರಿಯ ಜೀವ ಎನಿಸಿರುವ ನಾಗಮ್ಮ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಒಂದು ವೇಳೆ ಅವರಿಗೆ ಅಪ್ಪು ನಿಧನದ ಸುದ್ದಿ ತಿಳಿದರೆ ಆಘಾತವಾಗುವ ಸಾಧ್ಯತೆಗಳೇ ಹೆಚ್ಚಿರುವುದರಿಂದ ಅವರಿಗೆ ವಿಷಯ ತಿಳಿಯದಂತೆ ಗೌಪ್ಯತೆ ಕಾಪಾಡಲಾಗಿದೆ. ನಾಗಮ್ಮ ಅವರ ಪುತ್ರ ಗೋಪಾಲ್ ತಮ್ಮ ಹೆಂಡತಿ ಹಾಗೂ ಮಗಳನ್ನು ಕರೆದುಕೊಂಡು ನಿನ್ನೆಯೇ ಬೆಂಗಳೂರಿಗೆ ಹೋಗಿದ್ದಾರೆ. ಗಾಜನೂರಿನ ಮನೆಯಲ್ಲಿ ನೀರವ ಮೌನ ಆವರಿಸಿದೆ. ನಾಗಮ್ಮ ಅವರನ್ನು ಸಹಾಯಕಿಯರು ಉಪಚರಿಸುತ್ತಿದ್ದಾರೆ. ಇದನ್ನೂ ಓದಿ: ರಾಜಕುಮಾರನಂತೆ ಬಾಳಬೇಕಿದ್ದ ನನ್ನ ತಮ್ಮ ಇನ್ನಿಲ್ಲ ಅಂತಂದ್ರೆ ನಂಬಲು ಅಸಾಧ್ಯ: ಸುಧಾರಾಣಿ

Comments

Leave a Reply

Your email address will not be published. Required fields are marked *